ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Karnataka Budget 2025 LIVE: ಬಜೆಟ್ ಭಾಷಣ ಅಂತ್ಯಗೊಳಿಸಿದ ಸಿಎಂ ಸಿದ್ದರಾಮಯ್ಯ

Published : 7 ಮಾರ್ಚ್ 2025, 3:49 IST
Last Updated : 7 ಮಾರ್ಚ್ 2025, 10:22 IST
ಫಾಲೋ ಮಾಡಿ
03:1307 Mar 2025

ಬಜೆಟ್‌ನ ಕ್ಷಣ ಕ್ಷಣದ ಅಪ್ಡೇಟ್‌ ಇಲ್ಲಿದೆ...

03:5107 Mar 2025
16 ನೇ  ಬಾರಿ ರಾಜ್ಯ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಅವರಿಗೆ  ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಾರ್ಯದರ ಪಿ.ಸಿ. ಜಾಫರ್ ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಹಸ್ತಾಂತರಿಸಿದರು. ಈ ವೇಳೆ ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ .ಕೆ‌. ಅತೀಕ್ , ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉಪಸ್ಥಿತರಿದ್ದರು.

2025-26ನೇ ಸಾಲಿನ ಬಜೆಟ್‌ ಪ್ರತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ

2025-26ನೇ ಸಾಲಿನ ಬಜೆಟ್‌ ಪ್ರತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರಿಗೆ ಹಣಕಾಸು ಅಧಿಕಾರಿಗಳು ಬಜೆಟ್‌ ಪ್ರತಿಗಳನ್ನು ಹಸ್ತಾಂತರಿಸಿದ್ದಾರೆ. ದಾಖಲೆಯ ಬಜೆಟ್‌ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಹಲವರು ಅಭಿನಂದಿಸಿದ್ದಾರೆ.

04:4907 Mar 2025

ಬಜೆಟ್‌ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

05:3007 Mar 2025
05:5107 Mar 2025

ರಾಜ್ಯದಲ್ಲಿ 100 ನಾಡಕಚೇರಿ ನಿರ್ಮಾಣ

06:0207 Mar 2025

ಮೈಸೂರು, ಕಲಬುರಗಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್‌ ಮಾದರಿಯ ಸಂಸ್ಥೆಗಳ ನಿರ್ಮಾಣ, ಕೊಪ್ಪಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ , ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣ, ಯಲಬುರ್ಗಾ, ಜೇವರ್ಗಿ, ಯಾದಗಿರಿಯಲ್ಲಿ ನರ್ಸಿಂಗ್ ಕಾಲೇಜು, ಕೋಲಾರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ

06:4707 Mar 2025

ತ್ಯಾಜ್ಯ ನೀರನ್ನು ನಿರ್ವಹಣೆ ಮಾಡಲು 500 ಗ್ರಾಮಗಳಲ್ಲಿ ಬೂದು ನೀರು ನಿರ್ವಹಣಾ ಘಟಕ ನಿರ್ಮಾಣ

06:5207 Mar 2025

ಪ್ರಸ್ತುತ ಇರುವ 68 ನಿಲ್ದಾಣಗಳನ್ನು ಒಳಗೊಂಡ 79.65 ಕಿ.ಮೀ ಮಾರ್ಗದ ಮೆಟ್ರೊ ಕಾರ್ಯಾಚರಣೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ಜಾಲವನ್ನು ಅಭಿವೃದ್ಧಿಪಡಿಸುವ ಗುರಿ ಹಾಗೂ  ಮೆಟ್ರೊ ಜಾಲ ದೇವನಹಳ್ಳಿವರೆಗೆ ವಿಸ್ತರಣೆ

07:0107 Mar 2025

ಗೃಹ ಜ್ಯೋತಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ₹10,100 ಕೋಟಿ ಮೀಸಲು

08:2907 Mar 2025

ಬಜೆಟ್‌ ಭಾಷಣ ಮುಗಿಯಿತು...

ADVERTISEMENT
ADVERTISEMENT