ಸಮೀಕ್ಷೆಗಾಗಿ ರೂಪಿಸಿರುವ ಆ್ಯಪ್‌ನಲ್ಲಿ ಕುಟುಂಬದ ಮುಖ್ಯಸ್ಥನ ಆಧಾರ್ ಕಾರ್ಡ್ ವಿವರವನ್ನು ನಮೂದಿಸಿದ ಕೂಡಲೇ, ಅದಕ್ಕೆ ಜೋಡಣೆಯಾಗಿರುವ ಪಡಿತರ ಚೀಟಿಯ ವಿವರ ಸ್ವಯಂಚಾಲಿತವಾಗಿ ಗೋಚರವಾಗುತ್ತದೆ. ಆ ಕುಟುಂಬದ ಸಂಪೂರ್ಣ ವಿವರವೂ ಭರ್ತಿಯಾಗುತ್ತದೆ. ಒಂದೊಮ್ಮೆ ಕುಟುಂಬದ ಮುಖ್ಯಸ್ಥ ಪಡಿತರ ಚೀಟಿಯ ವಿವರ ನೀಡಿದರೆ, ಅದರಲ್ಲಿ ನಮೂದಾಗಿರುವ ಕುಟುಂಬದ ಸದಸ್ಯರ ಎಲ್ಲ ವಿವರಗಳೂ ಭರ್ತಿಯಾಗುತ್ತವೆ. ಪಡಿತರ ಚೀಟಿ ವಿವರ ನೀಡಿದ್ದರೂ ಅದರ ವಿವರಗಳು ಭರ್ತಿಯಾಗದಿದ್ದರೆ, ಅಂತಹವರು ಆಧಾರ್ ವಿವರವನ್ನು ಕಡ್ಡಾಯವಾಗಿ ನೀಡಬೇಕು.
ರಾಜ್ಯದಲ್ಲಿ 2015ರಲ್ಲಿ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಜನರಿಂದ ಮಾಹಿತಿ ಪಡೆದ ಸಂಗ್ರಹ ಚಿತ್ರ
ರಾಜ್ಯದಲ್ಲಿ 2015ರಲ್ಲಿ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಜನರಿಂದ ಮಾಹಿತಿ ಪಡೆದ ಸಂಗ್ರಹ ಚಿತ್ರ