ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ಮುಂದುವರಿದ ಭಾರತ ಜೋಡೊ ನ್ಯಾಯ ಯಾತ್ರೆ; ಜನರೊಂದಿಗೆ ರಾಹುಲ್ ಸಂವಾದ

Published 20 ಜನವರಿ 2024, 5:32 IST
Last Updated 20 ಜನವರಿ 2024, 5:32 IST
ಅಕ್ಷರ ಗಾತ್ರ

ಉತ್ತರ ಲಖೀಂಪುರ (ಅಸ್ಸಾಂ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೊ ನ್ಯಾಯ ಯಾತ್ರೆಯು ಶನಿವಾರ ಅಸ್ಸಾಂನ ಲಖೀಂಪುರದ ಭೋಗಿನದಿಯಿಂದ ಮುಂದುವರಿಯಿತು.

ಬಸ್‌ ಮೂಲಕ ಯಾತ್ರೆ ಆರಂಭವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ರಾಹುಲ್ ಗಾಂಧಿ ಅವರಿಗೆ ಶುಭಕೋರಿದರು.

ಎರಡು ಬಾರಿ ಬಸ್‌ನಿಂದ ಇಳಿದ ಅವರು, ಜನರೊಂದಿಗೆ ಮಾತನಾಡುತ್ತಾ ಕೆಲ ದೂರ ನಡೆದರು.

ವೇಳಾಪಟ್ಟಿ ಪ್ರಕಾರ ಯಾತ್ರೆಯು, ಗೋವಿಂದಪುರದಲ್ಲಿ ಬೆಳಗ್ಗಿನ ವಿರಾಮ ಇರಲಿದೆ. ಅಲ್ಲಿ ಹಿರಿಯ ನಾಯಕರಾದ ಜೈರಾಮ್ ರಮೇಶ್‌, ಜಿತೇಂದ್ರ ಸಿಂಗ್‌, ಭೂಪೆನ್ ಬೋರಾ ಹಾಗೂ ದೇವಬ್ರತಾ ಸೈಕಿಯಾ ಅವರು ಪತ್ರಿಕಾಗೋಷ್ಟಿ ನಡೆಸಲಿದ್ದಾರೆ.

ಹರುಮುತಿಯಿಂದ ಮಧ್ಯಾಹ್ನದ ಬಳಿಕ ಯಾತ್ರೆ ಮುಂದುವರಿಯಲಿದ್ದು, ಗುಮ್ಟೊ ಮೂಲಕ ಅರುಣಾಚಲ ಪ್ರದೇಶವನ್ನು ಪ್ರವೇಶಿಸಲಿದೆ. ಅಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಅರುಣಾಚಲದ ಮೈತುನ್‌ ಗೇಟ್‌ನಿಂದ ಇಟಾನಗರದವರೆಗೆ ಪಾದಯಾತ್ರೆ ಮೂಲಕ ಸಾಗಿ, ಅಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಇಟಾನಗರ ಸಮೀಪದ ಚಿಂಪು ಗ್ರಾಮದಲ್ಲಿ ಯಾತ್ರೆ ತಂಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT