ದಿನ ಭವಿಷ್ಯ: ಮೇ 6 ಮಂಗಳವಾರ 2025– ಇಂದು ವಿವಾಹ ಅಪೇಕ್ಷಿಗಳಿಗೆ ಶುಭವಿದೆ
Published 5 ಮೇ 2025, 18:56 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶತ್ರುಗಳ ಬಾಧೆ ದೂರಾಗಿ ಯೋಜನೆಗಳು ಈಡೇರಲಿವೆ. ಅನಿರೀಕ್ಷಿತವಾಗಿ ಆಗುವ ವರ್ಗಾವಣೆಯಿಂದ ಅನುಕೂಲ ಪಡೆದುಕೊಳ್ಳುವಿರಿ. ನಿರುದ್ಯೋಗಿಗಳು ಕೆಲಸದಲ್ಲೇ ತೃಪ್ತಿಪಡುವಂತೆ ಆಗುವುದು.
ವೃಷಭ
ಶತ್ರುಗಳ ಬಾಧೆ ದೂರಾಗಿ ಯೋಜನೆಗಳು ಈಡೇರಲಿವೆ. ಅನಿರೀಕ್ಷಿತವಾಗಿ ಆಗುವ ವರ್ಗಾವಣೆಯಿಂದ ಅನುಕೂಲ ಪಡೆದುಕೊಳ್ಳುವಿರಿ. ನಿರುದ್ಯೋಗಿಗಳು ಕೆಲಸದಲ್ಲೇ ತೃಪ್ತಿಪಡುವಂತೆ ಆಗುವುದು.
ಮಿಥುನ
ಕನಸುಗಳು ಕನಸಾಗಿಯೇ ಉಳಿಯಲಿವೆ. ಸರ್ಕಾರಿ ಅಧಿಕಾರಿಗಳ ಅಥವಾ ಹಿರಿಯರಿಂದ ಸಹಕಾರಗಳನ್ನು ಅಪೇಕ್ಷಿಸುವಂತೆ ಆಗಲಿದೆ. ಶುಭ ಕಾರ್ಯಗಳ ಪೂರ್ವತಯಾರಿಯ ಸಂಭವವಿರುವುದು.
ಕರ್ಕಾಟಕ
ಆಲೋಚನೆಯಂತೆ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗಲಿದೆ. ವೃತ್ತಿಯ ಕೆಲಸವನ್ನು ಆಲಸ್ಯದಿಂದಾಗಲಿ ಅಥವಾ ತಾಂತ್ರಿಕ ದೋಷದಿಂದಾಗಲಿ ಮುಂದೂಡುವುದು ಸರಿಯಲ್ಲ.
ಸಿಂಹ
ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳು ತನ್ನಂತಾನೆ ಬಗೆಹರಿದು ಮನಸ್ಸು ನಿರಾಳವಾಗಲಿವೆ. ಕಬ್ಬಿಣದ ಕೆಲಸ ಮಾಡುವವರು ಕೆಲಸದಲ್ಲಿ ಜಾಗ್ರತರಾಗಿರಿ. ರಾಜಕಾರಣಿಗಳಿಗೆ ಗೌರವ ಹಾಗೂ ಮನ್ನಣೆ ದೊರೆಯುತ್ತದೆ.
ಕನ್ಯಾ
ಹೋಟೆಲ್ ಉದ್ಯಮದಾರರಿಗೆ ಬಹುನಿರೀಕ್ಷಿತ ಲಾಭಗಳು ಎದುರಾಗುವುದು. ಕೆಲಸಕ್ಕೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವುದು ಉತ್ತಮ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ.
ತುಲಾ
ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತ ರೀತಿ ಮಾಡಿಕೊಳ್ಳುವುದು ಒಳ್ಳೆಯದು. ಸಮೀಪವರ್ತಿಗಳ ಆಶ್ವಾಸನೆ ದೊರೆತು ಶುಭ ಕಾರ್ಯಗಳತ್ತ ಗಮನ ಹರಿಸುವಿರಿ.
ವೃಶ್ಚಿಕ
ಆತ್ಮಸ್ಥೈರ್ಯದಿಂದ ಕೆಲಸವನ್ನು ಪ್ರಾರಂಭಿಸಿದರೂ ಜಯ ಕಾಣುವಿರಿ. ಕಾರ್ಯವೈಖರಿ ಆಫೀಸಿನಲ್ಲಿ ಮೆಚ್ಚುವ ಮಾತಾಗುವುದು. ಯಾವುದೇ ವಿಚಾರಗಳಿಗೂ ಬೇಸರ ಪಡುವ ಅವಶ್ಯಕತೆ ಇಲ್ಲ.
ಧನು
ವಿಷಯಗಳಲ್ಲಿಯೂ ಸ್ವಾಭಾವಿಕ ಗುಣಕ್ಕಿಂತ ಹೆಚ್ಚಿನ ಸಮಾಧಾನದಿಂದಿರುವುದು ಉತ್ತಮ. ಕೇವಲ ಮನರಂಜನೆಗಾಗಿ ದೂರ ಪ್ರಯಾಣ ಸರಿಯಲ್ಲ. ದಿನಸಿ ವರ್ತಕರಿಗೆ ಉತ್ತಮ ಲಾಭ. ಆಲಸ್ಯವಾಗುವುದು.
ಮಕರ
ಇಂಧನ ಮಾರಾಟಗಾರರಿಗೆ ಹೆಚ್ಚಿನ ಕಮಿಷನ್ ಲಭ್ಯವಾಗಲಿದೆ. ಕೆಲಸಕ್ಕೆ ಆಲೋಚನೆಗಿಂತ ಹೆಚ್ಚಿನ ಸಮಯ ಬೇಕಾಗುವುದು. ಸರಿ-ತಪ್ಪುಗಳ ತೀರ್ಮಾನದಲ್ಲಿ ಗೊಂದಲಕ್ಕೆ ಒಳಗಾಗುವಿರಿ. ವಿವಾಹ ಅಪೇಕ್ಷಿಗಳಿಗೆ ಶುಭವಿದೆ.
ಕುಂಭ
ಸ್ನೇಹಿತರಿಗೆ ಸ್ವಯಂಪ್ರೇರಣೆಯಿಂದ ವ್ಯವಹಾರಿಕ ಸಲಹೆ ಕೊಡುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಶುಭ ದಿನ. ಅದರಲ್ಲೂ ಸಂಶೋಧನಾ ವಿದ್ಯಾರ್ಥಿಗಳಿಗೆ ಸಲಹೆಗಾರರಿಂದ ಉತ್ತಮ ಮಾರ್ಗದರ್ಶನ ಸಿಗುವುದು.
ಮೀನ
ದೊಡ್ಡ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಯೋಚಿಸಿ ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಕಹಿ ಘಟನೆಗಳಿಂದ ಕಲಿತ ಪಾಠ ಉಪಯೋಗಕ್ಕೆ ಬರಲಿದೆ. ಸ್ನೇಹಿತರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸಿಕೊಳ್ಳುವಿರಿ.