ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 270 ಮಂದಿಯ ಪೈಕಿ ಡಿಎನ್ಎ ಪರೀಕ್ಷೆಯ ಮೂಲಕ 211 ಮಂದಿಯ ಗುರುತನ್ನು ಪತ್ತೆಹಚ್ಚಲಾಗಿದೆ. ಈವರೆಗೆ 189 ಮಂದಿಯ ಮೃತದೇಹವನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಇಲ್ಲಿನ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ರಾಕೇಶ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘142 ಮಂದಿ ಭಾರತೀಯರ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. 32 ಮಂದಿ ಬ್ರಿಟಿಷ್ ಪ್ರಜೆಗಳ, ಪೋರ್ಚುಗೀಸ್ನ 7 ಮಂದಿಯ ಮತ್ತು ಕೆನಡಾದ ಒಬ್ಬ ಪ್ರಜೆಯ ಮೃತದೇಹಗಳನ್ನೂ ಅವರವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಅವಘಡ ನಡೆದಾಗ ಆಸ್ಪತ್ರೆ ಸಂಕೀರ್ಣದಲ್ಲಿ ಮೃತಪಟ್ಟವರ ಪೈಕಿ 7 ಮಂದಿಯ ಮೃತದೇಹಗಳನ್ನೂ ಆಯಾ ಕುಟುಂಬದವರಿಗೆ ತಲುಪಿಸಲಾಗಿದೆ’ ಎಂದಿದ್ದಾರೆ.
.Plane Crash: ವಿಮಾನ ಸಿಬ್ಬಂದಿ ಲಾಮ್ನುಂಥೆಮ್ ಮೃತದೇಹ ಸ್ವೀಕರಿಸಿದ ಕುಟುಂಬಸ್ಥರು.
242 ಮಂದಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಯನ್ನೊಳಗೊಂಡಿದ್ದ ಏರ್ ಇಂಡಿಯಾ ವಿಮಾನವು ಜೂನ್ 12ರಂದು ಅಹಮದಾಬಾದ್ನಲ್ಲಿ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು.
.Ahmedabad Plane Crash: ಸಹ ಪೈಲಟ್ ಕ್ಲೈವ್ ಕುಂದರ್ ಮೃತದೇಹ ಸ್ವಗೃಹಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.