ಶನಿವಾರ, 11 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಅನಗತ್ಯ ಚಿಂತೆ ಮೈಮೇಲೆ ಎಳೆದುಕೊಳ್ಳಬೇಡಿ
Published 10 ಅಕ್ಟೋಬರ್ 2025, 23:42 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾವಧಾನದಿಂದ ದಿನದ ಕೆಲಸಗಳನ್ನು ಮಾಡಿ ಮುಗಿಸುವಿರಿ. ಮದುವೆಯ ವಿಷಯದಲ್ಲಿ ಮಗನೊಡನೆ ಮುಕ್ತ ಮನಸ್ಸಿನ ಮಾತುಕತೆ ನಡೆಯುವುದು. ಆರೋಗ್ಯ ಉತ್ತಮವಾಗಿರುವುದು.
ವೃಷಭ
ಕಳುವಾಗಿದ್ದ ವಸ್ತುಗಳು ಪುನಃ ದೊರೆತು ಸಂತಸವಾಗಲಿದೆ. ಲೇಖನ ಬರೆಯುವುದರಿಂದ ಜನಸಂಪರ್ಕ ಅಭಿವೃದ್ಧಿಯಾಗಲಿದೆ. ಮಾತಿನಲ್ಲಿ ಹಿಡಿತವಿರಲಿ.
ಮಿಥುನ
ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಂದೆ ಅವರಿಂದ ಎಚ್ಚರಿಕೆಯ ಮಾತು ಕೇಳಿ ಬರಲಿದೆ. ಮದುವೆಯ ವಿಷಯಕ್ಕೆ ಸಂಬಂಧಿಸಿದಂತೆ ತಾಯಿಯ ಮನವೊಲಿಸುವಲ್ಲಿ ಯಶಸ್ವಿಯಾಗುವಿರಿ.
ಕರ್ಕಾಟಕ
ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರಲಿ . ಮನೆಯಲ್ಲಿ ಆಲಂಕಾರಿಕ ವಸ್ತುಗಳ ಖರೀದಿಗೆ ಅಧಿಕ ಖರ್ಚು ಬಂದೀತು.ಸಣ್ಣ ವಿಚಾರದಲ್ಲಿ ಅಶಾಂತಿ ತೋರಿಬಂದು ದಾಂಪತ್ಯದಲ್ಲಿ ಕಿರಿಕಿರಿ ಎನಿಸಲಿದೆ.
ಸಿಂಹ
ಕೌಟುಂಬಿಕವಾಗಿ ಪ್ರಮುಖ ವಿಷಯವೊಂದು ತಿಳಿದುಬರಲಿದೆ. ಮುಕ್ತ ಮನಸ್ಸಿನ ಮಾತುಕತೆಗಳಿಂದ ಸರಿಪಡಿಸಿಕೊಳ್ಳಬಹುದು. ಕೆಲಸಗಳೆಲ್ಲವೂ ನಿರಾತಂಕವಾಗಿ ಸಾಗಲಿವೆ. ಸತ್ಕಾರ ಕೂಟಗಳಿಗೆ ಆಹ್ವಾನ ಬರಲಿದೆ.
ಕನ್ಯಾ
ಉದ್ಯೋಗ ಬದಲಿಸುವ ವಿಚಾರದಲ್ಲಿ ಯೋಚಿಸಿ. ಅಂದುಕೊಂಡಿರುವ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು. ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವಿರಿ.
ತುಲಾ
ಹಿಂದೆ ಕೈಗೊಂಡ ನಿರ್ಧಾರಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ವ್ಯವಹಾರಗಳಲ್ಲಿ ಉತ್ತಮ ಧನಲಾಭ ಕಾಣುವಿರಿ. ರಾಜಕೀಯ ಸನ್ನಿವೇಶಗಳು ಅನುಕೂಲವಾಗಿರುವುದು.
ವೃಶ್ಚಿಕ
ಕ್ರೀಡಾಪಟುಗಳಿಗೆ ಸಂತಸಕರ ಸುದ್ದಿ ಬರಲಿದೆ. ವಿವಾಹಯೋಗ್ಯರಿಗೆ ವಿವಾಹ ಭಾಗ್ಯ ಒದಗಿಬರುವುದು. ವಿದೇಶ ವ್ಯವಹಾರಗಳಿಂದ ಲಾಭವನ್ನು ಕಾಣುವಿರಿ. ಅನಗತ್ಯ ಚಿಂತೆ ಮೈಮೇಲೆ ಎಳೆದುಕೊಳ್ಳಬೇಡಿ.
ಧನು
ಓದು ಅಥವಾ ಉದ್ಯೋಗ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸಲಹೆ ದೊರೆಯಲಿದೆ. ಹೂಡಿಕೆ ಮಾಡುವುದು ಸದ್ಯ ಲಾಭದಾಯಕವಾಗಿ ತೋರುವುದಿಲ್ಲ. ತೋಟದ ಕೆಲಸಗಳಿಗೆ ಶ್ರಮ ಪಡುವಂತಾಗಲಿದೆ.
ಮಕರ
ವಿಮಾ ಕ್ಷೆತ್ರದಲ್ಲಿ ಸಾಧನೆ ತೋರಿದ್ದಕ್ಕೆ ಸಂಸ್ಥೆಯವರಿಂದ ವಿಶೇಷ ಪುರಸ್ಕಾರಗಳು ದೊರೆಯಲಿವೆ. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಆರೋಗ್ಯದಲ್ಲಿ ಗಮನವಿರಲಿ.
ಕುಂಭ
ಆದಾಯವಿರುವುದರಿಂದ ನೆಮ್ಮದಿ ತೋರುವುದು. ಕ್ರಯ ವಿಕ್ರಯಗಳಿಗೆ ಇದು ಉತ್ತಮ ಕಾಲ. ಸಾಧ್ಯವಾದಷ್ಷು ಸಮಾಧಾನವಿದ್ದಲ್ಲಿ ಮಾನಸಿಕ ನೆಮ್ಮದಿ ಕಾಣುವಿರಿ. ಆರ್ಥಿಕವೃದ್ಧಿ, ಆರೋಗ್ಯವೃದ್ಧಿ.
ಮೀನ
ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂಥ ಕೆಲಸಗಳಿಗಾಗಿ ಸಮಯ ವಿನಿಯೋಗಿಸುವಿರಿ. ರಕ್ತದೊತ್ತಡ ಕಡಿಮೆಯಾಗಿ ಮನಸ್ಸಿಗೆ ಸಮಾಧಾನ ಉಂಟಾಗಲಿದೆ. ಔಷಧ ವ್ಯಾಪಾರಗಳಿಂದ ಲಾಭ ಹೊಂದುವಿರಿ.
ADVERTISEMENT
ADVERTISEMENT