ಭಾನುವಾರ, 23 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
16/11/2025 - 22/11/2025
ವಾರ ಭವಿಷ್ಯ | 2025 ನವೆಂಬರ್ 23ರಿಂದ29 ರವರೆಗೆ: ಇವರ ಆದಾಯವು ಕಡಿಮೆ ಇರುತ್ತದೆ
Published 22 ನವೆಂಬರ್ 2025, 23:51 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಆರಂಭದಲ್ಲಿ ಸ್ವಲ್ಪ ಆಲಸಿತನವಿದ್ದರೂ, ನಂತರ ಚುರುಕಾಗುವಿರಿ. ಆದಾಯವು ಕಡಿಮೆ ಇರುತ್ತದೆ. ಸಂಗಾತಿಯ ಸಹಾಯದಿಂದ ಆದಾಯವನ್ನು ಹೆಚ್ಚುಮಾಡಿಕೊಳ್ಳಬಹುದು. ಬಂಧುಗಳು ಆಸ್ತಿ ವ್ಯವಹಾರಗಳಲ್ಲಿ ಕಿರಿಕಿರಿ ಮಾಡಬಹುದು. ಹಿರಿಯರ ಆಸ್ತಿ ಲಭಿಸುವ ಸಾಧ್ಯತೆಗಳಿವೆ. ಪಾದಗಳಲ್ಲಿ ನೋವು ಕಾಣಿಸಬಹುದು. ಔಷಧ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಿರುತ್ತದೆ.  ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ಬಹಳ ಬುದ್ಧಿವಂತಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ಮಧ್ಯಮಗತಿಯಲ್ಲಿ ಇರುತ್ತದೆ. ಹಿರಿಯರನ್ನು ಓಲೈಸಿ ಬೆಂಬಲ ಗಳಿಸುವಿರಿ. ತೆರಿಗೆ ತಜ್ಞರಿಗೆ ಸೂಕ್ತ ಪದೋನ್ನತಿ ದೊರೆಯುತ್ತದೆ. ನೂತನ ವಾಹನದ ಖರೀದಿ ಬಗ್ಗೆ ಸಾಕಷ್ಟು ಚಿಂತನೆ ಮಾಡುವಿರಿ. ವ್ಯಾಪಾರದಲ್ಲಿನ ನಿಮ್ಮ ಮುಂದಾಲೋಚನೆ ಒಳಿತನ್ನು ಮಾಡುತ್ತದೆ. ಮಕ್ಕಳ ನಡುವೆ ಹೊಂದಾಣಿಕೆ ಕಡಿಮೆಯಾಗಿ ನಿಮಗೆ ಬೇಸರವಾಗಬಹುದು. ಕೆಲವು ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ಮೀರಿ ಇರುತ್ತದೆ. ಆಸ್ತಿ ವಿವಾದಗಳಲ್ಲಿ ರಾಜಿ ಸಂಧಾನಗಳು ನಡೆದು ಸುಖಾಂತ್ಯವಾಗುತ್ತದೆ. ವ್ಯವಹಾರದಲ್ಲಿ ಹೊಸ ವ್ಯಕ್ತಿಗಳಿಂದ ಸಹಕಾರ ದೊರೆಯುತ್ತದೆ. ಸಂಗೀತ ವಿದ್ವಾಂಸರುಗಳಿಗೆ ಪುರಸ್ಕಾರ ದೊರೆಯುವ ಸಾಧ್ಯತೆಯಿದೆ. ಮಿಶ್ರಲೋಹಗಳ ವ್ಯಾಪಾರ ಮಾಡುವವರಿಗೆ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ಹಣಕಾಸು ಸಂಸ್ಥೆಗಳಲ್ಲಿ ಪಾಲುದಾರರ ವ್ಯತಿರಿಕ್ತ ತೀರ್ಮಾನಗಳಿಂದ ಸ್ವಲ್ಪ ನಷ್ಟ ಆಗಬಹುದು. ವೃತ್ತಿಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಗಂಭೀರ ಮತ್ತು ಗೌರವಯುತ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ನಿರೀಕ್ಷೆಗಿಂತ ಕಡಿಮೆ ಇರುತ್ತದೆ. ವಿದೇಶಿದಲ್ಲಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಆದಾಯ ಹೆಚ್ಚಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ನೌಕರಿಯಲ್ಲಿರುವವರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಸಂಗಾತಿಯ ಆದಾಯ ಕಡಿಮೆಯಾಗಬಹುದು.  ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಯಾವುದೇ ವಿಚಾರಗಳಲ್ಲೂ ಹೆಚ್ಚು ಆಸಕ್ತಿ ಇರುವುದಿಲ್ಲ. ಆದಾಯವು ಸಾಮಾನ್ಯವಾಗಿರುತ್ತದೆ. ಆಸ್ತಿ ವಿಚಾರಗಳಲ್ಲಿ ಗೊಂದಲಗಳಾಗಬಹುದು. ಹಿರಿಯರು ಮಕ್ಕಳೊಂದಿಗೆ ವಾದವಿವಾದಗಳನ್ನು ಮಾಡದಿರುವುದು ಉತ್ತಮ. ಮೂಳೆ ಸಂಬಂಧಿತ ದೋಷಗಳು ಕಾಣಿಸಬಹುದು. ವಿದೇಶದಲ್ಲಿ ಕೆಲಸದಲ್ಲಿ ಇರುವವರಿಗೆ ಸಾಕಷ್ಟು ಸವಲತ್ತುಗಳು ದೊರೆಯುತ್ತವೆ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಆದಾಯವು ಸ್ವಲ್ಪ ಏರಿಕೆ ಹಾದಿಯಲ್ಲಿ ಇರುತ್ತದೆ. ಹಿರಿಯರ ಜೊತೆ ವಾಗ್ವಾದಗಳು ನಿಮಗೆ ನಷ್ಟ ಉಂಟುಮಾಡುತ್ತವೆ. ಉನ್ನತ ಶಿಕ್ಷಣದ ಆಸೆಗೆ ಸ್ವಲ್ಪ ಹಿನ್ನಡೆಯಾಗಬಹುದು. ಯಂತ್ರೋಪಕರಣಗಳ ವ್ಯಾಪಾರ ಮಾಡುವವರಿಗೆ ವ್ಯಾಪಾರ ವೃದ್ಧಿಸುತ್ತದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿನ ದುಗುಡವನ್ನು ದೂರಮಾಡಿಕೊಳ್ಳುವಿರಿ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಶ್ರೀಮಂತರಂತೆ ತೋರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುವಿರಿ. ಸಹೋದರಿಯರಿಂದ ನಿಮಗೆ ಸಹಕಾರ ಸಿಗುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಆಸ್ತಿಯ ಖರೀದಿ ವಿಚಾರದಲ್ಲಿ ಎಚ್ಚರವಾಗಿರಿ. ಕುಟುಂಬದಲ್ಲಿನ ವಾದ ವಿವಾದಗಳಿಂದ ಸಾಕಷ್ಟು ಬೇಸರ ಮೂಡಬಹುದು. ನಿಮ್ಮ ಸಂಗಾತಿಯ ವ್ಯತಿರಿಕ್ತ ನಡವಳಿಕೆಗಳಿಂದ ಮುಜುಗರವಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪ ಯಶಸ್ಸು ಇರುತ್ತದೆ.  ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ಜನರಿಂದ ಗೌರವವನ್ನು ನಿರೀಕ್ಷೆ ಮಾಡುವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ತೆರೆದುಕೊಳ್ಳುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇಕಾದ ಸಲಕರಣೆಗಳು ಒದಗಿಬರುತ್ತವೆ. ಸಂಗಾತಿಗೆ ನೆರೆಹೊರೆಯವರಿಂದ ವಿರೋಧ ಎದುರಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುವುದಿಲ್ಲ. ಹಣಕಾಸು ವ್ಯವಹಾರವನ್ನು ಮಾಡುವವರು ಎಚ್ಚರವಾಗಿರಿ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಆದಾಯ ಹೆಚ್ಚುತ್ತದೆ. ( ವಿಶಾಖಾ 4 ಅನುರಾಧ ಜೇಷ್ಠ)
ಧನು
ವಾರದ ಆರಂಭದಲ್ಲಿ ಬಹಳ ಆನಂದವಿರುತ್ತದೆ. ಆದಾಯವು ಕಡಿಮೆ ಇದ್ದರೂ ಕೂಡ ತೊಂದರೆ ಇರುವುದಿಲ್ಲ. ಬಂಧುಗಳ ಸಹಾಯದಿಂದ ವಿದೇಶ ಪ್ರಯಾಣ ಮಾಡಬಹುದು. ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವವರಿಗೆ ಸಹಾಯಧನಗಳು ನಿಧಾನವಾಗಿ ಬರುತ್ತದೆ. ಬಂಧುಗಳ ಸಹಕಾರದಿಂದ ಪ್ರೇಮ ಪ್ರಕರಣಗಳು ಯಶಸ್ವಿಯಾಗುತ್ತವೆ. ಮನೆಯನ್ನು ಆಧುನಿಕ ರೀತಿಯಲ್ಲಿ ನವೀಕರಣ ಮಾಡಲು ಪ್ರಯತ್ನ ಪಡುವಿರಿ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ವ್ಯವಹಾರಗಳಿಂದ ನಿಮ್ಮ ಸಂಪರ್ಕವನ್ನು ವೃದ್ಧಿ ಮಾಡಿಕೊಳ್ಳುವಿರಿ. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಶತ್ರುಗಳನ್ನು ನಿಗ್ರಹ ಮಾಡುವಲ್ಲಿ ಯಶಸ್ಸನ್ನು ಪಡೆಯುವಿರಿ. ವೈಯಕ್ತಿಕ ವಿವರಗಳನ್ನು ಹೆಚ್ಚು ಬಹಿರಂಗಪಡಿ ಸುವುದು ಬೇಡವೇ ಬೇಡ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುತ್ತವೆ. ಹೊಸ ಆಸ್ತಿ ಕೊಳ್ಳುವ ಬಗ್ಗೆ ಚಿಂತನೆಯನ್ನು ಮಾಡಬಹುದು. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ವಿದೇಶಕ್ಕೆ ಹೋಗಬೇಕೆಂಬವರ ಆಸೆ ಈಡೇರುತ್ತದೆ. ಆದಾಯವು ಕಡಿಮೆ ಇರುತ್ತದೆ. ಆತ್ಮೀಯರ ಸಲಹೆಯಿಂದ ವೃತ್ತಿಯಲ್ಲಿ ಎದುರಾದ ಆಪತ್ತಿನಿಂದ ಪಾರಾಗುವಿರಿ. ಯುವಕರು ಉಡಾಫೆ ಮಾತುಗಳಿಂದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ಕೆಲವು ವ್ಯವಹಾರಗಳಿಗೆ ಹೂಡಿಕೆ ಮಾಡುವಂತೆ ಬಂಧುಗಳು ಒತ್ತಾಯ ಮಾಡುವರು. ಸ್ವಯಂ ಉದ್ಯೋಗಿಗಳು ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಕುಟುಂಬ ಸಮೇತರಾಗಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ಅತಿಯಾದ ಉದಾಸೀನ ನಿಮಗೆ ಪೆಟ್ಟುಕೊಡಬಹುದು. ಆದಾಯವು ಸಾಮಾನ್ಯವಾಗಿರುತ್ತದೆ. ಮಹಿಳೆಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ದಿನಸಿ ವ್ಯಾಪಾರ ಮಾಡುವವರಿಗೆ ಈಗ ಅಭಿವೃದ್ಧಿ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯುತ್ತದೆ. ನಿಮ್ಮ ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಮುಖ್ಯ. ತರಕಾರಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯನ್ನು ತೋರಿಸುವ ಅವಕಾಶ ಒದಗುತ್ತದೆ. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) 
ADVERTISEMENT
ADVERTISEMENT