ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 5 ಗುರುವಾರ 2024– ಆಕಸ್ಮಿಕ ಧನಲಾಭ ಉಂಟಾಗಲಿದೆ
Published 4 ಸೆಪ್ಟೆಂಬರ್ 2024, 18:37 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿರಿಯರ ಕಸುಬನ್ನೇ ಮುಂದುವರಿಸುತ್ತಿರುವವರು, ಅವರು ಹಾಕಿ ಕೊಟ್ಟ ಪಥದಲ್ಲಿ ನಡೆಯುವುದರಿಂದ ಶ್ರೇಯಸ್ಸು ಲಭಿಸುತ್ತದೆ. ವೃತ್ತಿ ಬದುಕಿನ ಗುರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಿರಿ.
ವೃಷಭ
ಮಗಳ ಮದುವೆಯ ವಿಷಯದಲ್ಲಿ ಜವಾಬ್ದಾರಿಯ ಹಂಚಿಕೆಗೆ ಸಂಬಂಧಿಸಿದಂತೆ ಮಗನೊಡನೆ ಮುಕ್ತ ಮನಸ್ಸಿನ ಮಾತುಕತೆ ನಡೆಯುವುದು. ಸಿನಿಮಾ ನಟ ನಟಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ.
ಮಿಥುನ
ಹೊಸ ಪ್ರಯತ್ನಗಳಲ್ಲಿ ಯಾರ ಸಹಕಾರವೂ ಸಿಗದ ಕಾರಣ ಹಿನ್ನಡೆ ಯಾಗುವ ಸಾಧ್ಯತೆ ಇದೆ. ಆದರೆ, ಪ್ರಯತ್ನ ನಿಲ್ಲಿಸುವುದು ಸರಿಯಲ್ಲ. ಕೆಲಸದಲ್ಲಿ ಬದಲಾವಣೆ ಬಯಸಿದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ.
ಕರ್ಕಾಟಕ
ತಮಾಷೆಯ ಮಾತುಗಳು ಹಿರಿಯರ ಮನಸ್ಸನ್ನು ನೋಯಿಸುವುದು. ಮಾತಿನಲ್ಲಿ ಹಿಡಿತವಿರಲಿ. ವ್ಯಾಪಾರ ವ್ಯವಹಾರದಲ್ಲಿ ಪರಿಶ್ರಮ ಹಾಗೂ ಕಲ್ಪನೆಗೂ ಮೀರಿದ ಲಾಭವನ್ನು ಗಳಿಸುವಿರಿ.
ಸಿಂಹ
ಪ್ರಭಾವಿ ವ್ಯಕ್ತಿಗಳ ಸಹಾಯವನ್ನು ಬಳಸಿಕೊಂಡು ನಿಮ್ಮ ಉದ್ಯೋಗದಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಯೋಚನೆಯನ್ನು ನಡೆಸುವಿರಿ. ಸಾಮಾಜಿಕ ವಲಯದಲ್ಲಿ ನಿಮ್ಮ ವರ್ಚಸ್ಸು ಬೆಳೆಯಲಿದೆ.
ಕನ್ಯಾ
ಹಳೆ ತಪ್ಪುಗಳನ್ನೇ ಹೇಳುವ ಮೂಲಕ ನಿಮ್ಮನ್ನು ಗಾಸಿಗೊಳಿಸುವ ಜನರು ಎದುರಾಗಬಹುದು. ರಿಯಾಯಿತಿ ದರದ ಹೆಸರಿನಲ್ಲಿ ಖರೀದಿ ಮಾಡಿ, ದುಂದುವೆಚ್ಚ ಮಾಡದಿರಿ.
ತುಲಾ
ಮೋಸದಿಂದ ಬೇರೆಯವರ ಕೈ ಸೇರಿದ ನಿಮ್ಮ ಹಣ ಹಿಂತಿರುಗುವ ಸೂಚನೆಗಳು ಕಾಣುತ್ತವೆ. ಅನಾರೋಗ್ಯದ ಕಾರಣ ವೈದ್ಯರ ಭೇಟಿ ಮಾಡುವಿರಿ. ಕೋಪದ ಮೇಲೆ ನಿಯಂತ್ರಣವಿರಲಿ.
ವೃಶ್ಚಿಕ
ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಅಧಿಕ ಪರಿಶ್ರಮ ಹಾಕಿದರೂ ಅದೃಷ್ಟ ಕೈ ಕೊಡಲಿದೆ. ಹೆಚ್ಚಿನ ಜ್ಞಾನಸಂಪಾದನೆ ಬಗ್ಗೆ ಚಿಂತನೆ ನಡೆಯುವುದು. ತಾಯಿಯ ಕಡೆಯ ಅಪರೂಪದ ನೆಂಟರು ಬರುವರು.
ಧನು
ಸಿವಿಲ್ ಎಂಜಿನಿಯರ್‌ಗಳಿಗೆ ಹೆಚ್ಚು ಲಾಭದಾಯಕದ ದಿನ. ಅದೃಷ್ಟ ದೇವತೆ ಕೈ ಹಿಡಿದಿದ್ದಾಳೆ. ವ್ಯಾಪಾರ ವ್ಯವಹಾರಗಳು ಅಧಿಕ ವರಮಾನಗಳನ್ನು ತರಲಿದೆ. ಆಕಸ್ಮಿಕ ಧನಲಾಭ ಉಂಟಾಗಲಿದೆ.
ಮಕರ
ವೃತ್ತಿಯಲ್ಲಿ ಅನಿರೀಕ್ಷಿತವಾಗಿ ಸ್ಥಾನ-ಮಾನದಲ್ಲಿ ಏರುಪೇರಾಗುವಂಥ ಬದಲಾವಣೆಗಳಾಗಬಹುದು. ಯಾವುದೇ ರೀತಿಯ ವಿದೇಶಿ ಒಪ್ಪಂದಗಳನ್ನು ಮಾಡಿಕೊಳ್ಳದಿರುವಂತೆ ತೀರ್ಮಾನಿಸಿ.
ಕುಂಭ
ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರಲಿಕ್ಕಾಗಿ ಹರಸಾಹಸ ಪಡಬೇಕಾಗುವುದು. ಲಕ್ಷ್ಮಿ ವೆಂಕಟೇಶ್ವರನನ್ನು ಅನನ್ಯ ಭಕ್ತಿಯಿಂದ ಆರಾಧಿಸಿ ದಾರಿದ್ರ್ಯ ದೂರವಾಗುವುದು. ಸಾಮಾಜಿಕವಾಗಿ ಗೌರವ ಇಮ್ಮಡಿಗೊಳ್ಳಲಿದೆ.
ಮೀನ
ನಿಷ್ಕಪಟ ಸಮಾಜ ಸೇವೆಯನ್ನು ಕುಟುಂಬದವರು ಗುರುತಿಸಿ ಶ್ಲಾಘಿಸುವರು. ಅನೇಕ ಕಡೆಯಿಂದ ಸಹಾಯ ಹಸ್ತಗಳು ಸಿಗುವವು. ಇದೇ ಪ್ರೇರಣೆಯೊಂದಿಗೆ ಮುಂದುವರಿಯಿರಿ.
ADVERTISEMENT
ADVERTISEMENT