ಮುಂಬೈ: ಸತತ 6ನೇ ದಿನವೂ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಹೆಚ್ಚಳ ಕಂಡಿದ್ದು, ಇಂದು(ಮಾ.21) 36 ಪೈಸೆಯಷ್ಟು ಏರಿಕೆ ದಾಖಲಿಸಿದೆ.

ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಉತ್ತಮ ಟ್ರೆಂಡ್ ಮತ್ತು ವಿದೇಶಿ ಹೂಡಿಕೆಯ ಒಳಹರಿವು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಕಾರಣ ಎಂದು ವರದಿ ತಿಳಿಸಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ ಮೌಲ್ಯ ₹86.26ಕ್ಕೆ ಪ್ರಾರಂಭವಾಯಿತು. ನಂತರ, ದಿನದ ವಹಿವಾಟಿನಲ್ಲಿ ₹85.93ರ ಗರಿಷ್ಠ ಮತ್ತು 86.30ರ ಕನಿಷ್ಠ ಮಟ್ಟವನ್ನು ತಲುಪಿತ್ತು.

₹86ಕ್ಕೆ ವಹಿವಾಟು ಕೊನೆಗೊಳಿಸುವ ಮೂಲಕ ಹಿಂದಿನ ವಹಿವಾಟು ಮುಕ್ತಾಯಕ್ಕಿಂತ 36 ಪೈಸೆಯ ಹೆಚ್ಚಳವನ್ನು ದಾಖಲಿಸಿದ.

ಗುರುವಾರ, ರೂಪಾಯಿ ಮೌಲ್ಯ ಬಹುತೇಕ ಸ್ಥಿರವಾಗಿ ಉಳಿದು ₹86.36ಕ್ಕೆ ಮುಕ್ತಾಯಗೊಂಡು, ಕೇವಲ 1 ಪೈಸೆಯಷ್ಟು ಏರಿಕೆ ಕಂಡಿತು.

ಇದು ರೂಪಾಯಿಗೆ ಸತತ ಆರನೇ ಲಾಭದ ಅವಧಿಯಾಗಿದ್ದು, ಈ ಅವಧಿಯಲ್ಲಿ 123 ಪೈಸೆಗಳಷ್ಟು ಏರಿಕೆ ಕಂಡಿದೆ.

‘ದೇಶೀಯ ಷೇರುಗಳಲ್ಲಿನ ಬಲ ಮತ್ತು ಹೊಸ ಎಫ್ಐಐ ಒಳಹರಿವಿನ ಮೇಲೆ ರೂಪಾಯಿ ಅಧಿಕ ಮೌಲ್ಯದೊಂದಿಗೆ ವಹಿವಾಟು ನಡೆಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೂ, ಕಚ್ಚಾ ತೈಲ ಬೆಲೆಗಳು ತೀವ್ರ ಏರಿಕೆಯನ್ನು ಮಿತಿಗೊಳಿಸಬಹುದು’ಎಂದು ಮಿರೇ ಅಸೆಟ್ ಶೇರ್ಖಾನ್ನ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.

ದೇಶೀಯ ಷೇರು ಮಾರುಕಟ್ಟೆಯಲ್ಲಿ, 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 557.45 ಅಂಶಗಳಷ್ಟು ಏರಿಕೆಯಾಗಿ 76,905ಕ್ಕೆ ಸ್ಥಿರವಾಯಿತು. ಆದರೆ, ನಿಫ್ಟಿ 159.75 ಅಂಶಗಳಷ್ಟು ಏರಿಕೆಯಾಗಿ 23,350ರಲ್ಲಿ ವಹಿವಾಟು ಮುಗಿಸಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ ನಿವ್ವಳ ₹3,239 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ದತ್ತಾಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.