ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
28/07/2024 - 03/08/2024
ವಾರ ಭವಿಷ್ಯ | ಆ. 4ರಿಂದ 10ರವರೆಗೆ: ಈ ರಾಶಿಯಯವರ ಆದಾಯ ನಿಧಾನಗತಿಯಲ್ಲಿರಲಿದೆ
Published 3 ಆಗಸ್ಟ್ 2024, 23:33 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವಾರದ ಆರಂಭ ಉತ್ತಮವಾಗಿರುತ್ತದೆ ಆದಾಯ ವೃದ್ಧಿಸುತ್ತದೆ. ನಡವಳಿಕೆಯಿಂದ ಆದಾಯ ಮಾಡಿಕೊಳ್ಳಲು ಪ್ರಯತ್ನಪಡುವಿರಿ. ಸ್ಥಿರಾಸ್ತಿಯ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಅಧ್ಯಯನಶೀಲರಿಗೆ ಉತ್ತಮ ಫಲಿತಾಂಶ ಮತ್ತು ಸೌಕರ್ಯ ದೊರೆಯುತ್ತದೆ. ಆರೋಗ್ಯ ದಲ್ಲಿ ಸೂಕ್ಷ್ಮ ವ್ಯತ್ಯಾಸಗಳನ್ನು ಕಾಣಬಹುದು ಸಂಗಾತಿಯಿಂದ ನಿಮ್ಮ ಅಧ್ಯಯನಕ್ಕೆ ಸಹಕಾರ ಸಿಗುತ್ತದೆ. ಉದ್ಯೋಗದ ಸ್ಥಳದಲ್ಲಿ ಕಾರ್ಮಿಕರ ಹೊಂದಾಣಿಕೆಯನ್ನು ಪಡೆಯುವ ಯೋಗವಿದೆ. ವಿದೇಶಿ ವ್ಯವಹಾರಗಳಲ್ಲಿ ಅಷ್ಟು ಯಶಸ್ಸು ಇರುವುದಿಲ್ಲ. ಹೆಚ್ಚಿನ ಒಳಿತಿಗಾಗಿ ದುರ್ಗಾ ಪ್ರಾರ್ಥನೆಯನ್ನು ಮಾಡಿರಿ. ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ಸಮಾಜದಿಂದ ಒಂದು ರೀತಿ ಗೌರವ ದೊರೆಯುತ್ತದೆ. ಆದಾಯ ಮಧ್ಯಮ ಗತಿಯಲ್ಲಿರುತ್ತದೆ. ಖರ್ಚುಹೆಚ್ಚಾಗುವ ಸಂದರ್ಭಗಳಿವೆ. ಕೃಷಿಗಾಗಿ ಹೆಚ್ಚುಹಣ ಖರ್ಚಾಗಬಹುದು.ಬಂಧು ಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶಗಳು ಒದಗುತ್ತವೆ. ಸರ್ಕಾರಿಕೆಲಸದಲ್ಲಿ ರುವವರಿಗೆ ಉತ್ತಮ ಅನುಕೂಲಗಳು ದೊರೆ ಯುತ್ತವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಆರೋಗ್ಯ ದಲ್ಲಿ ಸುಧಾರಣೆಯನ್ನು ಕಾಣಬಹುದು. ನಿಮ್ಮ ಸಂಗಾತಿಗೆ ತವರುಮನೆಯಿಂದಭೂಮಿಸಿಗುವ ಸಾಧ್ಯತೆಯಿದೆ. ಅನಿರೀಕ್ಷಿತವಾಗಿ ಧನಸಹಾಯ ಒದಗುವ ಸಾಧ್ಯತೆ ಇದೆ. ಹೆಚ್ಚಿನ ಒಳಿತಿಗಾಗಿ ಗಣೇಶನ ಧ್ಯಾನ ಮಾಡಿರಿ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ವಾರದ ಆರಂಭದಲ್ಲಿ ತಲೆಯ ತುಂಬಾ ಹೊಸ ಹೊಸ ಯೋಜನೆಗಳನ್ನು ತುಂಬಿಕೊಂಡಿರುವಿರಿ. ಆದಾಯವು ನಿರೀಕ್ಷಿತ ಮಟ್ಟದಲ್ಲಿರ ತ್ತದೆ. ಸರ್ಕಾರದಿಂದಬರಬೇಕಾದಆದಾಯಗಳು ಸರಾಗವಾಗಿ ಬರುತ್ತವೆ. ಬಂಧುಗಳೊಂದಿಗೆ ಉತ್ತಮ ಅನುಬಂಧ ಹೊಂದುವಿರಿ. ಕುಟುಂಬ ದಲ್ಲಿ ದೈವಕಾರ್ಯಕ್ಕಾಗಿ ಸಾಕಷ್ಟು ಹೊಂದಾಣಿಕೆ ಏರ್ಪಡುತ್ತದೆ. ಆಸ್ತಿ ಖರೀದಿಯ ವಿಚಾರದಲ್ಲಿ ಆತುರತೆ ಬೇಡ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರುತ್ತದೆ. ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿ ತೊಂದರೆಯಾಗಬಹುದು. ನಿಮ್ಮ ಸಂಗಾತಿಯ ಖರ್ಚಿಗೋಸ್ಕರ ಹೆಚ್ಚು ಹಣ ಮೀಸಲಿಡಬೇಕಾಗುತ್ತದೆ. ಹೆಚ್ಚಿನ ಒಳಿತಿಗಾಗಿ ಈಶ್ವರನ ಧ್ಯಾನ ಮಾಡಿರಿ. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಸಿಹಿ ಕಹಿ ಮಿಶ್ರಿತ ವಾರವಾಗಿರುತ್ತದೆ. ಆದಾಯ ಉತ್ತಮವಾಗಿರುತ್ತದೆ. ದೇವರಿಗೆ ಸಂಬಂಧಿಸಿದ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಬಂಧುಗಳಲ್ಲಿ ಹಿರಿಯರು ನಿಮಗೆ ಸಹಕಾರ ಕೊಡುವರು. ಭೂಮಿಯಿಂದ ಆದಾಯವಿರು ತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚು. ಕೃಷಿಯಿಂದ ಆದಾಯ ವಿರುತ್ತದೆ. ಕೃಷಿ ಸಹಾಯಧನಗಳು ಈಗ ಸಿಗುತ್ತವೆ. ಹರಿತವಾದ ವಸ್ತುಗಳಿಂದ ಗಾಯವಾಗಬಹುದು ಎಚ್ಚರ ವಹಿ ಸಿರಿ. ರಾಜಕಾರಣಿಗಳಿಗೆ ಜನ ಬೆಂಬಲ ಕಡಿಮೆ ಯಾಗುವ ಸಾಧ್ಯತೆಗಳಿವೆ. ಮಕ್ಕಳ ಸಲುವಾಗಿ ವಿದೇಶಕ್ಕೆ ಹೋಗಿಬರಬಹುದು.ಕಬ್ಬಿಣದ ಕಚ್ಚಾ ವಸ್ತುಗಳನ್ನು ಉತ್ಪಾದನೆ ಮಾಡುವವರಿಗೆ ಹೆಚ್ಚು ವ್ಯವಹಾರ ನಡೆದು ಆದಾಯ ಹೆಚ್ಚುತ್ತದೆ ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಬುದ್ಧಿವಂತಿಕೆ ನಿಮ್ಮ ಮೈಗೂಡಿರುತ್ತದೆ. ಆದಾಯ ಕಡಿಮೆಮಟ್ಟದಲ್ಲಿ ಇರುತ್ತದೆ.ಸೋದರಿಯರ ಸಹಕಾರ ಸ್ವಲ್ಪಮಟ್ಟಿಗೆ ಸಿಗುತ್ತದೆ. ವೃತ್ತಿ ಯಲ್ಲಿ ಹಿರಿಯರ ಸಹಕಾರದಿಂದ ಅಭಿವೃದ್ಧಿ ಇರುತ್ತದೆ. ಮಕ್ಕಳಿಗೆ ಕೆಲಸ ಸಿಗುವ ಸಾಧ್ಯತೆಗ ಳಿವೆ. ರಾಜಕಾರಣಿಗಳಿಗೆ ಅಪವಾದ ಬರುವ ಸಾಧ್ಯತೆಗಳಿವೆ. ಹಿರಿಯ ಸಂಬಂಧಿಗಳು ನಿಮ್ಮ ಸಹಕಾರಕ್ಕೆ ಬರುವರು. ಉದ್ಯೋಗದಲ್ಲಿ ಈಗ ಸಂಪಾದನೆ ಹೆಚ್ಚಾಗುವ ಸಂದರ್ಭವಿದೆ.ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ಹಿರಿಯರ ಜೊತೆ ಸೇರಿ ವಿದೇಶಿ ವ್ಯವಹಾರಗಳನ್ನು ಮಾಡ ಬಹುದು. ಕೃಷಿ ಪಂಡಿತರಿಗೆ ಹೆಚ್ಚು ಗೌರವ ದೊರೆಯುತ್ತದೆ. ತಾಯಿಯಿಂದ ಹೆಚ್ಚಿನ ಸಹ ಕಾರಗಳು ದೊರೆಯುತ್ತವೆ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ಬಹಳ ದ್ವಂದ್ವ ನಿರ್ಧಾರಗಳು ನಿಮ್ಮಲ್ಲಿರತ್ತವೆ, ಯಾವುದೇ ವಿಚಾರಗಳಲ್ಲೂ ಸ್ಪಷ್ಟ ನಿರ್ಧಾರ ಬಹಳ ಮುಖ್ಯ. ಆದಾಯದಷ್ಟೇ ಖರ್ಚು ಇರುವುದರಿಂದ ಹಣನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಕುಸ್ತಿಪಟುಗಳಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಇವರಿಗೆ ಹೆಚ್ಚಿನ ಸಂಭಾವನೆ ಸದಾ ಸಿಗುತ್ತದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುತ್ತದೆ. ಆಟೋ ಮೊಬೈಲ್ ರಿಪೇರಿ ಮಾಡುವವರಿಗೆ ಹೆಚ್ಚು ಅವಕಾಶಗಳು ದೊರೆತು ಹೆಚ್ಚು ಸಂಪಾ ದನೆಯಾಗುತ್ತದೆ.ಮನೆ ಪಾಠ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಸಮಾಜದ ಮೇಲೆ ನಿಮಗೆ ಭಯ ಮಿಶ್ರಿತ ಗೌರವವಿರುತ್ತದೆ. ಆದಾಯ ಮಧ್ಯಮ ಗತಿಯಲ್ಲಿರುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪ ದಾಖಲೆಗಳ ವ್ಯತ್ಯಾಸವಾಗಬಹುದು. ವಿದ್ಯಾರ್ಥಿ ಗಳಿಗೆ ನಿರೀಕ್ಷಿತ ಪಲಿತಾಂಶವಿರುವುದಿಲ್ಲ. ವಿದೇಶಿ ಭಾಷೆಗಳನ್ನು ಕಲಿಯುತ್ತಿರುವವರಿಗೆ ಉತ್ತಮ ಅನುಕೂಲತೆ ಇರುತ್ತದೆ. ಸಾಹಸ ಕಲಾ ವಿದರಗಳಿಗೆ ಕಲೆಯನ್ನ ಪ್ರದರ್ಶನ ಮಾಡುವಾಗ ತೊಂದರೆಯಾಗುವ ಸಾಧ್ಯತೆಗಳಿವೆ. ಸಂಗಾತಿ ಯಿಂದ ಕೃಷಿಗೆ ಬಂಡವಾಳ ಸಿಗುತ್ತದೆ. ಸರ್ಕಾರಿ ಕೆಲಸಗಳು ಸ್ವಲ್ಪ ನಿಧಾನವಾಗುತ್ತವೆ.ವೃತ್ತಿಯಲ್ಲಿ ಶತ್ರುಗಳನ್ನು ಜಾಸ್ತಿ ಮಾಡಿಕೊಳ್ಳುವಿರಿ. ಗುತ್ತಿಗೆ ದಾರರಿಗೆ ಸರ್ಕಾರದಿಂದ ಅನಿರೀಕ್ಷಿತವಾಗಿ ಗುತ್ತಿಗೆಗಳು ದೊರೆಯಬಹುದು. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ಸಮಾಜದಿಂದ ಗೌರವ ದೊರೆಯುತ್ತದೆ. ಆದಾಯ ಅವಶ್ಯಕತೆಯನ್ನು ಪೂರೈಸುತ್ತದೆ. ಕೆಲವೊಂದು ವಿಷಯಗಳಲ್ಲಿ ಖಡಾ ಖಂಡಿತ ವಾಗಿ ನಿಮ್ಮ ಅಭಿಪ್ರಾಯ ತಿಳಿಸಿಕೊಡಿ. ನಿಮ್ಮ ಹಿತ ಶತ್ರುಗಳ ಬಗ್ಗೆ ಗಮನವಿರಲಿ. ರಾಜಕಾರಣಿ ಗಳಿಗೆ ಸ್ಥಾನ ಸೌಖ್ಯತೆ ಇರುತ್ತದೆ. ಮಕ್ಕಳಿಂದ ಅಂತಹ ಸಹಕಾರ ಇರುವುದಿಲ್ಲ. ವಿದೇಶದಲ್ಲಿ ರುವ ಮಕ್ಕಳನ್ನು ನೋಡಲು ಹೋಗಬಹುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿಯಿಂದ ಅವಶ್ಯಕತೆಗೆ ತಕ್ಕ ಸಹಕಾರಗಳು ದೊರೆಯುತ್ತಿರುತ್ತವೆ. ಸಂಗಾತಿಯ ಆರೋಗ್ಯಕ್ಕಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಅದಿರು ಮಾರಾಟಗಾರರಿಗೆ ಅನಿರೀಕ್ಷಿತ ಲಾಭ ಇರುತ್ತದೆ. ( ವಿಶಾಖಾ 4 ಅನುರಾಧ ಜೇಷ್ಠ)
ಧನು
ವಾರದ ಆರಂಭದಲ್ಲಿ ಸ್ವಲ್ಪ ಆಲಸೀತನ ನಿಮ್ಮಲ್ಲಿ ಇರುತ್ತದೆ. ಮಾತನಾಡುವಾಗ ಸೌಮ್ಯ ವಾಗಿದ್ದು ಶತ್ರುಗಳ ಎದೆ ನಡುಗುವಂತೆ ಮಾಡು ವಿರಿ. ಶತ್ರು ನಿಗ್ರಹದಲ್ಲಿ ಯಶಸ್ವಿಯಾಗುವಿರಿ. ಹೊರದೇಶದಲ್ಲಿರುವವರು ಸ್ಥಿರಾಸ್ತಿಮಾಡಿಕೊ ಳ್ಳಲು ಸಕಾಲ. ಕೃಷಿಯಿಂದ ನಿರೀಕ್ಷಿತ ಆದಾಯ ವಿಲ್ಲದಿದ್ದರೂ ನಷ್ಟವಿರುವುದಿಲ್ಲ. ಹಿರಿಯರ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಣಬಹುದು. ಸಂಗಾತಿಯು ಮಾಡುವ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ನಷ್ಟವಾಗುವ ಸಾಧ್ಯತೆಗಳಿವೆ. ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡು ವವರಿಗೆ ಲಾಭವಿದೆ. ಬೆಳ್ಳಿ ವಸ್ತು ತಯಾರಕರಿಗೆ ಲಾಭವಿದೆ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ಕಷ್ಟ ಸಹಿಷ್ಣುವಾಗಿರುವಿರಿ. ಮಾತಿನಲ್ಲಿ ಎಚ್ಚರಿಕೆ ಇರಲಿ. ಆದಾಯ ಸಾಮಾನ್ಯ ಗತಿಯ ಲ್ಲಿರುತ್ತದೆ. ಕೆಲಸ ಕಾರ್ಯಗಳಿಗೆ ಹೊಸ ಶತ್ರು ಗಳು ಬರಬಹುದು. ಹೊಸ ವಿಷಯಗಳನ್ನು ಕಲಿಯುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನು ಕೂಲವಿರುತ್ತದೆ. ಕೃಷಿಕರಿಗೆ ನಿರೀಕ್ಷಿತ ಸಹಾಯ ಧನಗಳು ಹರಿದು ಬರುತ್ತವೆ. ಮಹಿಳೆಯರ ಜೊತೆ ವ್ಯವಹಾರ ಮಾಡುವಾಗ ಎಚ್ಚರವಿರಲಿ. ಸಂಗಾತಿಯ ಸಹಾಯದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುತ್ತದೆ. ಕೃಷಿ ಸಂಶೋಧಕರಿಗೆ ಬೇಡಿಕೆ ಬರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಸ್ವಲ್ಪಹಣ ಖರ್ಚಾಗು ತ್ತದೆ. ಧಾರ್ಮಿಕ ಸಂಘಟನೆಯಲ್ಲಿರುವವರಿಗೆ ಹೆಚ್ಚಿನ ಸ್ಥಾನಮಾನ ದೊರೆಯುತ್ತದೆ. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಹಿಡಿದ ಕೆಲಸವನ್ನು ಸಾಧಿಸುವಿರಿ. ಮಾತಿನಲ್ಲಿ ಒರಟುತನ ಬೇಡ. ವಿದೇಶಿ ವ್ಯವ ಹಾರ ಮಾಡುವವರಿಗೆ ಆದಾಯ ಸಾಕಷ್ಟು ಹೆಚ್ಚುತ್ತದೆ. ಹಿರಿಯರು ತಮ್ಮ ನಡವಳಿಕೆಯಿಂದ ಸಮಾಜದಲ್ಲಿ ಗೌರವ ಪಡೆಯುವರು.ವಿದ್ಯಾರ್ಥಿ ಗಳಿಗೆ ಹೆಚ್ಚಿನ ಅನುಕೂಲವಿರುತ್ತದೆ ಮತ್ತು ಉತ್ತಮ ಫಲಿತಾಂಶ ಸಹ ಸಿಗುತ್ತದೆ. ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿರಿ.ಸರ್ಕಾರಿ ಸಾಲಗಳು ಈಗ ಸರಾಗವಾಗಿ ದೊರೆಯುತ್ತವೆ. ಸಂಗಾತಿ ಕಡೆಯವರ ಜೊತೆ ಕೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಸ್ತ್ರೀಯರು ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡು ವರು. ಪಿತೃ ಕಾರ್ಯಗಳನ್ನು ಮಾಡಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ನಿಮ್ಮ ನಡವಳಿಕೆ ಮತ್ತು ವೇಷಭೂಷಣ ಗಳಲ್ಲಿ ವಿದೇಶಿ ಛಾಯೆ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಚಟುವಟಿಕೆ ಗಳಿಂದ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳ ಬಹುದು. ಸಂಸಾರದಲ್ಲಿ ಹಣಕಾಸಿನ ವಿಚಾರ ವಾಗಿ ಕಾವೇರಿದ ಮಾತುಗಳಾಗಬಹುದು. ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವಿರಿ. ಉಸಿ ರಾಟದಲ್ಲಿ ವ್ಯತ್ಯಾಸವಾದರೆ ಚಿಕಿತ್ಸೆಗೆ ಹೋಗಿರಿ. ಧಾರ್ಮಿಕ ಕಾರ್ಯಕ್ರಮಗಳಿಂದ ಸಂಗಾತಿ ಸಂಪಾದನೆ ಹೆಚ್ಚುತ್ತದೆ. ಕಬ್ಬಿಣ ಸಂಸ್ಕರಣೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮೂಳೆಗಳಲ್ಲಿ ಹೆಚ್ಚಾಗಿ ಸೆಳೆತ ಆಗುವ ಸಾಧ್ಯತೆ ಇದೆ.ಕೃಷಿ ವಿದ್ವಾಂಸರಗಳಿಗೆ ಉತ್ತಮ ಗೌರವವಿರುತ್ತದೆ. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)