ಮಂಗಳೂರು: ನಗರದ ಕುದ್ರೋಳಿಯ ಜಾಮಿಯಾ ಮಸೀದಿಗೆ (ಜೋಡುಪಳ್ಳಿ) ವಿವಿಧ ಧರ್ಮದವರು ಭಾನುವಾರ ಭೇಟಿ ನೀಡಿ, ಮಸೀದಿಯ ಒಳಗೇನು ನಡೆಯುತ್ತದೆ ಎಂಬುದನ್ನು ಕಣ್ಣಾರೆ ಕಂಡರು. ಅವರ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿದು ಕೊಂಡರು. ಮುಸ್ಲಿಂ ಧರ್ಮದ ಕುರಿತ ತಪ್ಪುಗ್ರಹಿಕೆ ನೀಗಿಸಲು ಹಾಗೂ ಆ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸಿ ಸೌಹಾರ್ದ ಬೆಸೆಯಲು ಜಮಾತೆ ಇಸ್ಲಾಮಿ ಹಿಂದ್ ಮತ್ತು ಕುದ್ರೋಳಿಯ ಮುಸ್ಲಿಂ ಐಕ್ಯತಾ ವೇದಿಕೆ ನೆರವಿನಿಂದ ಏರ್ಪಡಿಸಿದ್ದ ‘ಕುದ್ರೋಳಿ ಜಾಮಿಯಾ ಮಸೀದಿ ನೋಡಬನ್ನಿ’ ಕಾರ್ಯಕ್ರಮ ವೇದಿಕೆ ಕಲ್ಪಿಸಿತು.

ಕುರಾನ್ ಎಂದರೇನು, ಅದರ ಸಾರ ಏನು, ನಿತ್ಯವೂ ನಡೆಯುವ ನಮಾಜ್ನ ವಿಶೇಷತೆ ಏನು ಎಂಬ ಬಗ್ಗೆ ಮಸೀದಿಯ ಸ್ವಯಂಸೇವಕರು ಸಾರ್ವಜನಿಕರಿಗೆ ವಿವರಿಸಿದರು. ಮಸೀದಿಯಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಸಮಿತಿ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ, ರೊಸಾರಿಯೊ ಚರ್ಚ್ನ ಧರ್ಮಗುರು ವಲೇರಿಯನ್ ಡಿಸೋಜ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಆಂರ್ ರೈ ಮಾಲಾಡಿ, ಮೀನುಗಾರರ ಮುಖಂಡ ಚೇತನ್ ಬೆಂಗ್ರೆ, ಮೊಗವೀರ ಸಂಘದ ಲೋಕೇಶ್ ಪುತ್ರನ್, ಕಾರ್ಯಕ್ರಮದ ಸಂಚಾಲಕ ಅಜೀಜ್ ಕುದ್ರೋಳಿ, ಉಪಾಧ್ಯಕ್ಷರಾದ ಶಂಶುದ್ದೀನ್ ಎಚ್ಬಿಟಿ, ಯಾಸಿನ್ ಕುದ್ರೋಳಿ, ಆರಿಫ್ ಬಿ., ಅಬೂಬಕ್ಕರ್, ಕೆ.ಅಶ್ರಫ್, ಜಮಾತೆ ಇಸ್ಲಾಮಿ ಹಿಂದ್ನ ಜಮಾತೆ ಇಸ್ಲಾಮಿ ಹಿಂದ್ನ ಮಂಗಳೂರು ಉತ್ತರ ಘಟಕದ ಅಧ್ಯಕ್ಷ ಇಸ್ಹಾಕ್, ಮಸೀದಿಯ ಕಾರ್ಯದರ್ಶಿ ಎಸ್.ಎ.ಖಲೀಲ್ ಮೊದಲಾದವರು ಭಾಗವಹಿಸಿದರು.

ಅಧ್ಯಕ್ಷತೆಯನ್ನು ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲ ಬಿ.ಎಸ್.ಶರ್ಪುದ್ದೀನ್ ವಹಿಸಿದ್ದರು. ಮೌಲ್ವಿ ಶಫೀವುಲ್ಲಾ ಕುರಾನ್ ಪಠಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ.ಅಶ್ರಫ್ ಸ್ವಾಗತಿಸಿದರು. ಆಸಿಫ್ ಹುಸೇನ್ ಧನ್ಯವಾದ ಸಲ್ಲಿಸಿದರು. ಮಸೀದಿಗೆ ಬಂದವರಿಗೆ ಪಾನೀಯ ಹಾಗೂ ಖರ್ಜೂರ ನೀಡಿ ಬರಮಾಡಿಕೊಳ್ಳಲಾಯಿತು. ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಇಸ್ಲಾಂ ಧರ್ಮದ ಕುರಿತ ಪುಸ್ತಕ ಪ್ರದರ್ಶನವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.