ಗುರುವಾರ, 10 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
06/04/2025 - 12/04/2025
ವಾರ ಭವಿಷ್ಯ: 2025 ಏಪ್ರಿಲ್ 13 ರಿಂದ 19ರವರೆಗೆ
Published 12 ಏಪ್ರಿಲ್ 2025, 23:27 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
( ಅಶ್ವಿನಿ ಭರಣಿ ಕೃತಿಕ 1) ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ನಿಮ್ಮ ಬಂಧುಗಳ ಸಹಕಾರ ನಿಮಗೆ ದೊರೆಯುವುದಿಲ್ಲ. ಭೂಮಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಸಂಗಾತಿಯ ವಿಪರೀತ ಖರ್ಚುಗಳು ಗಾಬರಿ ಹುಟ್ಟಿಸುತ್ತದೆ. ಕೃಷಿಯಿಂದ ಅನಿರೀಕ್ಷಿತ ಆದಾಯ ಬರುತ್ತದೆ. ಹಿರಿಯರಿಂದ ಧನಸಹಾಯವನ್ನು ನಿರೀಕ್ಷೆ ಮಾಡಬಹುದು. ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
ವೃಷಭ
(ಕೃತಿಕಾ 2 3 4 ರೋಹಿಣಿ ಮೃಗಶಿರಾ1 2) ಗೌರವಯುತವಾದ ನಡವಳಿಕೆಯನ್ನು ಅಳವಡಿಸಿಕೊಳ್ಳುವಿರಿ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಎಲ್ಲರ ಸಹಕಾರ ನಿಮಗೆ ದೊರೆಯುತ್ತದೆ. ಕೃಷಿಭೂಮಿಯನ್ನು ಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಸಂಗಾತಿಯಿಂದ ನಿಮ್ಮ ಕೃಷಿ ಕಾರ್ಯಕ್ರಮಗಳಿಗೆ ಹೆಚ್ಚು ಸಹಕಾರ ದೊರೆಯುತ್ತದೆ. ಕೆಲವರಿಗೆ ಅನಿರೀಕ್ಷಿತ ಆದಾಯ ಲಭಿಸುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಿದೇಶಿ ವ್ಯವಹಾರ ಮಾಡುವವರ ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ಕೃಷಿಯಿಂದ ಆದಾಯವಿರುತ್ತದೆ. ನಿಮ್ಮ ಬಂಧುಗಳ ಸಹಕಾರ ನಿಮಗೆ ದೊರೆಯುತ್ತದೆ. ಪಶುಸಂಗೋಪನೆ ಮಾಡುವವರಿಗೆ ಲಾಭವಿದೆ. ವೃತ್ತಿಯಲ್ಲಿ ಸಂಪಾದನೆ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರಿಗೆ ಬಾಯಿ ಹುಣ್ಣು ಕಾಡಬಹುದು. ಶಾಲಾ ಕಾಲೇಜನ್ನು ನಡೆಸುವವರಿಗೆ ಕಾನೂನಿನ ತೊಡಕುಗಳು ಎದುರಾಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಬರುತ್ತದೆ.  ಆಮದು ಮತ್ತು ರಫ್ತು ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ಕ್ರೀಡಾಪಟುಗಳಿಗೆ ಬೇಕಾದ ಸೌಲಭ್ಯ ದೊರೆಯುತ್ತದೆ.
ಕರ್ಕಾಟಕ
( ಪುನರ್ವಸು 4 ಪುಷ್ಯ ಆಶ್ಲೇಷ) ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಮಹಿಳೆಯರಿಂದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಆಸ್ತಿ ಕೊಳ್ಳಲು ತಯಾರಿ ನಡೆಸಬಹುದು. ಕ್ರೀಡಾಪಟುಗಳಿಗೆ ಸಾಮರ್ಥ್ಯವನ್ನು ತೋರಿಸಲು ಉತ್ತಮ ಅವಕಾಶ ದೊರೆಯುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಅಷ್ಟು ಲಾಭವಿರುವುದಿಲ್ಲ. ಸಂಗಾತಿಯು ತಮ್ಮ ಸಂಪಾದನೆಯಲ್ಲಿ ಹೆಚ್ಚಿನ ಭಾಗ ಸಂಸಾರಕ್ಕೆ ಬಳಸುವವರು. ವಿದೇಶಿ ವ್ಯವಹಾರ ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳನ್ನು ಕಾಣಬಹುದು.
ಸಿಂಹ
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಅಧಿಕ ಒತ್ತಡದ ನಡುವೆ ಕೆಲಸ ಮಾಡುವಿರಿ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಮಹಿಳೆಯರಿಂದ ಅಡ್ಡಿಬರಬಹುದು. ಭೂ ವ್ಯವಹಾರಗಳಲ್ಲಿ ಅಷ್ಟು ಲಾಭ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ರಾಜಕೀಯ ನಾಯಕರುಗಳಿಗೆ ಕಳೆದು ಹೋಗಿದ್ದ ಜನ ಬೆಂಬಲ ಪುನಃ ದೊರೆಯುತ್ತದೆ. ಸಂಗಾತಿಯು ತನ್ನೆಲ್ಲಾ ಸಂಪಾದನೆಯನ್ನು ಸಂಸಾರಕ್ಕಾಗಿ ವಿನಿಯೋಗಿಸುವರು. ವಿದೇಶಿ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಕಡಿಮೆ. ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಶಾಲಾ ಕಾಲೇಜು ನಡೆಸುವವರಿಗೆ ಅಭಿವೃದ್ಧಿ ಇರುತ್ತದೆ.
ಕನ್ಯಾ
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಮನಸಿನಲ್ಲಿ ಸ್ಥಿರ ಭಾವನೆಗಳಿರುವುದಿಲ್ಲ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿಯಿಂದ ಸಾಕಷ್ಟು ಲಾಭವನ್ನು ಪಡೆಯಬಹುದು. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರ ನಡೆಯುತ್ತದೆ. ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳಬಹುದು. ಕಬ್ಬಿಣ ಮತ್ತು ಉಕ್ಕಿನ ಮಾರಾಟಗಾರರಿಗೆ ಸಾಕಷ್ಟು ಲಾಭವಿರುತ್ತದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದು. ಸಾವಯವ ಕೃಷಿ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ.
ತುಲಾ
( ಚಿತ್ತಾ 3 4 ಸ್ವಾತಿ ವಿಶಾಖ 1 2 3) ಸರಿಯಾದ ನಿರ್ಧಾರಗಳಿಲ್ಲದೆ ಮನಸ್ಸು ಗೊಂದಲದ ಗೂಡಾಗುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಕೆಲವು ಕೆಲಸಗಳಿಗೆ ಹಿರಿಯರಿಂದ ವಿರೋಧ ಬರಬಹುದು. ಕೃಷಿಭೂಮಿಯನ್ನು ವ್ಯಾಪಾರ ಮಾಡುವ ದಲ್ಲಾಳಿಗಳಿಗೆ ಹೆಚ್ಚಿನ ಕಮಿಷನ್ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಫಲಿತಾಂಶ ಪಡೆಯುವುದು ಕಷ್ಟವಾಗಬಹುದು. ಹಳೆಯ ಕೀಲು ನೋವುಗಳು ಕೆಲವರನ್ನು ಕಾಡಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ಮನೆಪಾಠ ಮಾಡುವವರಿಗೆ ಕಾನೂನಿನ ತೊಡಕುಗಳು ಬರಬಹುದು. ವೃತ್ತಿಯಲ್ಲಿದ್ದ ಕೆಲವು ಗೊಂದಲಗಳು ಪರಿಹಾರವಾಗುತ್ತವೆ.
ವೃಶ್ಚಿಕ
( ವಿಶಾಖಾ 4 ಅನುರಾಧ ಜೇಷ್ಠ) ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾದ ಪರಿಸ್ಥಿತಿ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಜನ ಬೆಂಬಲ ದೊರೆಯುತ್ತದೆ. ಕೃಷಿ ಸಂಶೋಧನಾಕಾರರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ವಿದ್ಯಾರ್ಥಿಗಳು ಶ್ರಮಪಟ್ಟು ಉತ್ತಮ ಫಲಿತಾಂಶ ಪಡೆಯಬಹುದು. ಬೆಂಕಿಯ ಜೊತೆ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಕೆಲಸ ಮಾಡಿ. ಕೃಷಿಯಿಂದ ಸಾಕಷ್ಟು ಲಾಭವನ್ನು ನಿರೀಕ್ಷೆ ಮಾಡಬಹುದು.
ಧನು
( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ನಿಮ್ಮ ಶತ್ರುಗಳಿಗೂ ಸಹಾಯ ಮಾಡುವಿರಿ. ಆದಾಯವು ಕಡಿಮೆ ಇದ್ದು ಅದರಲ್ಲೇ ನಿರ್ವಹಣೆ ಮಾಡುವಿರಿ. ವಿದೇಶದಲ್ಲಿರುವವರು ಅಲ್ಲಿಯೇ ಸ್ಥಿರಾಸ್ತಿ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮ ಹಾಕಿ ಫಲಿತಾಂಶ ಪಡೆಯಬಹುದು. ಸಿರಾಸ್ತಿ ಮಾಡಲು ಸಂಗಾತಿಯಿಂದ ಧನಸಹಾಯ ಒದಗುತ್ತದೆ. ಕೃಷಿಯಿಂದ ನಿರೀಕ್ಷಿತ ಆದಾಯ ಇರುವುದಿಲ್ಲ. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು.
ಮಕರ
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ನಿಮ್ಮ ಪರಿಶ್ರಮದಿಂದ ವೃತ್ತಿಯಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ. ಆದಾಯವು ಕಡಿಮೆ ಇದ್ದು ಅದರಲ್ಲೇ ನಿರ್ವಹಣೆ ಮಾಡುವಿರಿ. ನಿಮ್ಮ ಬಂಧುಗಳ ಅಡ್ಡಿಯ ನಡುವೆಯೂ ನಿಮ್ಮ ಗುರಿ ಸಾಧಿಸುವಿರಿ. ಕಟ್ಟಡ ನಿರ್ಮಾಣಕಾರರಿಗೆ ಉತ್ತಮ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಫಲಿತಾಂಶ ಪಡೆಯುವ ಯೋಗವಿದೆ. ಸ್ವಂತ ಆರೋಗ್ಯದ ಕಡೆ ಗಮನವಿರಲಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ ಇರುತ್ತದೆ. ಹಿರಿಯರ ಮಾರ್ಗದರ್ಶನದಿಂದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಬಹುದು.
ಕುಂಭ
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಸಮಾಜಮುಖಿಯಾಗಿ ಕೆಲಸ ಮಾಡುವಿರಿ. ಆದಾಯವು ನಿರೀಕ್ಷೆಯಷ್ಟಿರುತ್ತದೆ. ಸಂಬಂಧಿಕರಿಗೆ ಕೊಟ್ಟ ಸಾಲ ವಾಪಸ್ ಬರುವುದಿಲ್ಲ. ಸ್ಥಿರಾಸ್ತಿಯನ್ನು ಕೊಳ್ಳುವ ಯೋಚನೆ ಮಾಡಬಹುದು. ಹೊಸ ವ್ಯಾಪಾರ ವ್ಯವಹಾರಗಳಲ್ಲಿ ನಿಮಗೆ ಅವಕಾಶ ದೊರೆಯುತ್ತದೆ. ಹರಿತವಾದ ಆಯುಧಗಳ ಜೊತೆ ಕೆಲಸ ಮಾಡುವವರು ಎಚ್ಚರದಿಂದ ಮಾಡಿ. ಸಂಗಾತಿಯ ಸಹಾಯದಿಂದ ಸರ್ಕಾರಿ ಅನುದಾನಗಳು ಸುಲಭವಾಗಿ ದೊರೆಯುತ್ತವೆ. ಮಾನಸಿಕ ರೋಗಿಗಳು ಚಿಕಿತ್ಸೆ ಪಡೆಯುವುದು ಉತ್ತಮ. ಹಿರಿಯರಿಂದ ಧನಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.
ಮೀನ
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಅತಿಯಾದ ಆತ್ಮವಿಶ್ವಾಸ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಧರ್ಮದ ಕಡೆಗೆ ಮನಸ್ಸು ಹೆಚ್ಚು ವಾಲುತ್ತದೆ. ಮಕ್ಕಳಿಂದ ಸೂಕ್ತ ಗೌರವ ದೊರೆಯುವುದಿಲ್ಲ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಸಂಗಾತಿಯ ಸಹಕಾರದೊಂದಿಗೆ ಸಂಪಾದನೆಯನ್ನು ಹೆಚ್ಚು ಮಾಡಿಕೊಳ್ಳಬಹುದು. ಕೃಷಿಯಿಂದ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಬಹುದು. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳನ್ನು ಓಲೈಕೆ ಮಾಡಬೇಕಾಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭ ದೊರೆಯುತ್ತದೆ.
ADVERTISEMENT
ADVERTISEMENT