ನವರಾತ್ರಿಯ 6ನೇ ದಿನ ದುರ್ಗೆಯ ಒಂಬತ್ತು ಅವತಾರಗಳಲ್ಲಿ ಒಂದಾದ ಕಾತ್ಯಾಯಿನಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ದೇವಿಯು ರಕ್ಕಸರ ಸಂಹಾರಕ್ಕೆಂದು ಜನ್ಮ ತಾಳಿದಳು ಎಂದು ಹೇಳಲಾಗುತ್ತದೆ.

ಕಾತ್ಯಾಯಿನಿ ದೇವಿ ಜನಿಸಿದ್ದು ಹೇಗೆ?

ಒಮ್ಮೆ ಕಾತ್ಯಾಯನ ಎಂಬ ಋಷಿಯು ಪಾರ್ವತಿ ದೇವಿಯಂತ ಮಗಳನ್ನು ಪಡೆಯಬೇಕು ಎಂದು ಬಯಸಿ, ತಪಸ್ಸನ್ನು ಕೈಗೊಳ್ಳುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾಮಾತೆಯ ಆಶೀರ್ವಾದದಂತೆ ಜನಿಸಿದ ಮಗಳಿಗೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಕಾತ್ಯಾಯಿನಿಯು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರ ನಾಶ ಮಾಡಲು ಆರಂಭಿಸುತ್ತಾಳೆ. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ.
.ನವರಾತ್ರಿ 5ನೇ ದಿನ | ಸ್ಕಂದ ಮಾತೆಯ ಪೂಜೆ ಹೀಗಿರಲಿ.
ಪೂಜಾ ವಿಧಾನ:

ಕಾತ್ಯಾಯಿನಿ ದೇವಿಯನ್ನು ಭಕ್ತಿಯಿಂದ ಆರಾಧಿಸುವ ಹೆಣ್ಣು ಮಕ್ಕಳು ಒಳ್ಳೆಯ ಗಂಡನನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಬೆಳಿಗ್ಗೆ 11:53 ರಿಂದ 12:28 ರವರೆಗೆ ಅಥವಾ ಸಂಜೆ 6:30 ರಿಂದ 7:30 ರವರೆಗೆ ಪೂಜೆ ಸಲ್ಲಿಸಬಹುದು.

ಪೂಜೆಯಲ್ಲಿ ದಾಸವಾಳ, ಬಿಳಿ ಕಮಲದ ಹೂವು ಅಥವಾ ಪಾರಿಜಾತ ಹೂ ಬಳಸಬಹುದು.

ಬಣ್ಣ: ಬೂದು

ನೈವೇದ್ಯ: ಕೋಸಂಬರಿ ಚಿತ್ರಾನ್ನ, ಅಕ್ಕಿ ಅಥವಾ ಸಬ್ಬಕ್ಕಿ ಪಾಯಸ
.ನವರಾತ್ರಿ 5ನೇ ದಿನ ಸ್ಕಂದ ಮಾತೆಯ ಪೂಜೆ: ನೈವೇದ್ಯದಲ್ಲಿ ಈ ಆಹಾರಗಳಿರಲಿ.
ಮಂತ್ರ :

ಓಂ ಕಾತ್ಯಾಯಿನಿ ದೇವಿ ನಮಃ

ಚಂದ್ರಹಾಸೋಜ್ಞಾಲಂಕಾರ ಶಾರ್ದೂಲ ವರ ವಾಹನ ಕಾತ್ಯಾಯಿನಿ ದೇವಿ ಘಾತಿನಿ

ಯಾ ದೇವಿ ಸರ್ವಭೂತೇಶು ಮಾ ಕಾತ್ಯಾಯಿನಿ ರೂಪೇಣ ಸಂಸ್ಥಿತ ನಮಸ್ತಸ್ಯೆ

ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.