ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ | ಅಕ್ಟೋಬರ್ 2024: ಈ ತಿಂಗಳು ಉದ್ಯೋಗಿಗಳಿಗೆ ಉತ್ತಮ ಸ್ಥಾನಮಾನ
Published 30 ಸೆಪ್ಟೆಂಬರ್ 2024, 23:30 IST
ಅರುಣ ಪಿ.ಭಟ್ಟ
ಮೇಷ
ವ್ಯಾಪಾರ ವ್ಯವಹಾರದ ವಿಸ್ತರಣೆ ಸಲುವಾಗಿ ಪ್ರಯಾಣ ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಕಾಣಿಸಿಕೊಳ್ಳಬಹುದು. ತಿಂಗಳ ಮಧ್ಯ ಭಾಗದಲ್ಲಿ ಔತಣ ಕೂಟ ಸ್ನೇಹ ಕೂಟಗಳಲ್ಲಿ ಹೆಚ್ಚು ಭಾಗವಹಿಸುವ ಸಾಧ್ಯತೆಗಳಿವೆ. ರಾಜಕಾರಣಿಗಳಿಗೆ ದೊಡ್ಡ ಮಟ್ಟದಲ್ಲಿ ಪ್ರಗತಿ ಆಗಬಹುದು. ವೈಯಕ್ತಿಕ ಸಂಬಂಧದಲ್ಲಿ ಸಂಗಾತಿ ಜತೆಗೆ ಉದ್ವಿಗ್ನ ವಾತಾವರಣ ಇರುತ್ತದೆ. ಇದರಿಂದ ಮಾನಸಿಕವಾಗಿಯೂ ನಿಮಗೆ ಕಿರಿಕಿರಿ ಆಗುತ್ತದೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ವ್ಯಾಪಾರ ವ್ಯವಹಾರಗಳಲ್ಲಿ ಅತ್ಯುತ್ತಮವಾದ ಪ್ರಗತಿಯನ್ನು ಕಾಣಲಿದ್ದೀರಿ. ಹಣಕಾಸು ಸ್ಥಿತಿ ಕೂಡ ಚೆನ್ನಾಗಿರುತ್ತದೆ. ಇದರಿಂದ ಸಂತಸವನ್ನು ಹೊಂದುವಿರಿ. ಶುಭ...09.12.22. ಅಶುಭ..15.20.28.
ವೃಷಭ
ಕೌಟುಂಬಿಕ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿರುವವರು ಆ ಬಗ್ಗೆ ಸೋದರ ಸೋದರಿಯರ ಜತೆ ಚರ್ಚೆ ನಡೆಸಲಿದ್ದೀರಿ. ನಿಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಈ ಚರ್ಚೆಯಿಂದ ಅನುಕೂಲ ಆಗುತ್ತದೆ. ನಿಮ್ಮ ಸಾಮಾಜಿಕ ಹಾಗೂ ರಾಜಕೀಯದ ಬದುಕು ವೃದ್ಧಿಯಾಗುತ್ತಾ ಸಾಗುತ್ತದೆ. ದೈಹಿಕವಾಗಿ ಆಯಾಸ ಅನುಭವಕ್ಕೆ ಬರಲಿದ್ದು, ಇದರಿಂದ ಬೇಸರಕ್ಕೆ ಒಳಗಾಗಲಿದ್ದೀರಿ. ಉಸಿರಾಟದ ಸಮಸ್ಯೆ ಹಾಗೂ ರಕ್ತದೊತ್ತಡದ ಸಮಸ್ಯೆ ಕೂಡ ನಿಮ್ಮನ್ನು ಕಾಡಬಹುದು. ಆದ್ದರಿಂದ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಿ. ತಿಂಗಳ ಮಧ್ಯ ಭಾಗದಲ್ಲಿ ಉದ್ಯೋಗಸ್ಥರಿಗೆ ಪ್ರಗತಿ ಕಾಣುತ್ತದೆ. ಆರೋಗ್ಯದಲ್ಲೂ ಚೇತರಿಕೆ ಕಾಣಿಸಿಕೊಳ್ಳುತ್ತದೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಆದಾಯ ಉತ್ತಮವಾಗುತ್ತದೆ. ಇದರಿಂದ ಹೆಮ್ಮೆ ಹಾಗೂ ಸಂತೋಷ ಉಂಟಾಗುತ್ತದೆ. ಶುಭ...10.14.29. ಅಶುಭ...12.16.27.
ಮಿಥುನ
ವಿವೇಚನೆಯಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಕೆಲವರ ಮಾತನ್ನು ನಂಬಿ ನಷ್ಟದ ವ್ಯವಹಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಚ್ಚರವಿರಲಿ. ಸಹೋದರ ವಿಶ್ವಾಸಗಳನ್ನು ಪಡೆಯಲು ಪ್ರಯತ್ನಿಸುವುದು ಸೂಕ್ತ. ನಿಮ್ಮ ಬಹುಕಾಲದ ವ್ಯಾಜ್ಯಗಳಿಗೆ ಸೂಕ್ತ ಪರಿಹಾರಗಳು ದೊರಕಲಿದೆ. ಮೋಜು ಮಸ್ತಿ ಗಳಿಗಾಗಿ ವಿಶೇಷ ಆಮಂತ್ರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಆದಷ್ಟು ತಡೆಗಟ್ಟುವುದು ಸೂಕ್ತ. ಹಣದ ಆದಾಯ ಹೆಚ್ಚುವ ಅವಕಾಶ ವಿಪುಲವಾಗಿದೆ. ಸಿನಿಮಾ, ಸಂಗೀತ, ನಟನೆ, ಸೌಂದರ್ಯ, ಸಾಹಿತ್ಯ, ವೈದ್ಯಕೀಯ, ಬರವಣಿಗೆ, ರಕ್ಷಣೆ, ಕಾನೂನು ಈ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿಗೆ ಅತ್ಯುತ್ತಮ ಅವಕಾಶಗಳಿವೆ. ಶುಭ.10.14.26. ಅಶುಭ.13.18.25.
ಕರ್ಕಾಟಕ
ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಕಂಡುಬರಲಿದೆ. ಹಣಕಾಸು ವ್ಯವಹಾರಗಳು ಯೋಜಿತವಾಗಿ ನಡೆಯಲಿದೆ. ಕಷ್ಟದ ಕಾರ್ಯಗಳನ್ನು ಸಹ ಅನಾಯಾಸವಾಗಿ ಮಾಡಿ ಮುಗಿಸಲಿದ್ದೀರಿ. ಕುಟುಂಬದಲ್ಲಿ ಶುಭಸುದ್ದಿ ಬರಲಿದೆ. ಅವಿವಾಹಿತರಿಗೆ ವಿವಾಹದ ಯೋಗ ಸಾಧ್ಯತೆ ಕಾಣಬಹುದಾಗಿದೆ. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳಿಗು ಭಿನ್ನಾಭಿಪ್ರಾಯ ತಲೆದೋರಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಹಲವು ಅಡ್ಡಿ ಆತಂಕ ಎದುರಾಗಲಿದೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ನಿಮಗೆ ಅನುಕೂಲಕರವಾದ ಹಾಗೂ ನಿರೀಕ್ಷಿತವಾದ ಫಲಿತಾಂಶ ದೊರೆಯಲಿದೆ. ಶುಭ.12.16.18. ಅಶುಭ.11.19.22.
ಸಿಂಹ
ಆತ್ಮೀಯ ವ್ಯಕ್ತಿಗಳೊಡನೆ ವಿವಾದಗಳು ಹೆಚ್ಚಾಗಬಹುದು. ಭೂಮಿಗೆ ಸಂಬಂಧಪಟ್ಟಂತಹ ವ್ಯಾಜ್ಯಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು. ಅನಗತ್ಯವಾಗಿ ಮಾತಿನಲ್ಲಿ ಏನಾದರೂ ಹೇಳಿ ಸಿಲುಕಬೇಡಿ. ಕೆಲಸದ ವಿಷಯದಲ್ಲಿ ಸಮಸ್ಯೆಗಳು ಉದ್ಭವವಾಗಲಿದೆ ಆದಷ್ಟು ಸಮಸ್ಯೆಗಳನ್ನು ಆ ಕ್ಷಣದಲ್ಲೇ ಬಗೆಹರಿಸಲು ಪ್ರಯತ್ನಿಸಿ. ಒತ್ತಡಭರಿತ ವಿಚಾರಗಳಿಂದ ಖಿನ್ನತೆ ಆವರಿಸಲಿದೆ ಆದಷ್ಟು ದೈಹಿಕ ಮತ್ತು ಮಾನಸಿಕ ಚೈತನ್ಯಕ್ಕೆ ನೋಡಿಕೊಳ್ಳಿ. ಇತರ ಸ್ಥಳದಲ್ಲಿ ನಡೆಯುತ್ತಿರುವ ಕೆಲಸಗಳನ್ನು ನಿರ್ವಹಿಸಲು ನಿಮ್ಮನ್ನು ನಿಯೋಜನೆ ಮಾಡಬಹುದು. ಇದನ್ನು ಅವಕಾಶವಾಗಿ ಬಳಸಿಕೊಳ್ಳುವುದರಲ್ಲಿ ಬಿಡುವಿಲ್ಲದಂತೆ ಆಗುತ್ತದೆ. ಸವಾಲೊಂದು ಹೊಸ ಸ್ಥಳದಲ್ಲಿ ಪ್ರಗತಿಗೆ ಹಾಗೂ ಹೊಸ ಜನರು ಒಗ್ಗಟ್ಟಾಗಿ ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುತ್ತದೆ. ಶುಭ..09.18.26 ಅಶುಭ.‌11.21.29.
ಕನ್ಯಾ
ಯೋಜಿತ ಕಾರ್ಯಗಳಲ್ಲಿ ವ್ಯವಸ್ಥಿತವಾದ ಕಾರ್ಯಶೈಲಿ ಕಂಡುಬರುತ್ತದೆ. ಧನಾಗಮನ ವ್ಯವಸ್ಥೆ ಸರಾಗವಾಗಿ ನಡೆಯಲಿದೆ. ಲೇವಾದೇವಿ ವ್ಯವಹಾರಗಳಿಂದ ದೂರವಿರುವುದು ಲೇಸು. ಕುಟುಂಬದ ಜೊತೆಗೆ ಹೆಚ್ಚಿನ ಕಾಲ ಕಳೆಯಲಿದ್ದೀರಿ. ಆತ್ಮೀಯರೊಡನೆ ಮನಸ್ತಾಪ ಆಗದಂತೆ ನೋಡಿಕೊಳ್ಳುವುದು ಒಳ್ಳೆಯದು. ಪ್ರೀತಿ ಪ್ರೇಮ ಸಂಬಂಧದಲ್ಲಿ ತೊಡಗಿರುವವರು ಸುಮಧುರವಾದ ಅನುಭವವನ್ನು ಪಡೆಯಲಿದ್ದೀರಿ. ನಿಮ್ಮ ಉತ್ಸಾಹದಾಯಕ ಸ್ವಭಾವವು ಸಂತಸವಾದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ನಿಮ್ಮ ಪ್ರೀತಿಪಾತ್ರರು ಬಹಳ ಇಷ್ಟಪಡುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಶುಭ..10.18.24. ಅಶುಭ.11.19.27.
ತುಲಾ
ಜನಪ್ರಿಯತೆ ಹೆಚ್ಚಾದಂತೆ ವಿರೋಧಿಗಳು ಹೆಚ್ಚಾಗಲಿದ್ದಾರೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೂ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಆದಷ್ಟು ದೂರವಿಡುವುದು ಒಳ್ಳೆಯದು. ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಆಲೋಚನೆ ಅಥವಾ ಮನಸ್ಥಿತಿಯನ್ನು ಕ್ಷುಲ್ಲಕ ವಿಚಾರಗಳಿಗೆ ಹರಿಸಬೇಡಿ, ಇದು ನಿಮ್ಮ ಜೀವನಕ್ಕೆ ಮಾರಕವಾಗಬಹುದು. ಪತ್ನಿಯ ವಿಚಾರಗಳಿಗೆ ಸಹಮತನೀಡಿ. ಆರ್ಥಿಕ ವಿಷಯದಲ್ಲಿ ಸಂತೃಪ್ತಿಯ ಭಾವನೆ ಮೂಡಲಿದೆ. ಬರುವ ಆದಾಯದ ಮೂಲಕವೇ ಅಗತ್ಯ ಇರುವ ಕೆಲವು ಸಲಕರಣೆಗಳನ್ನು ಖರೀದಿಸುತ್ತೀರಿ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮವಾದ ಪ್ರಗತಿ ಇದೆ. ತಿಂಗಳ ಮಧ್ಯ ಭಾಗದಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೊರಗಿನಿಂದ ಒತ್ತಡಗಳು ಹೆಚ್ಚಾಗಿ, ಮಾಮೂಲಿಗಿಂತ ಹೆಚ್ಚು ಶ್ರಮ ತೆಗೆದುಕೊಂಡು ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಹಣದ ವೆಚ್ಚ ಕೂಡ ಹೆಚ್ಚಾಗುತ್ತದೆ. ಶುಭ..10.18.28. ಅಶುಭ 12.19.26.
ವೃಶ್ಚಿಕ
ನಿಮ್ಮ ಕೆಲಸಗಳಿಗೆ ವೇಗ ನೀಡುತ್ತೀರಿ. ನಿಮ್ಮ ಕಾರ್ಯ ಯೋಜನೆಗಳನ್ನು ಅಂತಿಮಗೊಳಿಸಲು ಅಧಿಕಾರಿಗಳ ನೆರವು ದೊರೆಯುತ್ತದೆ. ಇದರಿಂದ ನಿಮ್ಮ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ಆದರೆ ಪರಿಣಾಮಕಾರಿಯಾದ ಕಾರ್ಯ ಅನುಷ್ಠಾನಕ್ಕೆ ಹೆಚ್ಚು ಸಿಬ್ಬಂದಿಯ ಅಗತ್ಯ ಬರುತ್ತದೆ. ಈ ಅಗತ್ಯ ಸಿಬ್ಬಂದಿಯ ನೇಮಕದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವೈವಾಹಿಕ ಜೀವನವು ಸಂತಸದಾಯಕವಾಗಿರುತ್ತದೆ. ಚರ್ಚಾಕೂಟಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ನಿಮ್ಮ ನಿರೀಕ್ಷೆ ಗಳಂತೆ ಆರ್ಥಿಕವಾಗಿ ಪ್ರಬಲರಾಗುವ ಸಾಧ್ಯತೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ನಿರೀಕ್ಷೆಗಳು ಮೂಡಲಿದೆ. ಸ್ವಾವಲಂಬನೆಯ ಚಿಂತನೆ ಮೂರ್ತಸ್ವರೂಪ ಪಡೆಯಲಿದೆ. ಶುಭ.. 09.19.29. ಅಶುಭ.11.15.22.
ಧನು
ಮಾನಸಿಕ ಕ್ಲೇಶಗಳು ನಿಮ್ಮ ಅಭಿವೃದ್ಧಿಗೆ ಮಾರಕವಾಗಬಹುದು. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಗೋಚರವಾಗಲಿದೆ. ಕೆಲವು ವ್ಯಕ್ತಿಗಳಿಂದ ನಿಮ್ಮ ಕಾರ್ಯಗಳಲ್ಲಿ ಹಸ್ತಕ್ಷೇಪ ಕಂಡುಬರುತ್ತದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಹಿನ್ನಡೆ ಆಗಬಹುದಾದ ಸಾಧ್ಯತೆ ಉಂಟು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಕೌಟುಂಬಿಕ ಜೀವನದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಂತಾನ ನಿರೀಕ್ಷೆಯಲ್ಲಿ ಇರುವ ದಂಪತಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ಅಥವಾ ಹರಿಕಥೆ, ಪ್ರವಚನಗಳನ್ನು ಕೇಳಲು ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ನಿಮ್ಮ ಹಳೇ ಸಮಸ್ಯೆಗಳು ಮರುಕಳಿಸುವ ಸಾಧ್ಯತೆ ಇದೆ.‌ ಅನಾರೋಗ್ಯ ಸಮಸ್ಯೆ ಕಾಡಲಿದೆ. ಶುಭ..12.16.29. ಅಶುಭ..10.17.26.
ಮಕರ
ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಸಹವರ್ತಿಗಳು ನಿಮ್ಮ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ. ಕಥೆ, ಕವನ ಅಥವಾ ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ತಮ ಮನ್ನಣೆ ಗಳಿಸಲಿದ್ದೀರಿ. ಕೆಲವು ಅದೃಷ್ಟದ ಭಾಗ್ಯಗಳು ಒದಗಿಬರಲಿದೆ. ದಾಂಪತ್ಯದಲ್ಲಿ ಪ್ರೀತಿಯ ಮನಸ್ಥಿತಿಯಿಂದ ಇರಲಿದ್ದೀರಿ.ಕೋರ್ಟ್ ವ್ಯವಹಾರಗಳು ನಿಮ್ಮ ಪರವಾಗಿ ಆಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜತೆ ಮುಖ್ಯವಾದ ಚರ್ಚೆ ನಡೆಸಲಿದ್ದೀರಿ. ಅಲರ್ಜಿ ಸೋಂಕು ಕಾಡುವ ಸಾಧ್ಯತೆ ಇದ್ದು, ಆರೋಗ್ಯ ಕ್ಷೀಣಿಸಬಹುದು. ಕುಟುಂಬ ಸದಸ್ಯರು, ಸಂಗಾತಿ ಜತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಉದ್ಯೋಗ ಸ್ಥಳದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ನಿಮ್ಮ ಪರವಾಗಿ ಇರಲಿದೆ. ಆದರೆ ನಿಮ್ಮ ಶ್ರಮ ಬಹಳ ಮುಖ್ಯವಾಗಿರಲಿದೆ. ತಿಂಗಳ ಅಂತ್ಯಕ್ಕೆ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಶುಭ..13.19.28. ಅಶುಭ. 11.17.26.
ಕುಂಭ
ಅಪರಿಚಿತ ವ್ಯಕ್ತಿಗಳಿಂದ ನಿಮ್ಮ ಯೋಜನೆಗಳಲ್ಲಿ ನಷ್ಟವಾಗಬಹುದು. ನಂಬಿಕೆದ್ರೋಹದಂತಹ ಚಟುವಟಿಕೆಗಳು ನಡೆಯಲಿದ್ದು ಎಚ್ಚರದಿಂದಿರಿ. ವಾಹನದಲ್ಲಿ ಜಾಗೃತೆ ವಹಿಸುವುದು ಸೂಕ್ತ. ಪತ್ನಿಯೊಡನೆ ಅತಿ ಹೆಚ್ಚು ಕೋಪ ಕಲಹಗಳಲ್ಲಿ ಪಾಲ್ಗೊಳ್ಳ ಬೇಡಿ. ನಿಮ್ಮೆಲ್ಲಾ ಕೆಲಸಗಳಿಗೆ ತಾಳ್ಮೆ ಅತ್ಯವಶ್ಯಕವಾಗಿ ಬೇಕಾಗಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ವ್ಯವಹಾರ ಕಾಣಬಹುದು.ಆರೋಗ್ಯ ಸಾಧಾರಣವಾಗಿ ಇರುತ್ತದೆ. ದೈಹಿಕ ಆಯಾಸ ಆರೋಗ್ಯ ಸಮಸ್ಯೆಗಳು ಕಾಡಬಹುದು. ದಿಢೀರ್ ಆಗಿ ಹಣಕಾಸಿನ ವೆಚ್ಚ ಹೆಚ್ಚಾಗಲಿದೆ. ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಕೌಟುಂಬಿಕ ನೆಮ್ಮದಿಯ ಕಾರಣಕ್ಕೆ ಯಶಸ್ಸು ನಿಮ್ಮ ಪಾಲಿಗೆ ದೊರೆಯಲಿದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ನೀವು ಹಾಕುವ ಶ್ರಮಕ್ಕೆ ಅತ್ಯುತ್ತಮ ಫಲ ಸಿಗಲಿದೆ. ಶುಭ.. 09.14.26. ಅಶುಭ.11.15.27.
ಮೀನ
ಆರ್ಥಿಕ ಯೋಜನೆಗಳ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ. ಕೆಲಸಕಾರ್ಯಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಲಿದೆ. ಕಲಿಕೆಯ ವಿಷಯಾಸಕ್ತಿ ತುಂಬಾ ಉತ್ತಮ ಮಟ್ಟದಲ್ಲಿ ಇರಲಿದೆ. ಸ್ನೇಹಿತರ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಮುಂದಾಗಿ. ಕೆಲಸ ಕಾರ್ಯಗಳು ಮಂದ ಗತಿಯಲ್ಲಿ ನಡೆಯಲಿದೆ. ಪರಸ್ಥಳ ವಾಸ ಅನುಭವಿಸಬೇಕಾದ ಸಂದರ್ಭ ಒದಗಿ ಬರಬಹುದು. ನೀವು ಈಗಾಗಲೇ ಮಾಡಿದ ಒಳ್ಳೆ ಕೆಲಸಕ್ಕೆ ಮೆಚ್ಚುಗೆ, ಮನ್ನಣೆ, ಪುರಸ್ಕಾರಗಳು ಲಭಿಸಲಿವೆ. ಕೌಟುಂಬಿಕ ಜೀವನ ಆರಾಮವಾಗಿ ಇರುತ್ತದೆ. ಲೌಖಿಕ ವ್ಯವಹಾರಗಳಲ್ಲಿ ಸಂತೃಪ್ತಿಯನ್ನು ಅನುಭವಿಸಲಿದ್ದೀರಿ. ನಿಮ್ಮ ಯಶಸ್ಸು ಕಂಡು ಪೋಷಕರು ಸಂತೋಷ ಪಡುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು, ಅಗತ್ಯ ಇರುವವರಿಗೆ ನೆರವು ನೀಡಲಿದ್ದೀರಿ. ಈಗ ಮಾಡುತ್ತಿರುವ ಕೆಲಸದ ಜತೆ ಜತೆಗೆ ಮತ್ತೊಂದು ಕೆಲಸವನ್ನು ಒಪ್ಪಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಲಾಭ ಆಗಲಿದೆ. ಶುಭ.. 06.14.22.. ಅಶುಭ.12.18.29.
ADVERTISEMENT
ADVERTISEMENT