ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
21/05/2023 - 27/05/2023
ವಾರ ಭವಿಷ್ಯ: 28-5-2023ರಿಂದ 03-6-2023 ರವರೆಗೆ
Published 27 ಮೇ 2023, 18:31 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 28) ಧಾರ್ಮಿಕ ಕಾರ್ಯಗಳಿಂದ ಧನಸಂಪಾದನೆ ಆಗುವ ಯೋಗವಿದೆ.ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿಯನ್ನು ತೋರುವಿರಿ. ವೃತ್ತಿಯ ಭಾಗವಾಗಿ ದೂರಪ್ರಯಾಣ ಮಾಡುವ ಸಾಧ್ಯತೆ ಇದೆ. ನಗರ ರಕ್ಷಕರಾಗಿರುವವರು ಹೆಚ್ಚಿನಒತ್ತಡದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆಮೂಡುತ್ತದೆ. ಸಂಸ್ಥೆಯ ಮುಖ್ಯಸ್ಥರಾಗಿ ರುವವರು ಆದರ ಏಳಿಗೆಗಾಗಿ ರಚನಾತ್ಮಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವರು. ಸರ್ಕಾರಿ ಸಹಾಯ ಧನಗಳು ಶೀಘ್ರವಾಗಿ ಬಂದು ತಲುಪುತ್ತವೆ. ಸೋದರಿ ಯರಿಂದ ನಿಮ್ಮ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಮಹಿಳೆಯರ ಅಭಿವೃದ್ಧಿ ಗಣನೀಯ ವಾಗಿ ಇರುತ್ತದೆ. ರಕ್ತದೊತ್ತಡ ಅಥವಾ ನರ ದೌರ್ಬಲ್ಯ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಖರ್ಚಿಗೆ ಕಡಿವಾಣ ಹಾಕುವುದು ಅಗತ್ಯ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ಕಾರ್ಯಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ದೊರೆಯುವ ಯೋಗವಿದೆ. ಕಟ್ಟಡ ನಿರ್ಮಾಣಮಾಡು ವವರು ನಿಗದಿತ ಸಮಯಕ್ಕೆನಿರ್ಮಾಣಕಾರ್ಯವನ್ನು ಮಾಡುವುದು ಒಳ್ಳೆಯದು. ಸಂಸಾರದೊಡನೆ ಈಗ ಸಂತೋಷವಾಗಿ ಕಾಲ ಕಳೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಈಗ ಸ್ವಲ್ಪ ಮಟ್ಟದ ಹಿನ್ನಡೆ ಇರುತ್ತದೆ. ಸಂಗಾತಿಯ ಅಭಿಪ್ರಾಯಗಳಿಗೆ ಹೆಚ್ಚು ಬೆಲೆ ಕೊಡುವಿರಿ. ಪುಸ್ತಕ ಪ್ರಕಾಶಕರಿಗೆ ಬೇಡಿಕೆ ಬಂದು ಕೆಲವು ಹಳೆಯ ಪುಸ್ತಕಗಳು ಖರ್ಚಾಗುತ್ತದೆ. ಸಾಂಪ್ರದಾಯಿಕ ಕೃಷಿಕರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಉದ್ಯೋಗದಲ್ಲಿ ಹಿತ ಶತ್ರುಗಳ ಕಾಟವಿದ್ದರೂ ಅಂತಹ ಅಡ್ಡಿಯೇನಿಲ್ಲ. ಹಣದ ಒಳಹರಿವು ತೃಪ್ತಿಕರವಾಗಿರು ತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಕಾನೂನಿನ ತೊಡಕುಗಳು ಎದುರಾಗಬಹುದು. ಆದಾಯದಷ್ಟೇ ಖರ್ಚು ಸಹ ಇರುತ್ತದೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ಜನರನ್ನು ಆಕರ್ಷಿಸುವ ಕಲೆ ಹಾಗೂ ಜನರನ್ನು ನಂಬಿಸುವ ಕಲೆ ಕರಗತವಾಗುತ್ತದೆ. ಸಂಶೋಧನೆ ಮಾಡುವವರು ವಿಷಯಗಳನ್ನು ಸರಿಯಾಗಿ ಅರಿಯು ವುದು ಒಳ್ಳೆಯದು. ಕಲಾವಿದರಿಗೆ ಉತ್ತಮ ಅವಕಾಶ ಗಳು ದೊರೆತು ಹೆಚ್ಚುಸಂಪಾದನೆಆಗುವಯೋಗವಿದೆ. ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುವ ನಿಮ್ಮಪ್ರಯತ್ನಕ್ಕೆ ಬೆಂಬಲ ದೊರೆಯುತ್ತದೆ.ಯೋಜಿತ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ಕೆಲವು ಋಣ ಪರಿಹಾರ ಮಾಡಿಕೊಳ್ಳುವ ಅವಕಾಶ ನಿಮಗೆ ದೊರೆಯುತ್ತದೆ. ಕೃಷಿಯಿಂದ ಆದಾಯವಿದ್ದರೂ ಸಹ ಅಷ್ಟೇ ಖರ್ಚು ಬರುತ್ತದೆ. ಹಣಕಾಸು ತಜ್ಞರಿಗೆ ಬೇಡಿಕೆ ಬಂದು ಹೆಚ್ಚು ಸಂಪಾದನೆಯಾಗುತ್ತದೆ. ನಿಮ್ಮ ಕೆಲವು ಕೆಲಸಗಳು ನಿಧಾನಗತಿಯಲ್ಲಿ ಸಾಗಿದರು ಸಹ ಕೆಲಸ ನಿಲ್ಲುವುದಿಲ್ಲ. ಶುಭ ಸಮಾರಂಭಗಳು ನಡೆಯುವ ಎಲ್ಲಾ ಸಾಧ್ಯತೆಗಳಿವೆ.
ಕರ್ಕಾಟಕ
( ಪುನರ್ವಸು 4 ಪುಷ್ಯ ಆಶ್ಲೇಷ) ಆದಾಯ ಉತ್ತಮವಾಗಿದ್ದರೂ ಸಹ ದುಂದು ವೆಚ್ಚಗಳು ಅಧಿಕವಾಗಬಹುದು. ವ್ಯಾಪಾರಗಾರರಿಗೆ ಮಾರಾಟಉತ್ತಮವಾಗಿ ಆದಾಯ ಹೆಚ್ಚುತ್ತದೆ. ಹೊಸ ಆಸ್ತಿ ಖರೀದಿಯ ವಿಷಯದಲ್ಲಿ ಆತುರ ಬೇಡ. ಮಕ್ಕಳ ವಿಚಾರದಲ್ಲಿ ಅನವಶ್ಯಕ ಚಿಂತೆ ಬೇಡ. ಆಡಳಿತಾತ್ಮಕ ಹುದ್ದೆಯಲ್ಲಿರುವವರು ಕೆಲವು ದೃಢ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗುತ್ತದೆ. ಎಲ್ಲರೊಂದಿಗೆ ಹೊಂದಿ ಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಮಾತಿನ ಚತುರತೆಯಿಂದ ಎಲ್ಲರನ್ನೂ ಆಕರ್ಷಿಸುವಿರಿ, ಹಾಗೂ ಉತ್ತಮ ಸಂಘಟನೆಯನ್ನು ಮಾಡುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಂದ ಹಿರಿಯ ಅಧಿಕಾರಿಗಳ ಗಮನ ಸೆಳೆಯುವಿರಿ. ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣುವ ಯೋಗವಿದೆ. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ.
ಸಿಂಹ
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ನಿಮ್ಮ ಖಾಸಗಿ ಬದುಕಿನಲ್ಲಿ ಆಸೆಗಳು ಬಹುಮಟ್ಟಿಗೆ ಈಡೇರುವುದರಿಂದ ಹೊಸ ಹುರುಪು ಮೂಡಲಿದೆ. ಕೆಲವೊಂದು ವಿಷಯಗಳಲ್ಲಿ ಸ್ವತಂತ್ರ ವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಕುಟುಂಬ ದವರೊಡನೆ ಕುಳಿತುಚರ್ಚಿಸಿ ನಿರ್ಧಾರ ತೆಗೆದುಕೊಳ್ಳು ವುದು ಒಳ್ಳೆಯದು. ಬಹಳಹಿಂದೆ ಸಾಲಕೊಟ್ಟಿದ್ದ ಹಣ ಈಗ ವಾಪಸ್ಸು ಬರಬಹುದು.ವೃತ್ತಿರಂಗದಲ್ಲಿ ಅನವಶ್ಯ ಕವಾಗಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗು ವಿರಿ. ಜೀವನಶೈಲಿಯಲ್ಲಿ ಕೆಲವೊಂದು ಸಂತೋಷದ ಘಟನೆಗಳು ಜರುಗುತ್ತದೆ. ಸಂಗಾತಿಯೊಡನೆ ಕೋಪ ಮಾಡಿಕೊಳ್ಳುವುದಕ್ಕಿಂತ ತಾಳ್ಮೆ ವಹಿಸುವುದು ಬಹಳ ಉತ್ತಮ. ಧನಾದಾಯವು ಸಾಮಾನ್ಯ ಗತಿಯಲ್ಲಿರು ತ್ತದೆ. ಆಸ್ತಿಮಾರಾಟದಬಗ್ಗೆ ಹೆಚ್ಚು ಗಮನಹರಿಸುವಿರಿ. ಮಹಿಳೆಯರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಉತ್ತಮ ಆದಾಯ ವಿರುತ್ತದೆ.
ಕನ್ಯಾ
(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಬಂಧುಗಳಲ್ಲಿ ನಿಮ್ಮ ಸಲಹೆಯನ್ನು ಒಪ್ಪುವಂತೆ ಮನ ಪರಿವರ್ತನೆ ಮಾಡಲು ವಿಫಲರಾಗುವಿರಿ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆಯನ್ನು ಕಾಣಬಹುದು. ವೃತ್ತಿಯಲ್ಲಿ ಉತ್ತಮ ವಿದ್ಯಾಬಲ ಇದ್ದವರಿಗೆ ಸೂಕ್ತ ಸ್ಥಾನಮಾನ ದೊರೆಯುವ ಸಾಧ್ಯತೆಯಿದೆ. ವಿಚಾರದ ಬರವಣಿಗೆ ಗಾರರಿಗೆ ಭಾಷಣಕಾರರಿಗೆ ಗೌರವ ದೊರೆಯುತ್ತದೆ. ಕೃಷಿಕರಿಗೆ ಕೃಷಿಯಿಂದ ಆದಾಯದ ಜೊತೆಗೆ ಬಹಳ ನೆಮ್ಮದಿ ಸಹ ಇರುತ್ತದೆ. ಕುಟುಂಬದಲ್ಲಿ ಮತ್ತು ಬಂಧು ಗಳ ಜೊತೆ ಶಾಂತತೆಯಿಂದ ವ್ಯವಹರಿಸುವುದು ಅತಿ ಮುಖ್ಯವಾಗಲಿದೆ. ಹಣದ ಒಳಹರಿವು ಮಂದಗತಿ ಯಲ್ಲಿ ಇರುತ್ತದೆ. ಖರ್ಚು ಕಡಿಮೆ ಮಾಡದಿದ್ದಲ್ಲಿ ಸಾಲದ ಸುಳಿಗೆ ಸಿಲುಕುವ ಸಂದರ್ಭವಿದೆ. ಮೂಳೆ ತೊಂದರೆ ಇರುವವರಿಗೆ ಸ್ವಲ್ಪ ಬಾದೆ ಕಾಡಬಹುದು.
ತುಲಾ
(ಚಿತ್ತಾ 3 4 ಸ್ವಾತಿ ವಿಶಾಖ 1 2 3) ಪಾಲುದಾರರ ಜೊತೆ ಇದ್ದ ಮುನಿಸುಗಳನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುವುದು ನಿಮಗೆ ಒಳ್ಳೆಯದು. ಸಾಮಾಜಿಕ ಸೇವೆಯಲ್ಲಿರುವವರು ಸರಿಯಾಗಿ ಲೆಕ್ಕಪತ್ರ ಇಡುವುದು ಬಹಳ ಒಳ್ಳೆಯದು. ಸಂಶೋಧನಾಕಾರರಿಗೆ ಅವರ ಸಂಶೋಧನಾ ವಿಷಯಕ್ಕೆ ಇರುವ ಪ್ರಾಮುಖ್ಯತೆ ಈಗಅರಿವಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾ ಗುವ ಸಂದರ್ಭವಿದೆ. ಕುಟುಂಬದಲ್ಲಿ ಹೊಂದಿಕೊಂಡು ಬದುಕುವುದು ಬಹಳ ಮುಖ್ಯ, ಇದರಿಂದ ನಿಮಗೆ ಒಳಿತಾಗುತ್ತದೆ. ಬಟ್ಟೆ ಉದ್ಯಮದವರಿಗೆ ಹೆಚ್ಚಿನ ವ್ಯವ ಹಾರಗಳಾಗುವ ಸಂದರ್ಭವಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ವ್ಯವಹಾರ ದಲ್ಲಿ ನಿಮ್ಮ ಸ್ಥಾನಮಾನಗಳ ಬಗ್ಗೆ ಅರಿತು ಮಾತನಾಡಿ ಇಲ್ಲವಾದಲ್ಲಿ ವ್ಯವಹಾರದಿಂದ ಹೊರ ಬರಬೇಕಾ ಗುತ್ತದೆ.
ವೃಶ್ಚಿಕ
(ವಿಶಾಖಾ 4 ಅನುರಾಧ ಜೇಷ್ಠ) ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದ ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆ ನಿಮಗೆ ದೊರೆಯುತ್ತದೆ. ಹಿರಿಯರನ್ನು ಸನ್ಮಾನಿಸಿ ಸಂತೋಷ ಪಡುವಿರಿ. ರಾಜಕೀಯ ವ್ಯಕ್ತಿಗಳು ಜನಮನ್ನಣೆ ಪಡೆಯಲು ಸಾಕಷ್ಟು ಶ್ರಮಪಡುವರು.ಪ್ರವೃತ್ತಿಯಿಂದ ಹಣ ಸಂಪಾದನೆ ಹೆಚ್ಚಾಗುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ವಿದೇಶಕ್ಕೆ ಹೋಗಬೇಕೆ ನ್ನುವವರಿಗೆ ಈಗ ಅವಕಾಶಗಳು ಪ್ರಾಪ್ತಿಯಾಗುತ್ತವೆ. ವಿದೇಶಿ ಭಾಷೆಯನ್ನು ಕಲಿಯಬೇಕೆನ್ನುವವರಿಗೆ ಸೂಕ್ತ ಅವಕಾಶ ದೊರೆಯುತ್ತದೆ.ಪ್ರಮುಖ ಯೋಜನೆಗಳನ್ನು ಈಗ ಆರಂಭಿಸುವುದು ಬೇಡ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇರುತ್ತದೆ. ಮಕ್ಕಳಿ ಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಸಂಗಾತಿಯ ವ್ಯಕ್ತಿತ್ವ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅವರ ಆದಾಯದಲ್ಲಿ ಹೆಚ್ಚಳವಾಗುತ್ತದೆ.
ಧನು
(ಮೂಲ ಪೂರ್ವಾಷಾಢ ಉತ್ತರಾಷಾಢ 1) ಸಂಸಾರದಲ್ಲಿ ಎಲ್ಲರನ್ನೂ ಅನುಸರಿಸಿಕೊಂಡು ಜಾಣ್ಮೆ. ತೋರುವಿರಿ. ವೃತ್ತಿಪರವಾಗಿ ಬಹಳ ದಿನಗಳ ನಿರೀಕ್ಷಿತ ಕಾರ್ಯಕ್ಕೆ ಈಗ ಒಪ್ಪಿಗೆ ದೊರೆಯುವುದು. ತರಕಾರಿ ಬೆಳೆಗಾರರಿಗೆ ಸಮಾಧಾನಕರ ವರಮಾನ ಇರುತ್ತದೆ.ಸಾಕು ಪ್ರಾಣಿಗಳಿಂದ ತೊಂದರೆಬರಬಹುದು ಅವುಗಳಜೊತೆ ಎಚ್ಚರದಿಂದ ವ್ಯವಹರಿಸಿ.ಕೌಟುಂಬಿಕ ಸಮಸ್ಯೆಗಳು ಹೊಸ ಆಯಾಮ ಪಡೆದು ಸುಖಾಂತ್ಯ ಆಗುತ್ತದೆ .ಸಂಗೀತ ಶಿಕ್ಷಕರಿಗೆ ಮನಸ್ಸಿಗೆ ತೃಪ್ತಿ ಕೊಡು ವಂತಹ ಶಿಷ್ಯರು ದೊರೆಯುತ್ತಾರೆ. ಗುತ್ತಿಗೆದಾರರ ನಿರ್ಮಾಣ ಕೆಲಸಗಳು ಪೂರ್ತಿ ಗೊಂಡು ಮನಸ್ಸಿಗೆ ಸಂತೋಷವಾಗುತ್ತದೆ. ಶತ್ರುಗಳನ್ನು ಮಟ್ಟ ಹಾಕಲು ಹೊಸ ಉಪಾಯಗಳನ್ನು ಹುಡುಕುವಿರಿ. ಹಣದ ಒಳ ಹರಿವು ಮಂದಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಕಾಲ.
ಮಕರ
ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ಅಬಕಾರಿ ಅಧಿಕಾರಿಗಳಿಗೆ ಹೊಸ ಪ್ರಸಂಗವನ್ನು ಭೇಧಿಸುವ ಕೆಲಸ ದೊರೆಯುತ್ತದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟುಒತ್ತಡವಿರುತ್ತದೆ. ಸಿವಿಲ್ ಕಂಟ್ರಾಕ್ಟರ್ಗಳಿಗೆ ಉತ್ತಮ ಕೆಲಸ ದೊರೆತು ಸಂತಸವಾಗುತ್ತದೆ. ತಂದೆ ತಾಯಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಿಗೆ ಇರುವುದರಿಂದ ಜವಾಬ್ದಾರಿಯಿಂದ ಕೆಲಸ ಮಾಡಿರಿ ಮತ್ತು ಗುರಿ ಸಾಧಿಸುವ ಬಗ್ಗೆ ಗಮನ ಇರಲಿ. ಹಣದ ಒಳಹರಿವು ಮಂದಗತಿಯಲ್ಲಿದ್ದರೂ ಸಹ ಸಾಲ ಮಾಡಬೇಕಾದ ಪರಿಸ್ಥಿತಿ ಇರುವುದಿಲ್ಲ. ಒಳ್ಳೆಯ ಪಾಲುದಾರಿಕೆ ವ್ಯವ ಹಾರಗಳಲ್ಲಿ ನಿಮಗೆ ಅವಕಾಶ ದೊರೆಯುವ ಸಂಭವ ವಿದೆ. ಸಂಗಾತಿಗೆ ಆಸ್ತಿ ದೊರೆಯುವ ಸಂದರ್ಭವಿದೆ. ಆಭರಣ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ವಿರುತ್ತದೆ.
ಕುಂಭ
(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಗೃಹ ನಿರ್ಮಾಣ ಕಾರ್ಯವನ್ನು ಆಲೋಚಿಸಿ ಮಾಡಿರಿ. ನಿಮ್ಮ ಕೆಲಸ ಕಾರ್ಯಗಳಿಂದ ಹೆಚ್ಚಿನ ಹಣ ಸಂಪಾದನೆಯಾಗುತ್ತದೆ. ಧಾರ್ಮಿಕ ವೃತ್ತಿ ಮಾಡುವವ ರಿಗೆ ಹೆಚ್ಚಿನ ಆದಾಯ ವಿರುತ್ತದೆ. ಕೃಷಿಕರು ದಳ್ಳಾಳಿಗ ಳಿಂದ ಮೋಸ ಹೋಗುವ ಸಾಧ್ಯತೆ ಗಳಿವೆ, ಎಚ್ಚರ ವಹಿಸಿರಿ. ಯುವಕರು ಅತಿಯಾದ ಮಾತಿನಿಂದ ಅವ ಮಾನಕ್ಕೆ ಒಳಗಾಗುವ ಸಾಧ್ಯತೆಗಳಿವೆಎಚ್ಚರದಿಂದಿರಿ. ಬಂಧುಗಳೊಂದಿಗೆ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಪ್ರಯತ್ನಪಡುವಿರಿ. ವಂಶ ಪಾರಂಪರ್ಯವಾಗಿ ಮಾಡ ಬೇಕಾಗಿದ್ದ ಧಾರ್ಮಿಕ ಕಾರ್ಯಗಳ ಬಗ್ಗೆ ಗಮನಹರಿ ಸುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ಫ್ಯಾಶನ್ ಡಿಸೈನಿಂಗ್ ಮಾಡುವವರಿಗೆ ಕೈ ತುಂಬಾ ಕೆಲಸವಿರು ತ್ತದೆ ಹಾಗೂ ಸಂಪಾದನೆ ಇರುತ್ತದೆ. ಉಸಿರಾಟದ ಸಮಸ್ಯೆ ಇರುವವರು ಎಚ್ಚರವಹಿಸಿರಿ.
ಮೀನ
ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಉದ್ಯೋಗಸ್ಥ ಮಹಿಳೆಯರಿಗೆ ಅಧಿಕ ಕೆಲಸದ ಜೊತೆ ಅಧಿಕ ಆದಾಯವು ಇರುತ್ತದೆ. ದಿನಸಿ ಸಗಟು ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಿರುತ್ತದೆ.ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಹಿರಿಯರನ್ನು ಒಪ್ಪಿಸಿ ಮನೆ ನವೀಕರಣ ಕಾರ್ಯಕ್ಕೆ ಕೈ ಹಾಕುವಿರಿ, ಇದಕ್ಕೆ ಅವರಿಂದ ಧನಸಹಾಯ ಸಿಗುವಸಾಧ್ಯತೆ ಇದೆ. ಹೊಸ ವಾಹನ ಮಾರಾಟಗಾರರಿಗೆ ವ್ಯವಹಾರ ವೃದ್ಧಿಸುವ ಸಾಧ್ಯತೆ ಇದೆ. ವಾಣಿಜ್ಯ ರಂಗದಲ್ಲಿ ಹೊಸ ವ್ಯವಹಾರ ದೊರೆತು ಹೊಸ ಆದಾಯ ಬರುವ ಸಾಧ್ಯತೆ ಇದೆ. ಮಕ್ಕಳಿಂದ ಕಠಿಣ ಮಾತುಗಳನ್ನು ಕೇಳಬೇಕಾಗಿ ಬರಬಹುದು. ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ ಹಾಗೂ ಅವಕಾಶಗಳು ದೊರೆಯುತ್ತವೆ. ಶೀತ ಬಾದೆ ಇರುವವರು ಹೆಚ್ಚು ಎಚ್ಚರದಲ್ಲಿರುವುದು ಉತ್ತಮ. ಸಂಗಾತಿಯೊಡನೆ ಭಿನ್ನಾಭಿಪ್ರಾಯಕ್ಕಿಂತ ಹೊಂದಾಣಿಕೆ ಉತ್ತಮವಾಗುತ್ತದೆ.
ADVERTISEMENT
ADVERTISEMENT