ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ (ಎರಡೂ ಇನಿಂಗ್ಸ್ಗಳಿಂದ) 430 ರನ್ ಕಲೆಹಾಕಿ ದಾಖಲೆ ಬರೆದಿರುವ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಆಟಕ್ಕೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿರುವ ಕೊಹ್ಲಿ, 'ಚೆನ್ನಾಗಿ ಆಡಿರುವೆ ಸ್ಟಾರ್ ಬಾಯ್. ಇತಿಹಾಸವನ್ನು ಬರೆಯುತ್ತಿರುವೆ. ಇಲ್ಲಿಂದ ಮುಂದಕ್ಕೆ, ಎತ್ತರಕ್ಕೆ ಸಾಗು. ಇದಕ್ಕೆಲ್ಲ ಅರ್ಹ ನೀನು' ಎಂದು ಬೆನ್ನುತ್ತಟ್ಟಿದ್ದಾರೆ.
.IND vs ENG: 269+161 - ಹಲವು ದಾಖಲೆಗಳನ್ನು ಬರೆದ ಗಿಲ್.ENG vs IND | ಪಂದ್ಯವೊಂದರಲ್ಲಿ ಗರಿಷ್ಠ ಮೊತ್ತ: ಇಂಗ್ಲೆಂಡ್ ಪರ ಸ್ಮಿತ್ ದಾಖಲೆ.
ಎಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 269 ರನ್ ಕಲೆಹಾಕಿದ್ದ ಗಿಲ್, ಎರಡನೇ ಇನಿಂಗ್ಸ್ನಲ್ಲಿ 161 ರನ್ ಗಳಿಸಿದ್ದಾರೆ. ಅದರೊಂದಿಗೆ, ಎರಡೂ ಇನಿಂಗ್ಸ್ಗಳಲ್ಲಿ 150ಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿರುವ ಅವರು, ಪಂದ್ಯವೊಂದರಲ್ಲಿ ದ್ವಿಶತಕ ಹಾಗೂ ಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಶ್ರೇಯಕ್ಕೂ ಭಾಜನರಾಗಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ 1971ರಲ್ಲಿ ಈ ಸಾಧನೆ ಮಾಡಿದ್ದರು.

ಟೆಸ್ಟ್ ಕ್ರಿಕೆಟ್ನಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಎರಡನೇ ಪಂದ್ಯದಲ್ಲೇ ಗಿಲ್ ಇಂತಹ ಅಸಾಧಾರಣ ಸಾಧನೆ ಮಾಡಿರುವುದು ವಿಶೇಷ.

ಜಯದ ಹೊಸ್ತಿಲಲ್ಲಿ ಭಾರತ
608 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 204 ರನ್ ಗಳಿಸುವಷ್ಟರಲ್ಲೇ ಪ್ರಮುಖ 7 ವಿಕೆಟ್ಗಳನ್ನು ಕಳೆದುಕೊಂಡಿದೆ. ಅಂತಿಮ ದಿನವಾದ ಇಂದು ಇನ್ನೂ 43 ಓವರ್ಗಳ ಆಟ ಬಾಕಿ ಇದೆ. ಗೆಲ್ಲಲು ಉಳಿದಿರುವ ಮೂರು ವಿಕೆಟ್ಗಳಿಂದ 404 ರನ್ ಗಳಿಸಬೇಕಿದೆ. ಸದ್ಯ ಸೋಲು ತಪ್ಪಿಸಿಕೊಂಡರೆ ಸಾಕೆನ್ನುವ ಸ್ಥಿತಿಯಲ್ಲಿರುವ ಆತಿಥೇಯ ತಂಡ ವಿಕೆಟ್ಗಳನ್ನು ಕಳೆದುಕೊಳ್ಳದೆ ದಿನಪೂರ್ತಿ ಆಡಬೇಕಿದೆ.
.ENG vs IND Test | ಆಂಗ್ಲರಿಗೆ ಆಕಾಶ್ ಆಘಾತ: ಭಾರತಕ್ಕೆ 336 ರನ್ ಜಯ.ತಮಿಳು ಸಿನಿಮಾದಲ್ಲಿ ನಟಿಸಲಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ..ಇಲ್ಲಿದೆ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.