ದಿನ ಭವಿಷ್ಯ: ಈ ರಾಶಿಯವರಿಗೆ ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು..
Published 21 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಶ್ವಾಸನೀಯ ವರ್ತನೆಯಿಂದ ಸಂತಸ ಉಂಟಾಗುವುದು. ಪ್ರವಾಸಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಅಭಿಪ್ರಾಯಗಳಿಗೆ ಕುಟುಂಬದವರು ಸಮ್ಮತಿ ಕೊಡಲಿದ್ದಾರೆ.
ವೃಷಭ
ಎಲ್ಲಾ ಪ್ರಯತ್ನಗಳು ಯಶಸ್ಸು ಕಾಣುವ ಹಾದಿಯಲ್ಲಿರುವುದು. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಫಲವನ್ನು ಅನುಭವಿಸುವಿರಿ. ಹಣದ ಪರಿಸ್ಥಿತಿ ಸುಧಾರಿಸಿ ನೆಮ್ಮದಿ. ಕಟ್ಟಡ ನಿರ್ಮಾಣದ ಬಗ್ಗೆ ಸಲಹೆ ಸಿಗುವುದು.
ಮಿಥುನ
ಕೆಲಸ ಕಾರ್ಯಗಳ ಬಗ್ಗೆ ನಿಗಾ ಕೊಡುವಂತೆ ತಂದೆ-ತಾಯಿಯಿಂದ ತೀವ್ರ ಸಂದೇಶ ಬರಲಿದೆ. ಮೇಲಧಿಕಾರಿಗಳು ಮೇಲಿಟ್ಟಿದ್ದ ಭರವಸೆ ಹುಸಿಯಾಗದಂತೆ ಕಾರ್ಯನಿರ್ವಹಿಸಲು ಅಶಕ್ತರಾಗುವ ಸಂಭವವಿದೆ.
ಕರ್ಕಾಟಕ
ಬಹಳ ದಿನಗಳ ನಂತರ ಮನಸ್ಸಿಗೆ ಹಿತವಾದ ಅನುಭವ ಸಿಗಲಿದೆ. ಹೆಂಡತಿಯ ಆರೈಕೆ ವಿಷಯವಾಗಿ ತಾಯಿ ಅಥವಾ ಅತ್ತೆಯವರನ್ನು ಕರೆ ತರುವಂತೆ ಆಗುವುದು. ಪರಿಶ್ರಮದ ಜೊತೆ ಅಧಿಕ ಸಮಯ ಮೀಸಲಿಡಿ.
ಸಿಂಹ
ಹಾಸ್ಯಪ್ರಜ್ಞೆ ಹೆಚ್ಚುವುದು ಆದರೆ ಹಾಸ್ಯದಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ. ಮದುವೆಯ ವಿಷಯಕ್ಕೆ ಸಂಬಂಧ ಪಟ್ಟಂತೆ ತಾಯಿಯ ಮತ್ತು ಅಣ್ಣಂದಿರ ಮನವೊಲಿಸುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ
ಆಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ವಾದ–ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ. ವೃತ್ತಿಪರ ಗಮನಹರಿಸಿ.
ತುಲಾ
ಸಿಟ್ಟು ಅಥವಾ ಯೋಚನಾರಹಿತ ನಿರ್ಧಾರಗಳು ಏಕಾಂಗಿತನಕ್ಕೆ ಕಾರಣವಾಗಲಿವೆ. ನೆಂಟರಿಷ್ಟರ ಸಲಹೆಸೂಚನೆಗಳನ್ನು ಆಲಿಸಿ ನಂತರದಲ್ಲಿ ಸನ್ಮಾರ್ಗದಲ್ಲಿ ನೆಡೆಯಿರಿ. ದೈವಬಲ ಒದಗಿ ಬಂದು ಅಭಿವೃದ್ಧಿಗೊಳ್ಳುವಿರಿ.
ವೃಶ್ಚಿಕ
ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು. ನಿರುದ್ಯೋಗಿಗಳಿಗೆ ಸಾಮಾಜಿಕ ಬದುಕಿನಲ್ಲಿ ಹೊಸ ತಿರುವು ಮೂಡುತ್ತದೆ. ಗೃಹನಿರ್ಮಾಣದಂತಹ ಕಾರ್ಯ ಕೈಗೊಂಡವರಿಗೆ ತೊಂದರೆ ಸೃಷ್ಟಿ ಮಾಡುವುದು.
ಧನು
ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ವೃದ್ಧಿಯಾಗುವುದು ಅಥವಾ ಸಂಶೋಧನಾ ವೃತ್ತಿಯಲ್ಲಿರುವವರಿಗೆ ಅಧ್ಯಯನಕ್ಕೆ ಸುಸಮಯ. ದೇಹದಲ್ಲಿ ಪಿತ್ತದ ಅಂಶ ಅಧಿಕವಾಗುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮಕರ
ಸಹೋದ್ಯೋಗಿಗಳೊಂದಿಗೆ ಆತ್ಮೀಯ ನಡೆ ಮತ್ತು ನುಡಿ ಮನಸ್ತಾಪಗಳನ್ನು ದೂರಮಾಡಲಿದೆ. ಸಮಾಜಸೇವೆಯಲ್ಲಿ ತೊಡಗಿ ಕೊಳ್ಳುವಿರಿ. ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು .
ಕುಂಭ
ವಾಹನ ವಹಿವಾಟುಗಳಿಂದ ಲಾಭವಿದೆ. ಶುಭಕಾರ್ಯಗಳಿಗೆ ಹಣ ವಿನಿಯೋಗಿಸುವಿರಿ. ರಾಜಕೀಯ ಸೇರ್ಪಡೆಗೆ ಆಹ್ವಾನ ಬರಲಿದೆ. ದೂರ ಉಳಿಯುವುದು ಕ್ಷೇಮವುಂಟುಮಾಡುತ್ತದೆ.
ಮೀನ
ಮನೋಬಲದಿಂದ ಕೆಲಸ ಕಾರ್ಯಗಳು ಚುರುಕಾಗಿ ಮತ್ತು ಅಚ್ಚುಕಟ್ಟಾಗಿ ನಡೆಯಲಿವೆ. ಹಣದ ಅಡಚಣೆ ಇರುವುದಿಲ್ಲ. ತಂದೆ-ತಾಯಿ ಆರೋಗ್ಯ ಸ್ಥಿತಿ ಉತ್ತಮ. ಮನರಂಜನೆಗಾಗಿ ಅಲ್ಪಕಾಲ ಮೀಸಲಿಡಿ