ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣಗೆ ಟಿಕೆಟ್

Published 21 ಮಾರ್ಚ್ 2024, 16:57 IST
Last Updated 21 ಮಾರ್ಚ್ 2024, 16:57 IST
ಅಕ್ಷರ ಗಾತ್ರ

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬದಲಾಗಿ ಗುಲಬರ್ಗಾ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಖರ್ಗೆ ಪತ್ನಿ ರಾಧಾಬಾಯಿ ಅವರ ತಮ್ಮ ರಾಧಾಕೃಷ್ಣ ದೊಡ್ಡಮನಿ ಅವರು ಕಣಕ್ಕಿಳಿದಿದ್ದಾರೆ.

ಇದು ರಾಧಾಕೃಷ್ಣ ಅವರಿಗೆ ಮೊದಲ ಚುನಾವಣೆ. ತಮ್ಮ ಮಾವ ಐದು ದಶಕಗಳಿಂದ ರಾಜಕಾರಣದಲ್ಲಿದ್ದರೂ ರಾಜಕೀಯದತ್ತ ಮುಖಮಾಡದ ರಾಧಾಕೃಷ್ಣ ಅವರು ಖರ್ಗೆ ಅವರು ಸ್ಥಾಪಿಸಿದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ರಾಧಾಕೃಷ್ಣ, ಖರ್ಗೆ ಪುತ್ರಿ ಡಾ. ಜಯಶ್ರೀ ಅವರನ್ನು ಮದುವೆಯಾಗಿದ್ದಾರೆ. ದಂಪತಿಗೆ ಪ್ರಾರ್ಥನಾ ಎಂಬ ಮಗಳಿದ್ದಾರೆ.

ರಾಧಾಕೃಷ್ಣ ಅಧ್ಯಕ್ಷರಾಗಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿಯು ಬೆಂಗಳೂರಿನ ಡಾ.ಅಂಬೇಡ್ಕರ್ ಮೆಡಿಕಲ್ ಕಾಲೇಜು, ಕಲಬುರಗಿಯಲ್ಲಿರುವ , ಡಾ.ಅಂಬೇಡ್ಕರ್ ಪದವಿ, ಪಿಯು ಕಾಲೇಜು, ಸಿದ್ಧಾರ್ಥ ಕಾನೂನು ಕಾಲೇಜು, ಮಿಲಿಂದ್ ಶಾಲೆಗಳನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT