ನನ್ನ ಮಗ ಪಿಯುಸಿಯಲ್ಲಿ ಓದುತ್ತಿದ್ದಾನೆ. ಅವನಿಗೆ ಯಾವಾಗಲೂ ಮೊಬೈಲ್ ಗೇಮ್ ಆಡುವ ಹುಚ್ಚು. ಮೊಬೈಲ್ ಕೈಯಲ್ಲಿ ಇದ್ದಾಗ ತುಂಬಾ ಆ್ಯಕ್ಟಿವ್ ಆಗಿರುವ ಅವನು ಬೇರೆ ಸಮಯದಲ್ಲಿ ಮಂಕಾಗಿರುತ್ತಾನೆ. ಓದಿನಲ್ಲೂ ಆಸಕ್ತಿ ತೋರುವುದಿಲ್ಲ. ಗೆಳೆಯರ ಜೊತೆ ಹೊರಗೆ ಆಡುವುದಿಲ್ಲ. ಯಾವಾಗಲೂ ಮೊಬೈಲೇ ಅವನ ಪ್ರಪಂಚ. ಗೇಮ್ಗಳೇ ಅವನ ಲೋಕ. ಅವನನ್ನು ಸರಿ ಮಾಡುವುದು ಹೇಗೆ?

ಉಮಾ, ಬೆಂಗಳೂರು

ಇಂದಿನ ಯುಗದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೊಬೈಲ್ ಫೋನ್ಗೆ ಅಂಟಿಕೊಂಡಿರುತ್ತಾರೆ. ಮಕ್ಕಳ ವಿಷಯದಲ್ಲಿ ಇದು ತುಂಬಾ ಗಂಭೀರವಾದ ವಿಷಯ. ಮೊಬೈಲ್ನಿಂದ ಅವರ ಮನಸ್ಸು ಚಂಚಲವಾಗುತ್ತದೆ. ಅದು ಅವರ ಓದಿನ ಮೇಲೂ ಪರಿಣಾಮ ಬೀರುವಂತೆ ಮಾಡುತ್ತದೆ. ಇದರಿಂದ ಅವರು ದೈಹಿಕ ಕ್ರೀಡೆಗಳನ್ನು ಕಡೆಗಣಿಸಿ, ವರ್ಚುವಲ್ ಪ್ರಪಂಚವನ್ನು ಇಷ್ಟಪಡುತ್ತಾರೆ. ಈಗ ನಿಮಗೆ ನಿಮ್ಮ ಮಗ ಮೊಬೈಲ್ಗೆ ಆಡಿಕ್ಟ್ ಆಗಿರುವ ವಿಷಯ ತಿಳಿದಿದೆ. ತಂದೆ–ತಾಯಿಗಳಾಗಿ ಮಗನ ಕೈಯಿಂದ ಮೊಬೈಲ್ ಕಿತ್ತುಕೊಂಡು ಓದಿನ ಮೇಲೆ ಗಮನ ಹರಿಸು ಎಂದು ಹೇಳುವ ಎಲ್ಲಾ ಹಕ್ಕು ನಿಮಗಿದೆ. ಮೊದಲು ನೀವು ಅವನಿಗೆ ಆಟವಾಡಲು ಸಮಯವನ್ನು ನಿಗದಿಪಡಿಸಿ. ಕೆಲವು ನಿಮಿಷಗಳ ಕಾಲ ಮಾತ್ರ ಮೊಬೈಲ್ ಬಳಸಲು ಕೊಡಿ. ನಿಧಾನಕ್ಕೆ ಅವನು ಪಿಯುಸಿ ಮುಗಿಸುವುದರ ಒಳಗೆ ಮೊಬೈಲ್ ಗೇಮ್ ಆಡುವುದನ್ನು ನಿಲ್ಲಿಸಲು ಹೇಳಿ. ಅವನಿಗೆ ಅವನ ಸಧ್ಯದ ಪ್ರಾಶಸ್ತ್ಯಗಳ ಬಗೆಗೆ ತಿಳಿಸಿ. ನೀವು ಅವನಿಂದ ಮೊಬೈಲ್ ದೂರ ಇಡಲು ಆರಂಭಿಸಿದಾಗ ಅವನು ಕೋಪಗೊಳ್ಳಬಹುದು. ಆಗ ತಲೆ ಕೆಡಿಸಿಕೊಳ್ಳಬೇಡಿ. ಕೆಲವು ದಿನಗಳವರೆಗೆ ಮಾತ್ರ ಅವನು ಹೀಗೆ ಮಾಡಬಹುದು. ನಂತರ ಅವನು ನಿಮ್ಮ ಫೋನ್ ಅನ್ನು ಮರಳಿ ಕೇಳುವುದಿಲ್ಲ. ಅವನಿಗೆ ನಿಜವಾಗಿಯೂ ಫೋನ್ ಅವಶ್ಯಕತೆ ಇದ್ದರೆ ಕರೆ ಮಾಡಲು ಮಾತ್ರ ಸಾಧ್ಯವಾಗುವ ಬೇಸಿಕ್ ಫೋನ್ ಕೊಡಿಸಿ. ಆಮೇಲೂ ಅವನು ಹಟ ಮಾಡಿದರೆ ಅವನನ್ನು ನಿಮ್ಮಿಂದ ನಿಯಂತ್ರಣ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿ ಬಂದರೆ ಅವನನ್ನು ಆಪ್ತಸಮಾಲೋಚಕರ ಬಳಿ ಕರೆದುಕೊಂಡು ಹೋಗಿ. ಮಲ್ಲೇಶ್ವರದ ಸ್ನೇಹ, ಸಹಕಾರನಗರದ ಸಮಾಧಾನ ಆಪ್ತಸಮಾಲೋಚಕ ಕೇಂದ್ರಗಳು ಉಚಿತವಾಗಿ ಆಪ್ತ ಸಮಾಲೋಚನೆ ನಡೆಸುತ್ತವೆ. ಅಲ್ಲಿಗೆ ಅವನನ್ನು ಕರೆದ್ಯೊಯಿರಿ. ಅವರು ಅವನಿಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತಾರೆ.

ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ವಯಸ್ಸು 24. ನನಗೆ ಅತಿಯಾಗಿ ತಿನ್ನುವ ಹುಚ್ಚು. ಮನೆಯಲ್ಲಿ, ಆಫೀಸಿನಲ್ಲಿ ಯಾವಾಗಲೂ ತಿನ್ನುತ್ತಲೇ ಇರುತ್ತೇನೆ. ತಿನ್ನುವುದನ್ನು ಬಿಡಬೇಕು ಎಂದುಕೊಂಡರು ಸಾಧ್ಯವಾಗುತ್ತಿಲ್ಲ. ನಾನು ದಪ್ಪವಿಲ್ಲ. ಹಸಿವಾಗಿ ತಿನ್ನುವುದೂ ಅಲ್ಲ. ತಿನ್ನದೇ ಇರಲು ಸಾಧ್ಯವಾಗುವುದಿಲ್ಲ. ನನಗೆ ಯಾವುದಾದರೂ ಮಾನಸಿಕ ಸಮಸ್ಯೆ ಇದೆಯೇ?

ಹೆಸರು, ಊರು ಬೇಡ

ಇದೊಂದು ವ್ಯಾಧಿ. ನಿಮ್ಮಿಂದ ಈ ಅಭ್ಯಾಸವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ನೀವು ಮಾನಸಿಕ ತಜ್ಞರನ್ನು ಭೇಟಿ ಮಾಡಿ ಅವರ ಸಹಾಯ ಪಡೆದುಕೊಳ್ಳಬೇಕು. ಅವರ ಬಳಿ ಇಂತಹ ವ್ಯಾಧಿ ಇರುವವರಿಗಾಗಿಯೇ ಕೆಲವೊಂದು ವರ್ಕ್ ಪ್ಲಾನ್ಗಳಿವೆ. ಅದನ್ನು ಅಭ್ಯಾಸ ಮಾಡುವ ಮೂಲಕ ಈ ರೀತಿಯ ಹವ್ಯಾಸವನ್ನು ನಿಯಂತ್ರಿಸುತ್ತಾರೆ. ಒಂದು ವೇಳೆ ಈ ಅಭ್ಯಾಸ ಮುಂದುವರಿದರೆ ಖಂಡಿತ ನೀವು ಮುಂದೆ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸಬಹುದು. ಹಾಗಾಗಿ ಆದಷ್ಟು ಬೇಗ ವೈದ್ಯರನ್ನು ನೋಡುವುದು ಉತ್ತಮ. ಕೆಲವೊಮ್ಮೆ ಬೇಸರ ಅಥವಾ ಮಾಡಲು ಏನೂ ಕೆಲಸವಿಲ್ಲದಿದ್ದಾಗ ಇಂತಹ ಹವ್ಯಾಸಗಳು ಅಂಟಿಕೊಳ್ಳುತ್ತವೆ. ಆದರೆ ಅದು ನಿರ್ದಿಷ್ಟ ಅವಧಿಗೆ ಮುಗಿದು ಹೋಗುತ್ತದೆ. ನಿಮ್ಮ ವಿಷಯದಲ್ಲಿ ಹಾಗಲ್ಲ. ನೀವು ಯಾವಾಗಲೂ ತಿನ್ನುತ್ತಲೇ ಇರುತ್ತೀರಿ. ಆ ಕಾರಣಕ್ಕೆ ನಿಮಗೆ ವೈದ್ಯರ ಸಹಾಯ ಅಗತ್ಯ.ಪ್ರೀತಿ ಮಾಡಿ, ಮನೆಯವರ ಒಪ್ಪಿಗೆ ಪಡೆದೇ ಮದುವೆಯಾಗಿದ್ದೀವಿ. ಐದು ವರ್ಷಗಳಾಗಿವೆ. ಅನ್ಯೋನ್ಯವಾಗಿದ್ದೇವೆ. ಒಂದು ಮಗು ಇದೆ. ಈಗಲೂ ಅಕ್ಕ–ಅಣ್ಣ–ಬಂಧುಗಳೆಲ್ಲ ’ನೀನು ತಪ್ಪು ಮಾಡಿದೆ’ ಎಂದು ಚುಚ್ಚುತ್ತಾರೆ. ಮನಸ್ಸಿಗೆ ಹಿಂಸೆಯಾಗುತ್ತಿದೆ. ಈ ತಪ್ಪನ್ನು ತಿದ್ದಿಕೊಳ್ಳುವ ಮಾರ್ಗ ಯಾವುದಾದರೂ ಇದೆಯೇ?

ವರ್ಷಿಣಿ, ಬೆಂಗಳೂರು

ನೀವು ಮದುವೆ ಮಾಡಿಕೊಳ್ಳುವಾಗಲೇ ನೀವು ಮಾಡುತ್ತಿರುವುದು ತಪ್ಪು ಎಂದು ಯೋಚಿಸದವರು ಈಗ ಯಾಕೆ ಯೋಚಿಸುತ್ತಿದ್ದೀರಿ. ನೀವು ಸಂತೋಷದಿಂದ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದೀರಿ. ಈಗ ನಿಮ್ಮ ಸಂತೋಷಕ್ಕೆ ಒಂದು ಮಗುವೂ ಸೇರಿಕೊಂಡಿದೆ. ಯಾವಾಗಲೂ ಖುಷಿಯಿಂದ ಇರಿ. ಇದು ನಿಮ್ಮ ಮನೆಯ ಹಿರಿಯರು ಹಾಗೂ ಕುಟುಂಬ ಸದಸ್ಯರಿಗೆ ನೀವು ಏನು ತಪ್ಪು ಮಾಡಿಲ್ಲ ಎಂಬುದನ್ನು ತೋರಿಸುತ್ತದೆ. ಸಮಯ ಕಳೆದಂತೆ ಅವರಿಗೂ ಅರ್ಥವಾಗುತ್ತದೆ. ಆಗಲೂ ಅವರು ನಿಮಗೆ ಬೆಂಬಲ ನೀಡದಿದ್ದರೆ ಅದರ ಪರಿಣಾಮ ನಿಮ್ಮ ವೈವಾಹಿಕ ಜೀವನದ ಮೇಲಾಗಬಾರದು. ನಿಮಗೆ ಅವರ ಜೊತೆ ಮಾತನಾಡಬೇಕು ಎನ್ನಿಸಿದರೆ ಅವರನ್ನು ಮನೆಗೆ ಆಹ್ವಾನಿಸಿ. ನೀವು ನಿಮ್ಮ ಕುಟುಂಬದ ಜೊತೆ ಎಷ್ಟು ಖುಷಿಯಾಗಿದ್ದೀರಿ ಎಂಬುದನ್ನು ಅವರಿಗೆ ತೋರಿಸಿ. ಅವರ ಜೊತೆ ಮಾತನಾಡಿ, ಅವರಿಗೆ ಭರವಸೆ ನೀಡಿ. ನೀವು ತುಂಬಾ ಸಂತೋಷದಿಂದ ಇದ್ದೀರಿ, ಯಾವುದೇ ಚಿಂತೆ ಬೇಡ ಎಂದು ತಿಳಿಸಿ. ಅವರು ಅರ್ಥ ಮಾಡಿಕೊಳ್ಳುತ್ತಾರೆ. ಆಗಲೂ ಅವರು ಅರ್ಥ ಮಾಡಿಕೊಳ್ಳದೇ ನಿಮ್ಮನ್ನು ಟೀಕಿಸುತ್ತಿದ್ದರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಜೀವನ ಮುಂದೆ ಸಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.