ಕರ್ಕಾಟಕ
ಉದ್ಯೋಗದಲ್ಲಿ ಪ್ರಗತಿ. ಸಾಲಬಾಧೆಯ ನಿವಾರಣೆ. ಭೂಮಿಯ ವ್ಯವಹಾರ ಮಾಡುವವರಿಗೆ ಉತ್ತಮ ಕಮಿಷನ್ ದೊರೆಯುತ್ತದೆ. ಕೆಲವರಿಗೆ ವಿದೇಶದಿಂದ ಧನಾಗಮನ ಆಗುವ ಸಾಧ್ಯತೆ. ವಿದೇಶಿ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣಬಹುದು. ಗಣ್ಯವ್ಯಕ್ತಿಗಳ ಸಂಪರ್ಕ ಸಿಗುತ್ತದೆ. ಆಹಾರ ಪದಾರ್ಥಗಳನ್ನು ಮಾರುವವರಿಗೆ, ಉದ್ಯಮಿಗಳಿಗೆ, ಮನೆಯನ್ನು ಮಾರುವವರಿಗೆ, ತಂಪು ಪಾನೀಯ ರೂಪದ ಆಹಾರವಸ್ತುಗಳನ್ನು ಮಾರುವವರಿಗೆ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಲೇವಾದೇವಿದಾರರಿಗೆ ಹಳೇ ಬಾಕಿ ವಸೂಲಿಯಾಗುವ ಸಾಧ್ಯತೆ. ಪ್ರಮುಖ ಒಪ್ಪಂದ ಮಾಡಿಕೊಳ್ಳುವಾಗ ಸಾಕಷ್ಟು ವಿವೇಚನೆ ಇರಲಿ. ಮಕ್ಕಳಿಂದ ನಿರೀಕ್ಷಿತ ಸಹಕಾರ ಇರುವುದಿಲ್ಲ.
ಆದಾಯ 14, ವ್ಯಯ 8; ಆರೋಗ್ಯ 6, ಅನಾರೋಗ್ಯ 5; ರಾಜಪೂಜಾ 6, ರಾಜಕೋಪ 3, ಸುಖ 3, ದುಃಖ 3
ದಕ್ಷಿಣಾಮೂರ್ತಿ ಸ್ತೋತ್ರ ಮತ್ತು ಶನೈಶ್ಚರ ಸ್ತೋತ್ರಗಳನ್ನು ಪಠಿಸಿರಿ.
29 ಮಾರ್ಚ್ 2025, 14:33 IST