ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹೊಸ ಜೀವನ ಪ್ರಾರಂಭವಾಗುವುದರಿಂದ ದೇವತಾ ಕಾರ್ಯ ಗಳ ಬಗ್ಗೆ ಯೋಚಿಸಿ.
Published 8 ಫೆಬ್ರುವರಿ 2024, 23:53 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಗೆ ಸಂಬಂಧಿಸಿದಂತೆ ಕೆಲವೊಂದು ಉಪಯುಕ್ತ ಮಾಹಿತಿಗಳು ಲಭಿಸುವವು. ಕೋರ್ಟ್ ವ್ಯವಹಾರದಲ್ಲಿ ದೇವರ ಕೃಪೆಯಿಂದ ನಿಮ್ಮ ನಿರೀಕ್ಷೇಗೂ ಮೀರಿದ ಜಯ ಸಿಗುವುದು. ದಂತ ಬೇನೆ ಕಾಣಬಹುದು.
ವೃಷಭ
ಸಂಕಷ್ಟಕ್ಕೆ ಸಿಲುಕಿರುವ ನಿಮಗೆ ಅಪರಿಚಿತರಿಂದ ಸಹಾಯ ಹಸ್ತಗಳು ಪ್ರಾಪಿಯಾಗುವುದು. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಈ ದಿನ ಅಧ್ಯಯನಕ್ಕೆ ಸುಸಮಯ. ವಾಹನ ಚಾಲನೆ ವೇಳೆ ಜಾಗ್ರತರಾಗಿರಿ.
ಮಿಥುನ
ಯಾವುದೇ ಸಂಕೋಚವಿಲ್ಲದೆ ನೂತನ ಕಾರ್ಯಭಾರವನ್ನು ಒಪ್ಪಿಕೊಳ್ಳಿ. ಏಕೆಂದರೆ ನಿಮ್ಮ ಮೇಲಿರುವ ನಂಬುಗೆ ಮತ್ತು ವಿಶ್ವಾಸದಿಂದಾಗಿ ಈ ಅವಕಾಶಗಳು ನಿಮ್ಮದಾಗಲಿವೆ. ವಿಲಾಸಿ ಜೀವನದ ಸುಖ ಅನುಭವಿಸಬಹುದು.
ಕರ್ಕಾಟಕ
ಹೊಸ ಜೀವನ ಪ್ರಾರಂಭವಾಗುವುದರಿಂದ ದೇವತಾ ಕಾರ್ಯ ಗಳನ್ನು ಜರುಗಿಸುವ ಬಗ್ಗೆ ಯೋಚಿಸಿ. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕ ಬೇಡ. ಕ್ರೀಡೆಗಳಲ್ಲಿ ಹೆಚ್ಚಿನ ಸಮಯ ಕಳೆಯುವಿರಿ.
ಸಿಂಹ
ನಿಮ್ಮ ತಂದೆಯ ಕನಸಾದ ಒಂದು ಹೊಸ ಯೋಜನೆಯನ್ನು ನೀವು ಪ್ರಾರಂಭಿಸುವಿರಿ. ಸಂಸ್ಥೆಯೊಂದರ ಸಲಹೆಗಾರರಾಗಿ ನೇಮಕಗೊಂಡಿರುವ ನಿಮ್ಮಿಂದ ಈ ದಿನ ಸಂಸ್ಥೆಗೆ ನಷ್ಟ ಸಂಭವಿಸುವಂತಾಗಬಹುದು ಜಾಗ್ರತರಾಗಿರಿ.
ಕನ್ಯಾ
ಕೆಲಸ ಕಾರ್ಯದಲ್ಲಿ ಸಮಾನ ಮನಸ್ಕರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರವು ಸುಗಮವಾಗುತ್ತದೆ. ನಿಮ್ಮ ಪರೋಪಕಾರ ಮನೋಭಾವದಿಂದಾಗಿ ಯಶಸ್ಸು ಲಭಿಸಲಿದೆ.
ತುಲಾ
ಆಲಸ್ಯಕರ ದೇಹ ಸ್ಥಿತಿಯಿಂದ ಕೆಲಸ ಕಾರ್ಯ ವಿಳಂಬಗತಿಯಲ್ಲಿ ಸಾಗಲಿದೆ. ಆದಾಯ ಸ್ಥಿರವಾಗಿ ಇರುವುದು. ಮನಸ್ಸಿನಲ್ಲಿ ಏಕಾಗ್ರತೆಯಿಂದ ಶಿವನ ನಾಮ ಸ್ಮರಣೆ ಅಥವಾ ಧ್ಯಾನ ಮಾಡುವುದು ಒಳ್ಳೆಯದು.
ವೃಶ್ಚಿಕ
ಅಪರೂಪದ ಮತ್ತು ಸಂತೋಷಮಯವಾದ ಔತಣ ಕೂಟ ವೊಂದರಲ್ಲಿ ಭಾಗವಹಿಸುವ ಸಲುವಾಗಿ ಆಮಂತ್ರಣ ಬರಲಿದೆ. ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂದ ಅನೇಕ ಅನುಕೂಲಗಳು ಉಂಟಾಗಲಿವೆ.
ಧನು
ದಾಖಲೆ ಪತ್ರಗಳನ್ನು ಬರೆಸುವ ಸಂದರ್ಭವಿದ್ದಲ್ಲಿ, ಸಂಖ್ಯೆಗಳಲ್ಲಿ ಅಥವಾ ವಾಕ್ಯಗಳಲ್ಲಿ ಹೆಚ್ಚಿನ ಗಮನವಹಿಸಿ ಮತ್ತು ಪರಿಣತರ ಅನುಭವವನ್ನು ಕೇಳಿ ಮುನ್ನುಗ್ಗಿ. ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ಮಕರ
ನಿಮ್ಮ ಪರೋಪಕಾರದಂಥ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳಿಗೆ ಸಂತಸವಾಗುವುದು. ಹೂಡಿಕೆ ವಿಚಾರದಲ್ಲಿ ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಿ. ಭವಿಷ್ಯದ ಕುರಿತು ಗಂಭೀರ ಚರ್ಚೆ ನಡೆಸುವಿರಿ.
ಕುಂಭ
ಬಹಳ ದಿನದ ನಂತರ ಸಹೋದರಿ ಆಗಮನ ಮತ್ತು ಭೇಟಿಯು ಮನೆಯ ಸಂತೋಷಕ್ಕೆ ಕಾರಣವಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳನ್ನು ಈ ದಿನದಲ್ಲಿ ಪೂರ್ತಿಗೊಳಿಸುವ ಪ್ರಯತ್ನ ಮಾಡಿ.
ಮೀನ
ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಹೆಂಡತಿಯ ಬಳಗದಲ್ಲಿ ಆದಷ್ಟು ಮೌನವಾಗಿರಲು ನಿಶ್ಚಯಿಸಿ. ನೂತನ ವಾಹನ ಕೊಳ್ಳುವುದನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವುದು ಎಲ್ಲಾ ರೀತಿಯಲ್ಲೂ ಉತ್ತಮ.