ಬೆಂಗಳೂರು: ಕನ್ನಡ ರಿಯಾಲಿಟಿ ಷೊ ‘ಬಿಗ್ ಬಾಸ್’ ವಿಜಯಿಯಾಗಿದ್ದ ಒಳ್ಳೆ ಹುಡುಗ ಪ್ರಥಮ್ ಈಗ ಬೈಟಿಂಗ್ ಸ್ಟಾರ್ ಆಗಿಬಿಟ್ಟಿದ್ದಾರೆ!. ಚಿತ್ರರಂಗದಲ್ಲಿ ಸಿನಿಮಾ ನಟರಿಗೆ ಒಂದೊಂದು ರೀತಿಯ ಸ್ಟಾರ್ 'ಬಿರುದು' ನೀಡುವಾಗ ಬಿಗ್ ಬಾಸ್ ಖ್ಯಾತಿಯ ಪ್ರಥಮ್ಗೆ ಬೈಟಿಂಗ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ದು ಬೇರೆ ಯಾರೂ ಅಲ್ಲ, ನೆಟಿಜನ್ಗಳು.

ಪ್ರಥಮ್ ಅವರಿಗೆ ಈ ಸ್ಟಾರ್ ಪದವಿ ಸಿಗಲು ಕಾರಣವಾಗಿದ್ದು ಭುವನ್ ಪೊನ್ನಣ್ಣ ಜತೆಗಿನ ಜಗಳ. ‘ಪ್ರಥಮ್ ನನ್ನ ತೊಡೆ ಕಚ್ಚಿದ್ದಾರೆ’ ಎಂದು ಆರೋಪಿಸಿ ಭುವನ್ ಅವರು ಶನಿವಾರ ತಲಘಟ್ಟಪುರ ಠಾಣೆಗೆ ದೂರು ಕೊಟ್ಟಿದ್ದಾರೆ.

ಆಗಿದ್ದೇನು?

ಕಲರ್ಸ್ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುವ ಸಂಜು ಮತ್ತು ನಾನು ಧಾರಾವಾಹಿಯ ಸೆಟ್ನಲ್ಲಿ ಭುವನ್ ಮತ್ತು ಪ್ರಥಮ್ ನಡುವೆ ಶನಿವಾರ ಸಂಜೆ ಜಗಳ ನಡೆದಿದೆ. ಈ ಜಗಳದಲ್ಲಿ ಪ್ರಥಮ್, ಭುವನ್ ಅವರ ತೊಡೆಗೆ ಕಚ್ಚಿದ್ದಾರೆ. ಈ ಬಗ್ಗೆ ಭುವನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭುವನ್, ಸಂಜನಾ ಮತ್ತು ಪ್ರಥಮ್ ಬಿಗ್ ಬಾಸ್ ಷೋನಲ್ಲಿ ಸಹಸ್ಪರ್ಧಿಗಳಾಗಿದ್ದರು. ಈ ಮೂವರನ್ನು ಕೇಂದ್ರೀಕರಿಸಿದ ಧಾರವಾಹಿಯೇ 'ಸಂಜು ಮತ್ತು ನಾನು'.

ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಥಮ್, ‘ಚಿತ್ರೀಕರಣದ ಸಮಯದಲ್ಲಿ ಸಣ್ಣಪುಟ್ಟ ವಾಗ್ವಾದ ಸಾಮಾನ್ಯ. ಹಾಗೆಯೇ ನನ್ನ–ಭುವನ್ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ, ನಾನು ಯಾರಿಗೂ ಕಚ್ಚಿಲ್ಲ. ಸೆಟ್ನಲ್ಲಿದ್ದ ನಾಯಿ ಭುವನ್ಗೆ ಕಚ್ಚಿರಬಹುದು’ ಎಂದಿದ್ದಾರೆ.

ಫೇಸ್ಬುಕ್ನಲ್ಲಿ ಪ್ರಥಮ್ ಬೈಟ್ನದ್ದೇ ಸುದ್ದಿ
ಪ್ರಥಮ್ ಭುವನ್ಗೆ ಕಚ್ಚಿರುವ ಸುದ್ದಿಯನ್ನು ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಪ್ರಥಮ್ ಬಗ್ಗೆ ತರಹೇವಾರಿ ಸ್ಟೇಟಸ್ಗಳು ಹರಿದಾಡಲು ತೊಡಗಿದೆ.

ಕೆಲವು ನೆಟಿಜನ್ಗಳು ಪ್ರಥಮ್ ಭುವನ್ಗೆ ಕಚ್ಚಿದ್ದಾರೆ ಎಂಬುದಕ್ಕೆ ಭುವನ್ ಗಾಯದ ಫೋಟೊ ಶೇರ್ ಮಾಡಿದರೆ ಇನ್ನು ಕೆಲವರು ಇದೆಲ್ಲಾ ಧಾರಾವಾಹಿ ತಂಡದ ಗಿಮಿಕ್ ಎಂದು ಬೈದಿದ್ದಾರೆ. ಆದಾಗ್ಯೂ, ಬಿಗ್ಬಾಸ್ ಷೋ ಗೆದ್ದ ನಂತರ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಪ್ರಥಮ್, ಭುವನ್ ತೊಡೆಗೆ ಕಚ್ಚುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಪ್ರಥಮ್ ಅವರ ಫೇಸ್ಬುಕ್ ಪುಟದಲ್ಲಿ ಏನಿದೆ?

ಹೀಗೊಂದು ಸ್ಟೇಟಸ್ ಹಾಕಿದ್ದ ಪ್ರಥಮ್ ಆ ನಂತರ ತಮ್ಮ ಹೊಸ ಚಿತ್ರದ ಬಗ್ಗೆ ಸ್ಟೇಟಸ್ ಅಪ್ಡೇಟ್ ಮಾಡಿದ್ದರು. ಇದಾದ ನಂತರ ಮತ್ತೆ ಬೈಟಿಂಗ್ ವಿಷಯವನ್ನೇ ಉಲ್ಲೇಖಿಸಿ ಹೀಗೊಂದು ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಕಂಡು ಬಂದ ಕೆಲವೊಂದು ಸ್ಟೇಟಸ್ಗಳು ಹೀಗಿವೆ

ಭುವನ್ ಬೆಂಬಲಕ್ಕೆ ನಿಂತ ಹರ್ಷಿಕಾ ಪೂಣಚ್ಚ

ಭುವನ್- ಪ್ರಥಮ್ ನಡುವಿನ ಕಚ್ಚಾಟ ಪ್ರಕರಣದ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ನಟಿ ಹರ್ಷಿಕಾ ಪೂಣಚ್ಚ, 'ಅವನು ಸೈಕೋಪಾಥ್ ಆಗಿದ್ದಾನಾ?. ಇದು ಅಮಾನವೀಯವಾದ ಘಟನೆ. ಅವನು ಭುವನ್ ಗೆ ಕಚ್ಚಿದ್ದು ಸರಿಯಲ್ಲ. ತಪ್ಪಿತಸ್ಥರನ್ನು ಶಿಕ್ಷಿಸಬೇಕು' ಎಂದು ಟ್ವೀಟಿಸಿ ಭುವನ್ಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.