ಭಾನುವಾರ, 13 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 18 ಬುಧವಾರ 2025– ಈ ದಿನ ಈ ರಾಶಿಯವರಿಗೆ ಉತ್ತಮ ಆದಾಯ ಇರಲಿದೆ
Published 17 ಜೂನ್ 2025, 18:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ವಂತ ಉದ್ಯೋಗಿಗಳಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸ ಅವಕಾಶಗಳು ದೊರೆಯಲಿವೆ. ದೈಹಿಕ ಶ್ರಮದ ಜೊತೆ ಧಾರ್ಮಿಕ ಕಾರ್ಯಗಳೂ ಸೇರಿದಾಗ ಶುಭಫಲ ಅನುಭವಕ್ಕೆ ಬರುತ್ತದೆ.
ವೃಷಭ
ಮಾಡಿ ಮುಗಿಸಬೇಕೆಂದು ಆಲೋಚಿಸಿದ್ದ ಕೆಲಸಗಳು ಶುಭಾರಂಭಗೊಳ್ಳಲಿವೆ. ವಿದ್ಯಾರ್ಥಿಗಳು ಓದಿನಲ್ಲಿ ಅಪರಿಮಿತ ಆಸಕ್ತಿ ತೋರುವಿರಿ. ಉದರವ್ಯಾಧಿ ಕಾಣಿಸಿಕೊಳ್ಳಬಹುದು.
ಮಿಥುನ
ವ್ಯವಹಾರವನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರೆ ಅದನ್ನು ಅನುಷ್ಠಾನಕ್ಕೆ ತರಲು ಸಕಾಲ.ಕಷ್ಟಪಟ್ಟು ದುಡಿಯುವ ಸ್ವಭಾವದವರು, ವ್ಯವಹಾರದಲ್ಲಿ ಜೀವನಕ್ಕೇನೂ ಕೊರತೆ ಕಾಣುವುದಿಲ್ಲ.
ಕರ್ಕಾಟಕ
ಜೀವನದಲ್ಲಿ ಅತಿಯಾಗಿ ನಂಬುವ ವ್ಯಕ್ತಿ ಜತೆ ಸಮಯ ಕಳೆಯುವಿರಿ. ಕಲ್ಪನಾಶಕ್ತಿ ಚುರುಕಾಗಿ ಕೆಲಸ ಮಾಡಲಿದೆ. ಕೈಮಗ್ಗದ ವಸ್ತುಗಳ ವ್ಯಾಪಾರಿಗಳಿಗೆ ಪ್ರಾಮುಖ್ಯತೆ ಸಿಗಲಿದೆ. ಉತ್ತಮ ಆದಾಯ ಇರಲಿದೆ.
ಸಿಂಹ
ಮೇಲಧಿಕಾರಿಗಳಿಂದ ಅವಕಾಶಗಳು ಹಾಗೂ ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ಸ್ವಾರ್ಥ ಬುದ್ಧಿಯನ್ನು ಬಿಟ್ಟು ಇತರರ ಕುರಿತು ಕಾಳಜಿ ವಹಿಸುವುದನ್ನೂ ಅಭ್ಯಾಸ ಮಾಡಿಕೊಳ್ಳಿ.
ಕನ್ಯಾ
ಹುಡುಕಾಟದ ಸತತ ಪ್ರಯತ್ನದಿಂದ ಕಳೆದು ಹೋಗಿದ್ದ ದಾಖಲೆಪತ್ರಗಳು ಸಿಕ್ಕಿ ಮನಸ್ಸಿಗೆ ಸಮಾಧಾನವಾಗುವುದು. ಪತ್ರಿಕಾ ವರದಿಗಾರರಿಗೆ ಈ ದಿನ ಸದಾಕಾಲ ನೆನಪಿನಲ್ಲಿ ಉಳಿಯಲಿದೆ.
ತುಲಾ
ಮೇಲಧಿಕಾರಿಗಳ ಅಥವಾ ಪರಿಣತರ ಸಲಹೆ, ಸೂಚನೆಗಳೊಂದಿಗೆ ಮುಂದುವರಿದರೆ ಗೊಂದಲದ ಪರಿಸ್ಥಿತಿ ತಿಳಿಯಾಗುತ್ತದೆ. ದೇವಿಯ ಆರಾಧನೆಯಿಂದ ನೆಮ್ಮದಿ ತಂದುಕೊಳ್ಳಬಹುದು. ಧನಲಾಭ ಪ್ರಾಪ್ತಿ.
ವೃಶ್ಚಿಕ
ಜಮೀನಿನ ಕೆಲಸಗಳು ತೊಂದರೆ ಇಲ್ಲದೆ ನೆರವೇರಲಿವೆ. ಅದೃಷ್ಟದ ಕೊರತೆಯಿಂದ ಅಗತ್ಯಕ್ಕಿಂತ ಹೆಚ್ಚು ಸಂಪಾದನೆ ಆಗುವುದು ಕಷ್ಟವೆನಿಸುವುದು. ಅರಣ್ಯ ಅಧಿಕಾರಿಗಳಿಗೆ ಕೆಲಸ ಎದುರಾಗುತ್ತದೆ.
ಧನು
ಸರ್ಕಾರಿ ಅಧಿಕಾರಿಗಳಿಗೆ ಶುಭ ದಿನ. ಆಫೀಸಿನ ತುರ್ತು ಕೆಲಸಗಳತ್ತ ಗಮನ ಕೊಡಿ. ಕೆಲಸದಲ್ಲಿ ವಿವೇಚನೆಯ ಕೊರತೆ ಕಂಡುಬರಲಿದೆ. ಗೆಲುವು ಸಾಧಿಸಲು ಹೆಜ್ಜೆಹೆಜ್ಜೆಗೂ ವಿವೇಚನೆ ಅಗತ್ಯ.
ಮಕರ
ನಿಮ್ಮನ್ನು ರೂಪಿಸಿಕೊಳ್ಳಲು ಶ್ರಮ ಹಾಕಬೇಕೆನ್ನುವ ವಿಚಾರ ಕೋಪ ಹಾಗೂ ಅಸಹನೆಯನ್ನು ಉಂಟುಮಾಡಲಿದೆ. ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ಈ ದಿನ ತಿಳಿಯುವುದು.
ಕುಂಭ
ಬೃಹತ್ ಮೊತ್ತದ ವ್ಯವಹಾರವನ್ನು ಹೊಂದಿರುವವರು ನಿಮ್ಮ ಎದುರಾಳಿಗಳ ಮೇಲಿನ ಗಮನವನ್ನು ಹೆಚ್ಚು ಮಾಡಿಕೊಳ್ಳುವುದು ಒಳ್ಳೆಯದು. ಹಣ ಸಹಾಯ ಮಾಡುತ್ತೇವೆ ಎಂದ ಸ್ನೇಹಿತರು ನೀಡದೆ ಸತಾಯಿಸುವ ಸಾಧ್ಯತೆ.
ಮೀನ
ಉದ್ಯೋಗಾಪೇಕ್ಷಿಗಳು ಇಷ್ಟ ಕ್ಷೇತ್ರದಲ್ಲಿ ಕೆಲಸ ಹೊಂದುವುದರಿಂದ ಲೀಲಾಜಾಲವಾಗಿ ಉತ್ತಮ ಹೆಸರು ಪಡೆಯುವಿರಿ. ಆರೋಗ್ಯದ ಎರುಪೇರುಗಳಾಗುವ ಸಾಧ್ಯತೆ ಇದೆ. ಎಚ್ಚರವಹಿಸಿ.
ADVERTISEMENT
ADVERTISEMENT