ನಾರಾಯಣಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ದಂಪತಿ ಸೇರಿದಂತೆ 19 ನಕ್ಸಲರು ಇಂದು (ಸೋಮವಾರ) ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರು ಮಾವೋವಾದಿಗಳ ಪಮೇದ್ ಪ್ರದೇಶ ಸಮಿತಿ ಮತ್ತು ಆಂಧ್ರ ಒಡಿಶಾ ಗಡಿ (ಎಒಬಿ) ವಿಭಾಗಕ್ಕೆ ಸೇರಿದ ಕಾರ್ಯಕರ್ತರು. ಪೊಲೀಸ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.

ಪೊಳ್ಳು ಮಾವೋವಾದಿ ಸಿದ್ಧಾಂತದಿಂದ ನಿರಾಶೆ ಅನುಭವಿಸಿ ಮತ್ತು ಸಂಘಟನೆಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬೇಸತ್ತು ಇವರು ಶರಣಾಗಿದ್ದಾರೆ ಎಂದು ಬಿಜಾಪುರದ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
.ಮಣಿಪುರ ಗಲಭೆ: ಅಸ್ಸಾಂನ ಗುವಾಹಟಿಯಲ್ಲಿ ವಿಚಾರಣೆ ನಡೆಸಲು SC ನಿರ್ದೇಶನ.IPL 2025: ಆರ್ಸಿಬಿಯ ಮಾಜಿ ನಾಯಕ ಡುಪ್ಲೆಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ಉಪನಾಯಕ.ಪ್ಯಾಂಕ್ರಿಯಾಸ್ ಕ್ಯಾನ್ಸರ್ಗೆ ಲಸಿಕೆ: ಭಾರತೀಯ ಡಾ.ವಿನೋದ್ ತಂಡದ ಯಶಸ್ವಿ ಪ್ರಯೋಗ.
ದೇವ ಪದಮ್ (30) ಮತ್ತು ಅವರ ಪತ್ನಿ ದುಲೆ ಕಲ್ಮು (28) ಮಾವೋವಾದಿಗಳ ಬೆಟಾಲಿಯನ್ ನಂ.1ರಲ್ಲಿ ಸದಸ್ಯರಾಗಿ ಸಕ್ರಿಯರಾಗಿದ್ದರು. ಇವರ ಸುಳಿವು ನೀಡಿದವರಿಗೆ ಸರ್ಕಾರ ಬಹುಮಾನವನ್ನು ಘೋಷಿಸಿತ್ತು.

ನಿಯ ನೆಲ್ಲನಾರ್' (ನಿಮ್ಮ ಒಳ್ಳೆಯ ಗ್ರಾಮ) ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾಗಿದ್ದು, ಭವಿಷ್ಯದಲ್ಲಿ ಜನಸಾಮಾನ್ಯರಂತೆ ಜೀವನ ನಡೆಸಲು ಬಯಸುವುದಾಗಿ ಅವರು(ನಕ್ಸಲರು) ಹೇಳಿರುವುದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.
.ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಲಿಂಗ ಸಮಾನತೆ ಕಾಪಾಡಿ: ಸಚಿವಾಲಯಕ್ಕೆ ದೆಹಲಿ HC.ಇಳಿಕೆಯಾಗದ ತೈಲ ಬೆಲೆ: ಮೋದಿ ಸರ್ಕಾರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ.
ಜಿಲ್ಲಾ ಮೀಸಲು ಪಡೆ (ಡಿಆರ್ಜಿ), ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ (ಎಸ್ಟಿಎಫ್), ಸಿಆರ್ಪಿಎಫ್ ಮತ್ತು ಗಣ್ಯ ಘಟಕ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಪಡೆಗಳ ಕಾರ್ಯಾಚರಣೆಯು ನಕ್ಸಲರ ಶರಣಾಗತಿಗೆ ಪ್ರಮುಖ ಪಾತ್ರ ವಹಿಸಿವೆ ಎಂದು ಯಾದವ್ ತಿಳಿಸಿದ್ದಾರೆ.

ಶರಣಾದ ಎಲ್ಲಾ ನಕ್ಸಲರಿಗೆ ತಲಾ ₹25,000 ನೆರವು ನೀಡಲಾಗಿದ್ದು, ಸರ್ಕಾರಿ ನಿಯಮಗಳ ಪ್ರಕಾರ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಈ ಕಾರ್ಯಾಚರಣೆಯೊಂದಿಗೆ ಈ ವರ್ಷ ಇದುವರೆಗೆ ಬಿಜಾಪುರ ಜಿಲ್ಲೆಯಲ್ಲಿ 84 ನಕ್ಸಲರು ಶರಣಾಗಿದ್ದಾರೆ.
.ಕೃಷ್ಣನ ಬೋಧನೆಗಳು ಶಕ್ತಿ ನೀಡುತ್ತವೆ ಎಂದ US ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ.ಪ್ರಚೋದನಕಾರಿ ಹೇಳಿಕೆ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.