ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜುಲೈ 13 ಗುರುವಾರ 2023– ಈ ರಾಶಿಯವರಿಗೆ ಭಿನ್ನಾಭಿಪ್ರಾಯಗಳು ದೂರಾಗುವವು
Published 12 ಜುಲೈ 2023, 18:35 IST
ಪ್ರಜಾವಾಣಿ ವಿಶೇಷ
author
ಮೇಷ
ಪ್ರತಿಭೆಗೆ ಅನುಗುಣವಾದ ಉದ್ಯೋಗ ಅವಕಾಶ ದೊರೆತು ಸಂತಸವಾಗಲಿದೆ. ಸಂಜೆಯ ಸಮಯದಲ್ಲಿ ಸಣ್ಣ ವಿಹಾರಕ್ಕೆ ತೆರಳುವಂತೆ ಆಗುವುದು. ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮ ರೀತಿಯಲ್ಲಿ ನಡೆಯುವುದು.
ವೃಷಭ
ಇಂದು ನಿಮ್ಮ ಅದೃಷ್ಟವು ಚೆನ್ನಾಗಿರುವ ಕಾರಣ ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ.
ಮಿಥುನ
ಹಿರಿಯರನ್ನು ತೀರ್ಥಯಾತ್ರೆಗೆ ಕಳುಹಿಸುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಿ. ಕಾಗದದ ಉದ್ಯಮದವರಿಗೆ ಅಧಿಕ ಲಾಭ ಇರುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನವಹಿಸುವುದರಿಂದ ಯಶಸ್ಸು.
ಕರ್ಕಾಟಕ
ಸ್ನೇಹಿತರ ಹಾಗೂ ಬಂಧುಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಭಿನ್ನಾಭಿಪ್ರಾಯಗಳು ದೂರಾಗುವವು.
ಸಿಂಹ
ಖಾಸಗೀ ಸಂಸ್ಥೆಯಿಂದ ಅಥವಾ ಒಬ್ಬ ವ್ಯಕ್ತಿಯಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡು ಸ್ವಂತ ಉದ್ಯಮವನ್ನು ಆರಂಭಿಸುವ ಸಂಭವವಿದೆ. ಈ ಬಾರಿ ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ಕೆಂಪು ಶುಭ ತರುವುದು.
ಕನ್ಯಾ
ನಿರುದ್ಯೋಗಿಗಳಿಗೆ ಜೀವನ ನಿರ್ವಹಿಸಲು ಸಾಕಾಗುವಂತಹ ವರಮಾನವಿರುವ ಸಣ್ಣಮಟ್ಟದ ಕೆಲಸ ದೊರೆತು ಸಂತಸವಾಗಲಿದೆ. ಹೊಸ ಏಜೆನ್ಸಿಯೊಂದನ್ನು ಪ್ರಾರಂಭಿಸುವವರಿಗೆ ಸಕಾಲ. ವಾಹನಗಳಿಂದ ಆದಾಯವನ್ನು ನಿರೀಕ್ಷಿಸಬಹುದು.
ತುಲಾ
ಆದಾಯ ಅಧಿಕವಾಗಿಯೇ ಇದ್ದರೂ ಸಹ ನಿಮ್ಮ ಖರ್ಚಿಗೆ ಬೇಕಾದಂತಹಾ ಒಂದು ಸಂದರ್ಭದಲ್ಲಿ ಅದು ಕೈಗೆ ಎಟುಕದೇ ಇರುವಂತಹಾ ಪರಿಸ್ಥಿತಿ ಉಂಟಾಗುತ್ತದೆ. ಉತ್ತಮ ಕಾರ್ಯಗಳಿಗೆ ಎಂದಿನAತೆಯೇ ಶ್ಲಾಘನೆ ಸಿಗುತ್ತದೆ.
ವೃಶ್ಚಿಕ
ಅನಾರೋಗ್ಯ ಅಥವಾ ಇನ್ನಿತರ ಕಾರಣಗಳಿಂದಾಗಿ ಏರುಪೇರಾಗಿದ್ದ ಮಕ್ಕಳ ವೇಳಾಪಟ್ಟಿಯು ನಿಧಾನವಾಗಿ ಸರಿಯಾಗುತ್ತದೆ. ಜಾನುವಾರುಗಳು ಮಾಡಿದ ತಪ್ಪಿಗೆ ಅವುಗಳನ್ನು ದಂಡಿಸುವುದನ್ನು ಮಾಡದಿರಿ.
ಧನು
ನಿಮ್ಮ ಶಕ್ತಿಗೂ ಮೀರಿ ನೀವು ಮಾಡಿದ ಕೆಲಸಗಳಿಂದಾಗಿ ದೈಹಿಕ ಆಯಾಸ ಉಂಟಾಗಬಹುದು. ಸುಖಕರವಾಗಿರುವ ದಾಂಪತ್ಯದಲ್ಲಿ ಬೇರೆಯವರ ಹುಳಿ ಮಾತಿಗೆ ಆಸ್ಪದ ಕೊಟ್ಟು ಮೋಸ ಹೋಗುವುದು ಬೇಡ.
ಮಕರ
ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ವೀರಾಂಜನೇಯನಿಗೆ ಜೇನುತುಪ್ಪ ಅಭಿಷೇಕದಿಂದ ವ್ಯಾಧಿಗಳು ದೂರವಾಗುತ್ತದೆ.
ಕುಂಭ
ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಓಡಾಟವಿರುವುದು. ಉನ್ನತ ಓದಿನೆಡೆಗೆ ಹೆಚ್ಚಿನ ಗಮನ ನೀಡಬೇಕಾಗುವುದು. ಆಹಾರ ಸೇವನೆಯ ವಿಷಯದಲ್ಲಿ ಆದಷ್ಟು ಜಾಗ್ರತರಾಗಿರಿ.
ಮೀನ
ಸಂತೋಷದ ಸುದ್ದಿಯನ್ನು ಮಾತ್ರ ತಿಳಿಸಿ ದುಃಖದ ವಿಷಯವನ್ನು ತಿಳಿಸದಿರುವುದು ನಿಮ್ಮ ಪ್ರವೃತ್ತಿಗೆ ಸರಿ ಎನ್ನಿಸುವುದಿಲ್ಲ. ಮುತ್ತು ರತ್ನದ ವ್ಯಾಪರಿಗಳಿಗೆ ಉತ್ತಮ ವ್ಯಾಪಾರ. ಕಫದಿಂದ ತೊಂದರೆಯಗಬಹುದು.
ADVERTISEMENT
ADVERTISEMENT