ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಫೆಬ್ರುವರಿ 25 ಭಾನುವಾರ 2024- ಮನೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು
Published 24 ಫೆಬ್ರುವರಿ 2024, 19:09 IST
ಪ್ರಜಾವಾಣಿ ವಿಶೇಷ
author
ಮೇಷ
ನಿಮ್ಮ ತೊಂದರೆಗಳೆಲ್ಲಾ ಒಂದೊಂದಾಗಿ ಉಪಶಮನಗೊಳ್ಳುತ್ತಾ ಹಂತ ಹಂತವಾಗಿ ಅಭಿವೃದ್ಧಿ ತೋರಿಬರುವುದು. ಗಣನೀಯವಾದ ಆದಾಯವಿದ್ದರೂ ಜೊತೆಯಲ್ಲಿಯೇ ಮನರಂಜನ ಬಯಕೆಯಿಂದಾಗಿ ಖರ್ಚುಗಳು ಸಂಭವಿಸಲಿದೆ.
ವೃಷಭ
ಕುಟುಂಬದ ಸಮಸ್ಯೆ ಬಗ್ಗೆ ಯೋಚಿಸಿ ತೀರ್ಮಾನಿಸುವುದರಿಂದ ಸಂಬಂಧಗಳಿಗೆ ಧಕ್ಕೆ ಉಂಟಾಗುವುದಿಲ್ಲ. ಯಂತ್ರೋಪಕರಣಗಳ ರಾಟದಿಂದ ಹೆಚ್ಚಿನ ಲಾಭ. ಮನೆಯವರ ಆರೋಗ್ಯ ಉತ್ತಮವಾಗಿರುವುದು.
ಮಿಥುನ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸ ಅವಕಾಶಗಳು ದೊರೆಯಲಿದೆ. ಯಂತ್ರೋಪಕರಣಗಳ ವ್ಯಾಪಾರ ಮೂಲಕ ಲಾಭ ಪಡೆಯಬಹುದು. ಮನೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಇರುತ್ತದೆ.
ಕರ್ಕಾಟಕ
ಮಕ್ಕಳ ವಿದ್ಯಾಭ್ಯಾಸ ಅಥವಾ ವಿವಾಹದ ವಿಚಾರವಾಗಿ ಅನಾವಶ್ಯಕವಾದ ಹಾಗೂ ಅತಿಯಾದ ಯೋಚನೆಗಳನ್ನು ಮಾಡಬೇಡಬೇಕಾಗುತ್ತದೆ. ದೂರದ ಊರಿನಲ್ಲಿ ವೃತ್ತಿ ಜೀವನವು ಆರಂಭಗೊಳ್ಳುವುದು.
ಸಿಂಹ
ನಿಮ್ಮ ಸಲಹೆ ಸೂಚನೆಗಳನ್ನು ಒಪ್ಪುವಂತೆ ವ್ಯಕ್ತಿಯ ಮನಸ್ಸು ಪರಿವರ್ತನೆ ಮಾಡುವಲ್ಲಿ ವಿಫಲರಾಗುವಿರಿ. ಪೆಟ್ರೋಲ್ ವ್ಯಾಪಾರದಲ್ಲಿ ಮಾರಾಟ ಉತ್ತಮವಾಗಿರುವುದು. ಅಲಂಕಾರಿಕ ವಸ್ತುಗಳ ಖರೀದಿ ಆಗಲಿದೆ.
ಕನ್ಯಾ
ಖಾಸಗಿ ಬದುಕಿನ ಆಸೆಗಳು ಬಹುಮಟ್ಟಿಗೆ ಈಡೇರುವುದರಿಂದ ಹುರುಪು ಮೂಡಲಿದೆ. ಧರ್ಮಕಾರ್ಯಗಳಿಗೆ ಹಣ ವಿನಿಯೋಗಿಸುವಿರಿ. ಮನೋಭಿಲಾಷೆ ಪೂರೈಕೆಗೆ ವಾಮಮಾರ್ಗ ಸರಿಯಲ್ಲ.
ತುಲಾ
ಇಂದಿನ ಎಲ್ಲಾ ಸನ್ನಿವೇಶಗಳು ನಿಮಗೆ ವಿರೋಧವಾಗಿರುವುದರಿಂದ ಮನಸ್ಸಿಗೆ ನಕಾರಾತ್ಮಕ ಯೋಚನೆಗಳು ಬರಲಿವೆ. ರಹಸ್ಯ ವ್ಯಕ್ತಿಗಳಿಂದ ಸಿಗುವ ಬೆಂಬಲದಿಂದ ನಿಮ್ಮ ಕನಸುಗಳು ನನಸಾಗುವುದು.
ವೃಶ್ಚಿಕ
ನಿಮಗೆ ಅವಶ್ಯಕತೆ ಇರುವ ನಿಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ. ಈ ದಿನದ ಮೊದಲ ಆದ್ಯತೆ ನಿಮ್ಮ ಕೆಲಸಗಳ ಬಗೆಗೆ ಮಾತ್ರ ಇರಲಿ. ದುಡಿಮೆ ಸಾರ್ಥಕವಾಗುವ ಕೆಲಸವನ್ನು ಮಾಡಿ.
ಧನು
ನಿಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಸರಿಯಾಗಿ ವ್ಯವಹರಿಸುವುದರಿಂದ ಲಾಭಾಂಶ ವೃದ್ಧಿಯಾಗಲಿದೆ. ನಿಮ್ಮ ಅನಿವಾರ್ಯ ಕಾಲಕ್ಕೆ ಇಷ್ಟ ಮಿತ್ರರಿಂದ ಸಕಾಲದಲ್ಲಿ ಸಹಕಾರವು ಒದಗಿ ಬರಲಿದೆ.
ಮಕರ
ಕೆಲವು ವಿಷಯಗಳಲ್ಲಿ ಇತರರ ಸಲಹೆ ಪಡೆಯುವುದು ಅಥವಾ ಕೊನೇಪಕ್ಷ ಕಾಲಾವಕಾಶವನ್ನು ತೆಗೆದುಕೊಂಡು ಯೋಚಿಸಿ ಉತ್ತರ ನೀಡುವುದು ಉತ್ತಮ. ಬಿಳಿ ಬಣ್ಣ ಇಂದು ಶುಭಪ್ರದವಾಗಿರುತ್ತದೆ.
ಕುಂಭ
ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳುವ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ. ಮುದ್ರಣ ವೃತ್ತಿಯವರಿಗೆ ಉತ್ತಮ ಬೇಡಿಕೆ ಪ್ರಾಪ್ತಿಯಾಗುವುದು. ಕೆಲಸಗಳೆಲ್ಲವೂ ತನ್ನಷ್ಟಕ್ಕೆ ತಾನೆಗಿಯೇ ಪೂರ್ಣಗೊಳ್ಳುವವು.
ಮೀನ
ಅನವಶ್ಯಕವಾದ ವಿವಾದಗಳಿಂದ ದೂರ ಉಳಿದು ಕೆಲಸಗಳನ್ನು ತ್ವರಿತವಾಗಿ ಪೂರ್ತಿ ಮಾಡುವಿರಿ. ನ್ಯಾಯವಾದಿಗಳಿಗೆ ತಮ್ಮ ವೃತ್ತಿಯಿಂದ ಹೆಚ್ಚಿನ ಆದಾಯಗಳಿಕೆ ಆಗಲಿದೆ. ದೃಢ ನಿರ್ಧಾರ ಕೈಗೊಳ್ಳಲು ಹಿಂಜರಿಕೆ ಬೇಡ.