ವಾರ ಭವಿಷ್ಯ: 06-7-2025ರಿಂದ 12-7-2025 ರವರೆಗೆ- ಆಭರಣ ವ್ಯಾಪಾರಿಗಳಿಗೆ ಲಾಭ
Published 5 ಜುಲೈ 2025, 18:34 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಆದಾಯವು ತೃಪ್ತಿದಾಯಕವಾಗಿರುತ್ತದೆ. ಮಧ್ಯವರ್ತಿಗಳ ಆದಾಯ ಹೆಚ್ಚುತ್ತದೆ. ಕ್ರೀಡಾ ತರಬೇತಿದಾರರ ಆದಾಯ ಹೆಚ್ಚುತ್ತದೆ. ಧಾರ್ಮಿಕ ವಿಷಯಗಳನ್ನು ಅಧ್ಯಯನ ಮಾಡುವವರಿಗೆ ಹೆಚ್ಚಿನ ಅನುಕೂಲಗಳು ಲಭಿಸುತ್ತವೆ. ಪ್ರೀತಿ,ಪ್ರೇಮದಲ್ಲಿ ಇರುವವರಿಗೆ ಯಶಸ್ಸು ದೊರೆಯುವ ಸಾಧ್ಯತೆಗಳಿವೆ. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಉದ್ಯೋಗ ಸ್ಥಳದಲ್ಲಿ ಹಿಡಿತ ಸಾಧಿಸುವಿರಿ.
ವೃಷಭ
ಜನಗಳ ನಡುವೆ ಹೆಚ್ಚು ಗುರುತಿಸಿ ಕೊಳ್ಳುವಿರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ನಿಮ್ಮ ವ್ಯವಹಾರಗಳಿಗೆ ಸಹೋದರರು ಅಡ್ಡಿಯಾಗಬಹುದು. ಗಣಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಮಕ್ಕಳಿಂದ ಸಹಾಯ ದೊರೆಯುತ್ತದೆ. ಶೀತ ಬಾಧೆ ಇರುವವರು ಎಚ್ಚರವಹಿಸಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು. ಸಂಗಾತಿಯಿಂದ ಸಂಸಾರದಲ್ಲಿ ಒಮ್ಮೊಮ್ಮೆ ಕಾವೇರಿದ ವಾತಾವರಣ ಸೃಷ್ಟಿಯಾಗಬಹುದು.
ಮಿಥುನ
ಆತ್ಮವಿಶ್ವಾಸವನ್ನು ಸಾಕಷ್ಟು ಹೆಚ್ಚು ಮಾಡಿಕೊಳ್ಳುವಿರಿ. ವ್ಯವಹಾರದಿಂದ ಆದಾಯ ಹೆಚ್ಚಾಗುತ್ತದೆ. ನಿಮ್ಮ ಸ್ವಂತ ಕೆಲಸಗಳಿಗೆ ಮಾತ್ರ ಚುರುಕಾಗಿರುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುತ್ತದೆ. ಮೂಳೆ ಸಂಬಂಧಿ ದೋಷಗಳು ಕೆಲವು ಕ್ರೀಡಾಪಟುಗಳಿಗೆ ಕಾಡಬಹುದು. ಸಂಗಾತಿಯಿಂದ ನಿಮಗೆ ಆರ್ಥಿಕ ಸಹಕಾರ ದೊರೆಯುತ್ತದೆ. ರಾಜಕಾರಣಿಗಳಿಗೆ ಇದ್ದ ಜನವಿರೋಧ ಈಗ ದೂರವಾಗುತ್ತದೆ. ತಂದೆಯೊಡನೆ ಸಂಬಂಧ ಸುಧಾರಿಸಿಕೊಳ್ಳುವುದು ಒಳ್ಳೆಯದು. ಉದ್ಯೋಗದಲ್ಲಿ ಅನುಕೂಲವಿರುತ್ತದೆ.
ಕರ್ಕಾಟಕ
ಸಾಕಷ್ಟು ವ್ಯಾವಹಾರಿಕವಾಗಿ ಆಲೋಚನೆ ಮಾಡುವಿರಿ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳನ್ನು ನಿಮ್ಮ ವ್ಯವಹಾರದಲ್ಲಿ ಸೇರಿಸಿಕೊಳ್ಳುವಿರಿ. ಭೂಮಿ ವ್ಯವಹಾರಗಳಿಂದ ಹೆಚ್ಚು ಲಾಭ ಬರುತ್ತದೆ. ಹೈನುಗಾರಿಕೆ ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪಲಿತಾಂಶವಿಲ್ಲ. ಪಿತ್ತ ವಿಕಾರಗಳು ಹೆಚ್ಚಾಗಬಹುದು. ಸಂಗಾತಿಯು ವೃತ್ತಿಯಲ್ಲಿ ಹೆಚ್ಚು ತೊಡಗಿಕೊಳ್ಳುವರು. ತಂದೆಯೊಡನೆ ಸಂಬಂಧ ಸ್ವಲ್ಪ ಸುಧಾರಿಸುತ್ತದೆ. ಕೃಷಿಯಿಂದ ಸ್ವಲ್ಪ ಆದಾಯವಿರುತ್ತದೆ.
ಸಿಂಹ
ನಿಮ್ಮಲ್ಲಿ ಒಂದು ರೀತಿಯ ಕೋಪವಿರುತ್ತದೆ. ಆದಾಯ ಕಡಿಮೆ ಇದ್ದು, ಅಷ್ಟೇ ಖರ್ಚು ಇರುತ್ತದೆ. ಬಹಳ ಚುರುಕಾಗಿ ಕೆಲಸ ಮಾಡಿ ಜನರ ಗಮನ ಸೆಳೆಯುವಿರಿ. ತಾಯಿಯ ಜೊತೆ ಸಂಬಂಧ ಸುಧಾರಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಯಶಸ್ಸು ಸಿಗುತ್ತದೆ. ಆರೋಗ್ಯದಲ್ಲಿ ಏರುಪೇರಾದರೂ ಆತಂಕ ಇರುವುದಿಲ್ಲ. ಆಭರಣ ವ್ಯಾಪಾರಿಗಳಿಗೆ ಲಾಭವಿದೆ.
ಕನ್ಯಾ
ಬಹಳ ಜಾಣ್ಮೆಯಿಂದ ಜನ ಬೆಂಬಲ ಗಳಿಸಲು ಪ್ರಯತ್ನ ಪಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮದೇ ಆದ ತಪ್ಪುಗಳಿಂದ ಬಂಧುಗಳ ವಿರೋಧವನ್ನು ಕಟ್ಟಿಕೊಳ್ಳುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಸಾಕಷ್ಟು ಲಾಭವಿರುತ್ತದೆ. ಮಧ್ಯವರ್ತಿ ಕೆಲಸ ಮಾಡುವವರಿಗೆ ಸಾಕಷ್ಟು ಆದಾಯವಿರುತ್ತದೆ. ಸಂಗಾತಿಯ ಸಹಾಯದಿಂದ ನಿಂತಿದ್ದ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು. ವಾಯು ಸಂಬಂಧಿ ದೋಷಗಳು ಕಾಣಿಸಬಹುದು. ಸಂಗಾತಿಯು ಸಂಸಾರಕ್ಕಾಗಿ ಶ್ರಮವಹಿಸುವರು. ಕೃಷಿಯಿಂದ ಆದಾಯ ಕಡಿಮೆ ಇರುತ್ತದೆ.
ತುಲಾ
ವಾರದ ಆರಂಭ ಸಂತೋಷದಾಯಕವಾಗಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿರಿಯರ ಸಲಹೆ ಬಹಳ ಪಾತ್ರವಹಿಸುತ್ತದೆ. ಕೃಷಿಭೂಮಿಯನ್ನು ಅಭಿವೃದ್ಧಿಪಡಿಸುವ ಯೋಗವಿದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ. ನಿಮ್ಮ ಮಕ್ಕಳಿಂದ ನಿರೀಕ್ಷಿತ ಗೌರವ ಲಭಿಸುವುದಿಲ್ಲ. ಮೂಳೆ ಸಂಬಂಧಿ ದೋಷಗಳು ಈಗ ಮರುಕಳಿಸಬಹುದು. ಕೇಶಾಲಂಕಾರ ಮಾಡುವವರಿಗೆ ಆದಾಯ ಕಡಿಮೆಯಾಗಬಹುದು. ನಿಮ್ಮ ಹಿರಿಯರ ಸಹಕಾರದಿಂದ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು.
ವೃಶ್ಚಿಕ
ವಾರದ ಆರಂಭದಲ್ಲಿ ಬಹಳಷ್ಟು ಆಲಸೀತನವಿರುತ್ತದೆ. ಆದಾಯದಹರಿವಿದ್ದರೂ ಅದು ನಿಮಗೆ ತಲುಪುವುದುನಿಧಾನವಾಗುತ್ತದೆ. ಶತ್ರುಗಳನ್ನು ಹುಡುಕಿ ಎಚ್ಚರಿಕೆಕೊಡುವಿರಿ. ಕೃಷಿ ಪಂಡಿತರಿಗೆ ಗೌರವ ಹೆಚ್ಚುತ್ತದೆ. ಕೃಷಿ ಭೂಮಿ ಯನ್ನು ವಿಸ್ತರಣೆ ಮಾಡುವ ಯೋಗವಿದೆ. ಈಗ ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶವಿರುವು ದಿಲ್ಲ. ಮಕ್ಕಳ ಬಗ್ಗೆ ಸರಿಯಾಗಿ ಎಚ್ಚರ ವಹಿಸಿರಿ. ಉಷ್ಣ ಸಂಬಂಧಿ ದೋಷಗಳು ಕೆಲವರನ್ನು ಕಾಡ ಬಹುದು. ಸಂಗಾತಿಯು ಧನಸಹಕಾರವನ್ನು ತಾವಾಗಿಯೇ ಕೊಡುವರು. ಈಗ ಸರ್ಕಾರಿಕೆಲಸ ಕಾರ್ಯಗಳಲ್ಲಿನಿಧಾನಗತಿಯನ್ನುಕಾಣಬಹುದು ತಂದೆ ಜೊತೆ ಕೂಡಿ ಮಾಡಿದ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ.
ಧನು
ಬಹಳ ಗಾಂಭೀರ್ಯ ನಿಮ್ಮಲ್ಲಿ ತುಂಬಿರುತ್ತದೆ. ಆದಾಯವು ಕಡಿಮೆ ಇದ್ದರೂ ತೊಂದರೆ ಇರುವುದಿಲ್ಲ.ನಿಮ್ಮ ಶತ್ರುಗಳೇ ನಿಮ್ಮ ಮಿತ್ರರಾಗುವರು. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಹತ್ತಿರ ಮಾತ್ರ ಫಲಿತಾಂಶ ಬರುತ್ತದೆ. ಧರ್ಮ ವಿದ್ಯೆಯನ್ನು ಕಲಿಯುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಸ್ತ್ರೀಯರೊಡನೆಮಾಡಿದಹಣಕಾಸಿನ ವ್ಯವಹಾರ ನಷ್ಟಕ್ಕೆಕಾರಣವಾಗಬಹುದು. ನಿಮ್ಮ ಸಂಗಾತಿಯಸ್ಥಾನದಲ್ಲಿ ಏರಿಕೆಯಾಗುತ್ತದೆಮತ್ತು ಆದಾಯ ಹೆಚ್ಚುತ್ತದೆ. ಅದಿರು ವ್ಯಾಪಾರಮಾಡು ವವರಿಗೆ ಲಾಭ ಹೆಚ್ಚುತ್ತದೆ. ತಂದೆಯಿಂದ ಆಸ್ತಿ ದೊರೆಯಬಹುದು. ವೃತ್ತಿಯಲ್ಲಿದ್ದ ತೊಂದರೆಗ ಳನ್ನು ಬುದ್ಧಿವಂತಿಕೆಯಿಂದ ಬಿಡಿಸಿಕೊಳ್ಳಿರಿ. ಹೈನುಗಾರಿಕೆ ಲಾಭ ತರುತ್ತದೆ.
ಮಕರ
ವೃತ್ತಿಯಲ್ಲಿ ಬಹಳ ಶ್ರಮಪಟ್ಟು ಹೆಸರು ಗಳಿಸುವಿರಿ. ಆದಾಯವು ಕಡಿಮೆ ಇದ್ದರೂ, ಅದರಲ್ಲೇ ನಿಭಾಯಿಸುವಿರಿ. ನಿಮ್ಮ ಶತ್ರುಗಳು ನಿಮ್ಮನ್ನು ಕಂಡರೆ ಭಯಪಡುವರು. ವಿದ್ಯಾರ್ಥಿಗಳಿಗೆ ಉತ್ತಮಫಲಿತಾಂಶ ಪಡೆಯುವ ಯೋಗವಿದೆ. ತಲೆನೋವು ಇರುವವರು ಎಚ್ಚರವಹಿಸಿ. ಸಂಗಾತಿ ಜತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕೃಷಿಯಿಂದ ನಿರೀಕ್ಷಿತ ಲಾಭವಿಲ್ಲ. ವೃತ್ತಿಯಲ್ಲಿದ್ದ ತೊಂದರೆಗಳು ನಿವಾರಣೆಯಾಗುತ್ತವೆ.
ಕುಂಭ
ರಾಜಕಾರಣಿಗಳಿಗೆ ಮಾತು ಬಂಡವಾಳವಾಗಿ ಪರಿವರ್ತನೆಯಾಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಸಂಸಾರದಲ್ಲಿ ಈಗ ಸಂತೋಷವಿರುತ್ತದೆ. ವಿದ್ಯಾರ್ಥಿಗಳು ಉನ್ನತ ಫಲಿತಾಂಶ ಪಡೆಯುವ ಯೋಗವಿದೆ. ನರಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಕೋಪಕ್ಕೆ ಗುರಿಯಾಗುವ ಸಂದರ್ಭವಿದೆ. ಹೈನುಗಾರಿಕೆಯು ಸ್ವಲ್ಪಮಟ್ಟಿನ ಆದಾಯವನ್ನು ತರುತ್ತದೆ.
ಮೀನ
ಆದಾಯವು ಕಡಿಮೆ ಇರುತ್ತದೆ. ಕೆಲವರಿಗೆ ಈಗ ಸರ್ಕಾರಿ ಸಂಬಂಧಿತ ಆಸ್ತಿಯನ್ನು ಪಡೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಚರ್ಮ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಮಕ್ಕಳಿಗಾಗಿ ಸ್ವಲ್ಪ ಹಣ ಖರ್ಚು ಮಾಡುವಿರಿ. ಸಂಗಾತಿಯು ಮಾಡುವ ವ್ಯವಹಾರಗಳಲ್ಲಿ ಲಾಭವಿರುತ್ತದೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.