ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
23/06/2024 - 29/06/2024
ವಾರ ಭವಿಷ್ಯ: ಭೂ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ
Published 29 ಜೂನ್ 2024, 23:57 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ದೇಹಾ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ನಿಮ್ಮ ಕೆಲವು ನಡವಳಿಕೆಗಳ ಬಗ್ಗೆ ಹಿರಿಯರು ವಿರೋಧ ವ್ಯಕ್ತಪಡಿಸುವರು. ಭೂ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಅಧ್ಯಯನಶೀಲರು ಪ್ರತಿಕ್ಷಣವೂ ಅದಕ್ಕಾಗಿ ಮೀಸಲಿಡುವುದು ಒಳ್ಳೆಯದು. ಜೀರ್ಣಕ್ರಿಯ ಬಗ್ಗೆ ಎಚ್ಚರವಹಿಸಿರಿ. ಸಂಗಾತಿಯು ನಿಮ್ಮ ಮೇಲೆ ಪ್ರಭಾವ ಬೀರಲು ಪ್ರಯತ್ನ ಪಡುವರು. ತೆರಿಗೆ ತಜ್ಞರು ತಮ್ಮ ಕೆಲಸದಲ್ಲಿ ಹೆಚ್ಚು ಎಚ್ಚರವಾಗಿರುವುದು ಒಳ್ಳೆಯದು. ಪಶುಸಂಗೋಪನೆ ಮಾಡುವವರಿಗೆ ಆದಾಯ ಕಡಿಮೆಯಾಗಬಹುದು. ಹಿರಿಯರ ಆಸ್ತಿ ವಿಚಾರದಲ್ಲಿ ಹೊಸ ತಕರಾರುಗಳು ಬರಬಹುದು. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ.
ವೃಷಭ
ಸ್ವತ್ತಿನ ದಾಖಲೆಗಳ ವಿಚಾರದಲ್ಲಿ ಸ್ವಲ್ಪ ತಕರಾರು ಮೂಡಬಹುದು. ಹಿರಿಯರಿಂದ ಧನ ಸಹಾಯ ಸಿಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಹೆಚ್ಚಿನ ಸ್ಥಾನ ದೊರೆಯಬಹುದು. ವಿದೇಶಕ್ಕೆ ಹೋಗುವ ಆಟಗಾರರು ಕ್ರೀಡಾಪಟುಗಳು ತಮ್ಮ ದಾಖಲೆಯ ಬಗ್ಗೆ ಎಚ್ಚರ ವಹಿಸಿರಿ. ಭೂಮಿ ಸಂಬಂಧಿತ ವ್ಯವಹಾರ ಮಾಡುವವರಿಗೆ ಸ್ವಲ್ಪ ನಷ್ಟವಾಗುವ ಸಾಧ್ಯತೆಗಳಿವೆ. ಹೈನುಗಾರಿಕೆ ಮಾಡುವವರಿಗೆ ಸಿಗಬೇಕಾದ ಸಹಾಯ ಧನಗಳು ಬರುತ್ತವೆ. ಉದ್ಯೋಗದಲ್ಲಿ ಶ್ರಮ ಪಟ್ಟು ಮೇಲೆರಬಹುದು. ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ಹಣ ದುಡಿಯುವ ಹೊಸ ಮಾರ್ಗಗಳನ್ನು ಹುಡುಕುವಿರಿ. ವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಇರುವುದಿಲ್ಲ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಿರುತ್ತದೆ. ಮನಸ್ಸಿನಲ್ಲಿ ಸರಿಯಾದ ನಿರ್ಧಾರಗಳು ಇರುವುದಿಲ್ಲ.
ಮಿಥುನ
ಆತ್ಮಭಿಮಾನದ ಜೊತೆಗೆ ಸ್ವಂತ ಅಲಂಕಾರಕ್ಕೂ ಹೆಚ್ಚು ಗಮನ ಕೊಡುವಿರಿ. ಆದಾಯ ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಗಳು ನಿಮ್ಮ ವೃತ್ತಿಯ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಸಿರಾಸ್ತಿ ಮಾರಾಟಗಾರರಿಗೆ ಅಷ್ಟು ಅಭಿವೃದ್ಧಿ ಇರುವುದಿಲ್ಲ. ಸಂಗೀತ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಪಕ್ಕೆ ನೋವುಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಓದಿನ ಸಲಕರಣೆಗಳಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ನವೀನ ರೀತಿ ಕೃಷಿ ಮಾಡುವವರಿಗೆ ಸವಲತ್ತುಗಳು ದೊರೆಯುತ್ತವೆ. ಅದಿರು ವ್ಯಾಪಾರಿಗಳಿಗೆ ಲಾಭವಿರುತ್ತದೆ. ವಾರ ಅಂತ್ಯದಲ್ಲಿ ದೈವ ಸಂದರ್ಶನಕ್ಕಾಗಿ ಹೋಗುವಿರಿ. ವೃತ್ತಿಯಲ್ಲಿ ಬಹಳ ಕಸಿವಿಸಿಗಳಿರುತ್ತವೆ.
ಕರ್ಕಾಟಕ
ಬಹಳ ವ್ಯಾವಹಾರಿಕ ಚತುರತೆಯನ್ನು ಹೊಂದಿರುವಿರಿ. ಆದಾಯವಿದ್ದರೂ ಸಹ ಅಷ್ಟೇ ಖರ್ಚು ಇರುತ್ತದೆ. ಧರ್ಮದ ಕಡೆಗೆ ಹೆಚ್ಚು ಒಲವು ತೋರುವಿರಿ. ಆಸ್ತಿ ವ್ಯವಹಾರ ಮಾಡುವವರಿಗೆ ಕಾನೂನಿನ ತೊಡಕುಗಳು ಬರಬಹುದು. ಮಕ್ಕಳಿಗೆ ನೀವು ಸಹಕರಿಸಿದರು ಸಹ ಅವರಿಂದ ಅಷ್ಟು ಸಹಕಾರ ದೊರೆಯುವುದಿಲ್ಲ. ಪಿತ್ತಕೋಶದ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿಯಿಂದ ನಿರೀಕ್ಷಿತ ಸಹಕಾರಗಳು ಸಿಗದಿರಬಹುದು. ನೇತ್ರ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಧರ್ಮ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ. ಕೃಷಿಕರಿಗೆ ಅನಿರೀಕ್ಷಿತ ಲಾಭವಿರುತ್ತದೆ. ಹಿರಿಯರ ಆಸ್ತಿಯಲ್ಲಿ ಸಮಸ್ಯೆಗಳು ಆರಂಭವಾಗುವ ಸಾಧ್ಯತೆಗಳಿವೆ. ಕ್ರೀಡಾಪಟುಗಳಿಗೆ ವಿದೇಶಯಾನ ಲಭಿಸಬಹುದು.
ಸಿಂಹ
ಸರ್ಕಾರಿ ಅಧಿಕಾರಿಗಳಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಧಾರ್ಮಿಕ ಉಪನ್ಯಾಸ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ನಿಮ್ಮ ಆದಾಯವು ಕಡಿಮೆ ಇರುತ್ತದೆ. ಸ್ತ್ರೀಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಬರಬಹುದು. ಸಂಸಾರದಲ್ಲಿ ಸುಖವನ್ನು ಕಾಣುವ ಬದಲು ತಪ್ಪು ಹುಡುಕಲಿತ್ನಿಸುವಿರಿ. ಮಕ್ಕಳ ಉದ್ಯೋಗದ ಬಗ್ಗೆ ಸಿಹಿ ಸುದ್ದಿ ಕೇಳುವಿರಿ. ಪಾದದಲ್ಲಿ ಸೆಳೆತ ಅಥವಾ ನೋವುಗಳು ಕೆಲವರನ್ನು ಕಾಡಬಹುದು. ಸಂಗಾತಿ ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಇರುವ ಸಂದರ್ಭ ಬರುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಸಹಕಾರದಿಂದ ಅನುಕೂಲವಾಗುತ್ತದೆ. ಮಿಶ್ರಲೋಹಗಳನ್ನು ತಯಾರು ಮಾಡುವವರಿಗೆ ಲಾಭವಿರುತ್ತದೆ.
ಕನ್ಯಾ
ಏಕೋ ನಿಮ್ಮೆಲ್ಲಾ ಆಲೋಚನೆಗಳು ಮತ್ತು ಉಪಾಯಗಳು ನಿಂತಂತೆ ಕಾಣುತ್ತವೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಕೆಲಸ ಕಾರ್ಯಗಳನ್ನು ಆರಂಭಿಸಲು ಉತ್ಸಾಹ ಇರುವುದಿಲ್ಲ. ಸ್ಥಿರಾಸ್ತಿ ವ್ಯವಹಾರವನ್ನು ಮಾಡುವವರಿಗೆ ಸ್ವಲ್ಪ ಮಟ್ಟಿನ ಲಾಭವಿರುತ್ತದೆ. ಶತ್ರುಗಳ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ. ಪಾದಗಳಿಗೆ ಸಂಬಂಧಪಟ್ಟ ತೊಂದರೆಗಳು ಕಾಣಿಸಬಹುದು. ಕೆಲವೊಮ್ಮೆ ಸಂಗಾತಿ ನಿಮ್ಮ ವಿರುದ್ಧವಾಗಿ ಮಾತನಾಡುವರು. ಹಾಲಿನ ಉತ್ಪನ್ನಗಳನ್ನು ಮಾರುವವರಿಗೆ ಲಾಭವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನವಾಗುವುದರ ಜೊತೆಗೆ ಕೆಲವು ಕಾನೂನು ತೊಂದರೆಗಳು ಎದುರಾಗಬಹುದು. ಹಿರಿಯರ ವೃತ್ತಿಯನ್ನು ನೀವು ಅನುಸರಿಸುವಿರಿ.
ತುಲಾ
ನಿಮ್ಮ ಮನಸ್ಥಿತಿಯಲ್ಲಿ ಕ್ರೌರ್ಯ ತುಂಬಿರುತ್ತದೆ. ಆದಾಯವು ಬಹಳ ಕಡಿಮೆ ಇರುತ್ತದೆ. ನಿಮ್ಮ ಮಾತು ನಿಮ್ಮ ನಡವಳಿಕೆ ಮೇಲೆ ಪರಿಣಾಮ ಬೀರುತ್ತದೆ. ಕೃಷಿ ಭೂಮಿಯನ್ನು ಈಗ ಹೊಂದುವ ಅವಕಾಶವಿದೆ. ತಾಂತ್ರಿಕ ವಿದ್ಯೆಯನ್ನು ಕಲಿಯುವವರಿಗೆ ಹೆಚ್ಚು ಅವಕಾಶಗಳು ದೊರೆಯುತ್ತದೆ. ಮಾನಸಿಕ ರೋಗಿಗಳಿಗೆ ಸ್ವಲ್ಪ ಅನುಕೂಲವಾಗಬಹುದು. ಸಂಗಾತಿಯ ಕಠಿಣ ನುಡಿಗಳು ಅಥವಾ ನಡವಳಿಕೆಗಳು ನಿಮ್ಮನ್ನು ವಿಚಲಿತರಾಗಿಸುತ್ತದೆ. ಈ ದಿನ ವ್ಯಾಪಾರ ವ್ಯವಹಾರಗಳಲ್ಲಿ ನಿಧಾನಗತಿಯ ಪ್ರಗತಿ ಇರುತ್ತದೆ. ಕ್ಷೀರೋತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ. ಧಾರ್ಮಿಕ ಕಾರ್ಯಗಳನ್ನು ಮಾಡುವುದರಲ್ಲಿ ಆಸಕ್ತರಾಗುವಿರಿ.
ವೃಶ್ಚಿಕ
ಆಲಸೀತನ ನಿಮ್ಮಲ್ಲಿ ಮನೆ ಮಾಡಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಶತ್ರುಗಳನ್ನು ನಿಗ್ರಹಿಸಲು ತಂತ್ರಗಳನ್ನು ಹೂಡುವಿರಿ. ಸಂಸಾರದಲ್ಲಿ ಹೊಂದಾಣಿಕೆಯಿಂದ ಇರುವುದು ಅತಿ ಮುಖ್ಯ. ವಿದೇಶದಲ್ಲಿ ಓದುತ್ತಿರುವವರಿಗೆ ಹೆಚ್ಚು ಅನು ಕೂಲವಿರುತ್ತದೆ. ಸಾಹಸ ಕಲಾವಿದರು ಎಚ್ಚರದಿಂದ ಸಾಹಸ ಕಲೆ ಪ್ರದರ್ಶನ ಮಾಡಬೇಕು. ಸಂಗಾತಿಯಿಂದ ಧನ ಸಹಾಯ ಸಿಗುತ್ತದೆ. ಅದಿರು ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವಿರುತ್ತದೆ. ತಾಯಿಯಿಂದ ಧನ ಸಹಾಯ ದೊರೆಯಬಹುದು. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಬಗ್ಗೆ ಮೌನವಾಗಿರುವುದು ಒಳ್ಳೆಯದು.
ಧನು
ಸಮಾಜದಲ್ಲಿ ಬಹಳ ಗೌರವಯುತವಾಗಿ ನಡೆದುಕೊಳ್ಳುವಿರಿ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ವಿರುದ್ಧ ಷಡ್ಯಂತ್ರ ಮಾಡುವವರನ್ನು ಅವರದೇ ತಂತ್ರಗಳನ್ನು ಬಳಸಿ ಮಟ್ಟಹಾಕುವಿರಿ. ಹೊರದೇಶದಲ್ಲಿರುವವರು ಸ್ಥಿರಾಸ್ತಿಯನ್ನು ಈಗ ಮಾಡಿಕೊಳ್ಳಬಹುದು. ಎಲೆಕ್ಟ್ರಾನಿಕ್ ಉದ್ದಿಮೆದಾರರಿಗೆ ಆದಾಯ ಹೆಚ್ಚುತ್ತದೆ. ಲೇವಾದೇವಿ ಮಾಡುವವರಿಗೆ ನಷ್ಟ ಸಂಭವಿಸಬಹುದು. ಸಂಗಾತಿ ಕಡೆಯವರಿಂದ ಸಹಕಾರಗಳು ದೊರೆಯುತ್ತವೆ. ಸರ್ಕಾರಿ ಕಚೇರಿಯ ಕೆಲಸಗಳು ಸರಾಗವಾಗಿ ಆಗುತ್ತವೆ. ವಿದೇಶದಲ್ಲಿ ಸ್ಥಿರಾಸ್ತಿಯ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ದೈವ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವಿರಿ. ಸರ್ಕಾರಿ ಕಚೇರಿಯ ಕೆಲಸಗಳು ಸರಾಗವಾಗಿ ಆಗುತ್ತದೆ.
ಮಕರ
ಈ ವಾರ ಸ್ಥಿರ ಮನಸ್ಕರಾಗಿರುವಿರಿ. ಆದಾಯವು ಸ್ವಲ್ಪ ಮಟ್ಟಿಗೆ ಚೇತರಿಕೆಯನ್ನು ಕಾಣುತ್ತದೆ. ವಿದೇಶದಲ್ಲಿರುವವರ ಆದಾಯ ಹೆಚ್ಚುತ್ತದೆ. ಬಹಳ ಚುರುಕಾಗಿ ಕೆಲಸ ಮಾಡುವಿರಿ. ರಿಯಲ್ ಸ್ಟೇಟ್ ಉದ್ಯಮಗಳಿಗೆ ನಿರೀಕ್ಷಿತ ಸಾಲಗಳು ದೊರೆಯುತ್ತವೆ. ಪಾರಂಪರಿಕ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚು ಗಮನ ಕೊಡಿರಿ, ಇಲ್ಲವಾದಲ್ಲಿ ಧನ ನಷ್ಟವಾಗಬಹುದು. ಪಾಲದಾರಿಕೆ ವ್ಯವಹಾರಗಳಲ್ಲಿ ನಿಮಗೆ ಅಭಿವೃದ್ಧಿ ಇರುತ್ತದೆ. ಪ್ರಸೂತಿ ವೈದ್ಯರು ತಮ್ಮ ಕೆಲಸಗಳಲ್ಲಿ ಬಹಳ ಎಚ್ಚರವಾಗಿರುವುದು ಒಳ್ಳೆಯದು. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭ ಇರುತ್ತದೆ. ಮುನಿಸಿಕೊಂಡಿದ್ದ ತಾಯಿ ಈಗ ಸರಿ ಹೋಗುವರು.
ಕುಂಭ
ಉದ್ಯೋಗದಲ್ಲಿರುವವರು ಶ್ರದ್ಧೆಯಿಂದ ದುಡಿಯುವುದನ್ನು ಅಳವಡಿಸಿಕೊಳ್ಳಬೇಕು. ಆದಾಯವು ಚೇತರಿಕೆಯ ಹಾದಿಯತ್ತ ಹೊರಳುತ್ತದೆ. ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಕುಸ್ತಿಪಟುಗಳಿಗೆ ತಮ್ಮ ದೇಹವನ್ನು ಗಟ್ಟಿ ಮತ್ತೆ ಶಕ್ತಿಯುತವಾಗಿ ರೂಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಧರ್ಮ ಪ್ರವಚನ ಮಾಡುವವರಿಗೆ ಹೆಚ್ಚಿನ ಅವಕಾಶ ಮತ್ತು ಸೌಲಭ್ಯಗಳು ದೊರೆಯುತ್ತವೆ. ಮಿತಿ ಮೀರಿದ ಮಾತು ಕೆಲವರಿಗೆ ಉದ್ಯೋಗದಿಂದ ವಂಚಿತರನ್ನಾಗಿ ಮಾಡುವ ಸಂದರ್ಭವಿದೆ. ಸರ್ಕಾರಿ ಮಹಿಳಾ ಅಧಿಕಾರಿಗಳಿಂದ ನಿಮಗೆ ಹೆಚ್ಚಿನ ಅನುಕೂಲ ದೊರೆಯುತ್ತದೆ. ನರ ದೌರ್ಬಲ್ಯ ಇರುವವರು ಚಿಕಿತ್ಸೆಗೆ ಹೋಗುವುದು ಒಳ್ಳೆಯದು.
ಮೀನ
ಮನಸ್ಸಿನಲ್ಲಿ ಗಟ್ಟಿ ನಿರ್ಧಾರಗಳಿಲ್ಲದೆ ಬಹಳ ಡೋಲಾಯಮಾನವಾಗಿರುತ್ತದೆ. ಮಾತಿನಲ್ಲಿ ಕಠಿಣತೆ ಇದ್ದು ಮಾತನಾಡುವಾಗ ಎಚ್ಚರವಹಿಸಿರಿ. ಹಿರಿಯರು ನಿಮ್ಮ ನಡವಳಿಕೆ ನೋಡಿ ನಿಮಗೆ ಸಹಾಯ ಮಾಡುವವರು. ದಿನಸಿ ವ್ಯಾಪಾರಗಳಿಗೆ ಲಾಭವಿರುತ್ತದೆ. ಈಗ ಗಣಿತಜ್ಞರಿಗೆ ಹೆಚ್ಚು ಬೇಡಿಕೆ ಬರುತ್ತದೆ. ನೇತ್ರ ಸಂಬಂಧಿ ತೊಂದರೆಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಉಪೇಕ್ಷೆ ಮುಜುಗರವನ್ನು ತರುತ್ತದೆ. ಕೃಷಿ ಸಂಪನ್ಮೂಲಗಳನ್ನು ಕ್ರೋಢೀಕರಣ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸ್ತ್ರೀಯರಿಂದ ಮತ್ತು ಸಹೋದ್ಯೋಗಿಗಳಿಂದ ಕಿರಿಕಿರಿಗಳಾಗಬಹುದು. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕಣ್ಣಿಡುವರು.