ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 7 ಶನಿವಾರ 2024- ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ
Published 6 ಸೆಪ್ಟೆಂಬರ್ 2024, 18:33 IST
ಪ್ರಜಾವಾಣಿ ವಿಶೇಷ
author
ಮೇಷ
ಲೇಖನಗಳಿಂದ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ. ಮದುವೆಯ ನಿಮಿತ್ತವಾಗಿ ಒಡವೆಗಳ ಖರೀದಿ ಮಾಡುವಿರಿ. ದೂರದ ಪ್ರಯಾಣದ ಮೊದಲು ಅಲ್ಲಿಯ ಸ್ಥಿತಿಗತಿಗಳನ್ನು ಬಲ್ಲವರಿಂದ ವಿಚಾರಿಸುವುದು ಸೂಕ್ತ.
ವೃಷಭ
ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಾಗುತ್ತಿರುವವರು ಯಾವುದೇ ಸಣ್ಣ ವಿಷಯಗಳನ್ನು ಸಹ ನಿರ್ಲಕ್ಷ್ಯ ಮಾಡುವಂತಿಲ್ಲ. ನಿಮ್ಮ ಕಠಿಣ ಪರಿಶ್ರಮದಿಂದಾಗಿ ಬೆಳೆಸಿದ ಸಂಸ್ಥೆ ಜನಮಾನಸವನ್ನು ಗೆಲ್ಲುವುದು. ವಿಶೇಷ ಖಾದ್ಯ ತಿನ್ನುವಿರಿ
ಮಿಥುನ
ನಿಮ್ಮ ಜೀವನದಲ್ಲಿ ನೀವು ನಿರೀಕ್ಷಿಸಿದ ಫಲಿತಾಂಶದ ಬದಲು ಬಂದಂತಹಾ ಫಲಿತಾಂಶವು ಹೆಚ್ಚಿನ ಸಂತೋಷವನ್ನು ನೀಡುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ.
ಕರ್ಕಾಟಕ
ನಿಮ್ಮ ವಿಷಯಗಳನ್ನು ಸೋರಿಕೆ ಮಾಡುತ್ತಿರುವವರು ಕುಟುಂಬದವರೇ ಇರಬಹುದು ಎಂಬ ಅನುಮಾನದಿಂದ ಪರೀಕ್ಷಿಸುವಿರಿ. ಕೋರ್ಟಿನ ಮೆಟ್ಟಿಲು ಹತ್ತಿಳಿಯಬೇಕಾಗುವುದು, ಜಯ ನಿಮ್ಮದೆ ಆಗಿರುತ್ತದೆ.
ಸಿಂಹ
ವೃತ್ತಿಯಲ್ಲಿ ಸ್ಥಾನಪಲ್ಲಟ ಬಯಸಿದ ನಿಮಗೆ ಹೊಸ ಕಾರ್ಯಸ್ಥಾನವು ಹಳೆಯದಕ್ಕಿಂತ ಕಳಪೆ ಮಟ್ಟದಲ್ಲಿ ತೋರಬಹುದು. ನಿಮ್ಮ ಕೆಲಸಗಳಲ್ಲಿ ಯಾವುದೇ ವಿಘ್ನಗಳು ಎದುರಾದರು ಸಹ ಅದು ಕ್ಷಣ ಮಾತ್ರದ್ದಾಗಿರುತ್ತದೆ.
ಕನ್ಯಾ
ಅನಿವಾರ್ಯ ಕಾರಣದಿಂದ ಬಹುಮುಖ್ಯವಾದ ಒಂದು ಕೆಲಸವನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ನೀವು ನಡೆಸುತ್ತಿರುವ ಶುಭ ಕಾರ್ಯಕ್ರಮಗಳಿಗೆ ಅಶೌಚದ ಆತಂಕ ಎದುರಾಗುವುದು. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
ತುಲಾ
ಮಧ್ಯಮವರ್ಗದ ಕುಟುಂಬದಲ್ಲಿ ಸಂಬಂಧಿಕರ ಎದುರು ಕೆಲವು ಇರಿಸು ಮುರಿಸುಗಳು ಆಗಬಹುದು. ಬೇಸರ ಪಡುವುದು ಬೇಡ. ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ತೋರಿಬರಲಿದೆ.
ವೃಶ್ಚಿಕ
ಉತ್ತಮವಾಗಿ ಅಂಕಗಳನ್ನು ಪಡೆಯುತ್ತಿದ್ದ ಮಕ್ಕಳು ಏಕಾಗ್ರತೆಯನ್ನು ಕಡಿಮೆ ಮಾಡಿದ ಕಾರಣ ನೀವು ಗಮನ ಹರಿಸಬೇಕಾಗುತ್ತದೆ. ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲು ಬದಲಾವಣೆಗಳು ಬರುವವು.
ಧನು
ಗೃಹ ವಸ್ತುಗಳ ಖರೀದಿ ಮಾಡಿ ಬಂದ ನಂತರ ನೀವು ಕೊಟ್ಟ ಹಣ ದುಬಾರಿಯಾಯಿತೆಂಬ ಪಶ್ಚಾತಾಪವಾಗಬಹುದು. ಸಣ್ಣ ಪುಟ್ಟ ವಿಷಯಗಳಿಗೆ ತಾಳ್ಮೆ ಕಳೆದುಕೊಂಡು ಸಹೋದರರ ಜೊತೆ ಕಲಹಗಳನ್ನು ಮಾಡುವಿರಿ.
ಮಕರ
ವ್ಯವಹಾರದಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಲಾಭ ಮಾಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಿರಿ. ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ಕೊಡುವಂತೆ ಅಧಿಕಾರಿಗಳಿಂದ ಆದೇಶವಾಗುವುದು.
ಕುಂಭ
ಆದಾಯ ಎಲ್ಲರ ಕಣ್ಣಿಗೂ ಅಧಿಕವಾಗಿ ಕಂಡರೂ ಅಧಿಕವಾದ ಖರ್ಚೂ ಸಹ ಇರುವುದರಿಂದ ಯಾವುದೇ ರೀತಿಯ ಉಳಿತಾಯ ಸಾಧ್ಯವಾಗುವುದಿಲ್ಲ. ಕ್ಷುಲ್ಲಕ ಕಾರಣಕ್ಕೆ ಉಂಟಾದ ಮನಸ್ತಾಪಗಳು ಬಗೆಹರಿದು ನೆಮ್ಮದಿ ಕಾಣುವಿರಿ.
ಮೀನ
ಅನುಕೂಲಕರ ವಾತಾವರಣವಿದ್ದಲ್ಲಿ ಇಂದು ನಿಮ್ಮ ವಿಶೇಷ ದಿನಗಳಿಗೆ ಬೇಕಾದ ವಸ್ತು ಖರೀದಿ ಮಾಡಿ. ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿ ಮುಖ್ಯವಾದ ವ್ಯಕ್ತಿಗಳ ಭೇಟಿಗೆ ವಿಘ್ನ ಇರಲಿದೆ.
ADVERTISEMENT
ADVERTISEMENT