ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರ ‘ಜೈ ಶ್ರೀರಾಮ್’ ಘೋಷಣೆ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣ ಪೂರ್ಣಗೊಂಡಿದ್ದರ ಸಂಕೇತವಾಗಿ ಮಂಗಳವಾರ ‘ರಾಮ ಧ್ವಜ’ದ ಆರೋಹಣ ನೆರವೇರಿಸಿದರು.

ಮಂದಿರದ ಶಿಖರಕ್ಕೆ ‘ರಾಮ ಧ್ವಜ’ವನ್ನು ಆರೋಹಣ ಮಾಡಿದ ವೇಳೆ ಪ್ರಧಾನಿ ಮೋದಿ ಅವರು ಭಾವುಕರಾಗಿದ್ದರು. ಅಲ್ಲಿ ಸೇರಿದ್ದ ಸಾಧು–ಸಂತರು ಕಣ್ಣಾಲಿಗಳು ತೇವಗೊಂಡವು. ‘ಎಷ್ಟೋ ವರ್ಷದ ಕಠಿಣ ತಪಸ್ಸಿನಿಂದ ಮಾತ್ರವೇ ಇಂಥ ದೃಶ್ಯಕ್ಕೆ ಸಾಕ್ಷಿಯಾಗಲು ಸಾಧ್ಯ’ ಎಂದು ಸಾಧು–ಸಂತರು ಸಂತಸ ವ್ಯಕ್ತಪಡಿಸಿದರು.

ಬೆಳಿಗ್ಗೆ 11.50ರ ಬಳಿಕ ಬಂದ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು. ‘ಮಂಗಳವಾರವು ವಿವಾಹ ಪಂಚಮಿಯಾಗಿದ್ದು, ಇದೇ ದಿನ ರಾಮ ಮತ್ತು ಸೀತೆಯು ವಿವಾಹವಾಗಿದ್ದರು ಎಂದು ನಂಬಲಾಗಿದೆ. ಜೊತೆಗೆ 17ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ 48 ತಾಸು ಧ್ಯಾನ ಕೈಗೊಂಡಿದ್ದ ಗುರು ತೇಜ್ ಬಹದ್ದೂರ್ ಅವರ ಸ್ಮರಣೆಯ ದಿನವೂ ಹೌದು’ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ.

ಇದೇ ವೇಳೆ ಮಂದಿರದ ಸಂಕೀರ್ಣದಲ್ಲಿರುವ ಎಲ್ಲ 7 ದೇವಸ್ಥಾನಗಳಲ್ಲಿಯೂ ಧ್ವಜಾಹೋರಣ ಮಾಡಲಾಯಿತು.

ನಾಲ್ಕು ದಿನಗಳಿಂದ ರಾಮ ಮಂದಿರದಲ್ಲಿ ವಿಶೇಷ ಪೂಜೆಗಳು, ಯಜ್ಞಗಳು ನಡೆದಿದ್ದವು. ಇಡೀ ಅಯೋಧ್ಯೆ ನಗರವೇ ಸಿಂಗಾರಗೊಂಡಿತ್ತು. ಮಂಗಳವಾರ ಅಂಗಡಿಗಳು ಮುಚ್ಚಿದ್ದವು. ಶೆಟರ್ಗಳ ಮೇಲೆ ಜೈ ಶ್ರೀರಾಮ್ ಘೋಷಣೆಗಳನ್ನು ಬರೆಯಲಾಗಿತ್ತು. ಹನುಮಂತನ ಚಿತ್ರಗಳೂ ಇದ್ದವು. ಬಸ್ ಹಾಗೂ ರೈಲು ನಿಲ್ದಾಣಗಳು ಜನರಿಂದ ತುಂಬಿದ್ದವು.

‘ಇದು 500 ವರ್ಷಗಳ ಬಳಿಕ ಬಂದ ಸಾರ್ಥಕ ಕ್ಷಣ. ನಮ್ಮ ಪೂರ್ವಜರು ಈ ದಿನಕ್ಕಾಗಿಯೇ ತ್ಯಾಗ ಮಾಡಿದ್ದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವುದು ನಮ್ಮ ಭಾಗ್ಯ’ ಎಂದು ಭಕ್ತರೊಬ್ಬರು ಹೇಳಿದರು. ಛತ್ತೀಸಗಢ, ಒಡಿಶಾ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರಗಳಿಂದ ವಿದ್ವಾಂಸರು ಬಂದಿದ್ದರು. ಉತ್ತರ ಪ್ರದೇಶದ ವೇದ ಪಂಡಿತರೂ ಉಪಸ್ಥಿತರಿದ್ದರು.

‘ಧ್ವಜಾರೋಹಣ ಕಾರ್ಯದ ಎಲ್ಲ ಪೂಜಾ, ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ರಾಮ ದೇವರ ದರ್ಶನವನ್ನು ಪುನಃ ಆರಂಭಿಸಲಾಗುವುದು’ ಎಂದು ರಾಮಜನ್ಮಭೂಮಿ ಟ್ರಸ್ಟ್ ಹೇಳಿದೆ. ಸೋಮವಾರ ಮತ್ತು ಮಂಗಳವಾರ ಮಂದಿರದಲ್ಲಿ ಸುಮಾರು 500 ಕಲಾವಿದರಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಆದಿತ್ಯನಾಥ ಅವರು ಭಾಗವಹಿಸಿದ್ದರು.

ಭದ್ರತೆ: ಸುಮಾರು 6,970 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಟಿಎಸ್ ಕಮಾಂಡೊಗಳು, ಎನ್ಎಸ್ಜಿ ಸಿಬ್ಬಂದಿ, ಸೈಬರ್ ತಜ್ಞರನ್ನೂ ನಿಯೋಜಿಸಲಾಗಿದೆ. ಮಂದಿರದ ಸುತ್ತ ಡ್ರೋನ್ ನಿಷ್ಕ್ರಿಯ ವ್ಯವಸ್ಥೆ ಮತ್ತು ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ಮಂದಿರ ನಿರ್ಮಾಣಕ್ಕೆ ಯೋಜನೆಯು ಆರಂಭಗೊಂಡಿತ್ತು. 2020ರ ಆಗಸ್ಟ್ನಲ್ಲಿ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಳಿಕ 2022ರ ಜನವರಿಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿತ್ತು. ಈಗ ಮಂದಿರ ನಿರ್ಮಾಣವು ಪೂರ್ಣಗೊಂಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ತಮ್ಮ ಜೀವ ತ್ಯಾಗ ಮಾಡಿದವರ ಆತ್ಮಕ್ಕೆ ಈಗ ಶಾಂತಿ ದೊರೆತಿರಬಹುದು
ಮೋಹನ್ ಭಾಗವತ್. ಆರ್ಎಸ್ಎಸ್ ಮುಖ್ಯಸ್ಥ

ಇದು ರಾಷ್ಟ್ರಮಂದಿರ. ಈ ಧ್ವಜವು ಸತ್ಯಕ್ಕೆ ಸಾವಿಲ್ಲ ಎನ್ನುವುದನ್ನು ನಂಬಿಕೆಯ ಅನಂತತೆಯನ್ನು ಸಂಸ್ಕೃತಿಯ ಪುನರುತ್ಥಾನವನ್ನು ಪ್ರನಿಧಿಸುತ್ತದೆ
ಆದಿತ್ಯನಾಥ, ಉತ್ತರ ಪ್ರದೇಶದ ಮುಖ್ಯಮಂತ್ರಿ

ರಾಮ ಧ್ವಜ ಹೇಗಿದೆ?

ರಾಮ ಮಂದಿರದ ಶಿಖರದಿಂದ 161 ಅಡಿ ಮೇಲೆ ಹಾರಾಡುತ್ತಿರುವ ರಾಮ ಧ್ವಜವು ತ್ರಿಭುಜ ಆಕಾರದಲ್ಲಿದ್ದು 11 ಅಡಿ ಅಗಲ ಮತ್ತು 21 ಅಡಿ ಉದ್ದವಿದೆ. ಧ್ವಜವು 2 ಕೆ.ಜಿ. ತೂಕವಿದೆ. ಪ್ಯಾರಾಚೂಟ್ನಲ್ಲಿ ಬಳಸುವ ಬಟ್ಟೆಯ ಮಾದರಿಯನ್ನೇ ಧ್ವಜದಲ್ಲಿಯೂ ಬಳಸಲಾಗಿದೆ. ಹಗ್ಗವನ್ನು ನೈಲಾನ್ನಿಂದ ಮಾಡಲಾಗಿದೆ. ‘ಧ್ವಜದಲ್ಲಿರುವ ಕೇಸರಿ ಬಣ್ಣವು ಬೆಂಕಿಯನ್ನು ಉದಯಿಸುವ ಸೂರ್ಯನನ್ನೂ ಸಂಕೇತಿಸುತ್ತದೆ. ಇದು ತ್ಯಾಗ ಮತ್ತು ಸಮರ್ಪಣೆಯ ರೂಪಕ’ ಎಂದು ಟ್ರಸ್ಟ್ ಹೇಳಿದೆ. ಏನನ್ನು ಸಂಕೇತಿಸುತ್ತದೆ? ಧ್ವಜದಲ್ಲಿ ಮೂರು ಪ್ರತೀಕಗಳಿವೆ– ಸೂರ್ಯ ಓಂ ಮತ್ತು ಕೋವಿದಾರಾ ಮರ ಸೂರ್ಯ: ರಾಮನ ‘ಸೂರ್ಯವಂಶ’ದ ಸಂಕೇತ. ಇದು ತ್ರೇತಾಯುಗವನ್ನೂ ಪ್ರತಿನಿಧಿಸುತ್ತದೆ ಓಂ: ಆಧ್ಯಾತ್ಮಿಕತೆಯ ಪ್ರತೀಕ ಕೋವಿದಾರಾ ಮರ: ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಮರವನ್ನು ‘ಬಸವನ ಪಾದ’ (ಇದಕ್ಕೆ ಔಷಧೀಯ ಮಹತ್ವವೂ ಇದೆ) ಎಂದೂ ಕರೆಯುತ್ತಾರೆ. ಈ ಮರವು ಅಯೋಧ್ಯೆಯ ಲಾಂಛನವಾಗಿತ್ತು ಎಂದು ರಾಮಾಯಣದಿಂದ ತಿಳಿಯುತ್ತದೆ. ರಾಮ ಸೀತೆ ಮತ್ತು ಲಕ್ಷ್ಮಣರು ವನವಾಸದಲ್ಲಿದ್ದಾಗ ಭರತನು ಇವರನ್ನು ಅಯೋಧ್ಯೆಗೆ ಹಿಂದಕ್ಕೆ ಕರೆತರಲು ಕಾಡಿಗೆ ಹೋಗುತ್ತಾನೆ. ಆಗ ರಥದಲ್ಲಿದ್ದ ಈ ವೃಕ್ಷದ ಲಾಂಛನವನ್ನು ನೋಡಿಯೇ ಬರುತ್ತಿರುವುದು ಭರತನೇ ಎಂದು ಲಕ್ಷ್ಮಣನು ರಾಮನಿಗೆ ಖಚಿತಪಡಿಸುತ್ತಾನೆ ಎನ್ನುವ ವಿವರ ಈ ರಾಮಾಯಣದಲ್ಲಿದೆ

‘ಐದು ಶತಮಾನಗಳ ಹಿಂದಿನ ಗಾಯ ಮಾಸುತ್ತಿದೆ’

‘ಶತಮಾನಗಳಷ್ಟು ಹಳೆಯ ಗಾಯವು ಇಂದು ಮಾಸುತ್ತಿದೆ. ಇಷ್ಟು ಶತಮಾನಗಳ ನೋವು ಇಂದು ಮರೆಯಾಗುತ್ತಿದೆ. 500 ವರ್ಷಗಳ ಹಂಬಲ ಕೊನೆಗೂ ಪೂರ್ಣಗೊಂಡಿದೆ. ಇಂದು ಇಡೀ ದೇಶ ಮತ್ತು ಜಗತ್ತೇ ರಾಮನಾಮನಲ್ಲಿ ಸೇರಿಹೋಗಿದೆ’ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ‘ನಾವು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ದೇಶವಾಗಲಿದ್ದೇವೆ. ಇದನ್ನು ಸಾಧಿಸಲು ನಿಮ್ಮೊಳಗಿರುವ ರಾಮನನ್ನು ಜಾಗೃತ ಮಾಡಿಕೊಳ್ಳಿ. ರಾಮ ಒಬ್ಬ ಮನುಷ್ಯ ಮಾತ್ರನಲ್ಲ. ಅವನೊಂದು ಮೌಲ್ಯ ಶಿಸ್ತು ಮತ್ತು ದಿಕ್ಕು–ದೆಸೆ. ಗುಲಾಮಗಿರಿಯ ಮನಃಸ್ಥಿತಿಯಿಂದ ಮುಕ್ತರಾಗಬೇಕು. ನಮ್ಮ ನಾಗರಿಕತೆಯ ಅಸ್ಮಿತೆಯ ಬಗ್ಗೆ ಹೆಮ್ಮೆ ಪಡಬೇಕು’ ಎಂದು ನಾಗರಿಕರಿಗೆ ಕರೆ ನೀಡಿದರು. ‘ಭಾರತವನ್ನು ತನ್ನ ಬೇರುಗಳಿಂದ ಬೇರ್ಪಡಿಸಲು 190 ವರ್ಷಗಳ ಹಿಂದೆಯೇ ಬೀಜ ಬಿತ್ತಿದರು. ನಮಗೆ ಸ್ವಾತಂತ್ರವೇನೋ ಸಿಕ್ಕಿತ್ತು. ಆದರೆ ಕೀಳರಿಮೆಯಿಂದ ಮುಕ್ತಿ ಸಿಗಲಿಲ್ಲ. ಮುಂದಿನ 10 ವರ್ಷಗಳನ್ನು ಈ ಕೀಳರಿಮೆಯಿಂದ ಗುಲಾಮಗಿರಿಯಿಂದ ಹೊರಬರಲು ಮೀಸಲಿಡಬೇಕು’ ಎಂದರು. ‘ಭಾರತಕ್ಕೆ ಪ್ರಜಾಪ್ರಭುತ್ವವು ವಿದೇಶದಿಂದ ಬಂದಿದ್ದು ಎಂಬಂತೆ ವಸಾಹತುಶಾಹಿ ಯುಗದ ವಿಕಾರಗಳು ಬಿಂಬಿಸಿದ್ದವು. ಆದರೆ ಪ್ರಜಾಪ್ರಭುತ್ವಕ್ಕೆ ಭಾರತವೇ ತಾಯಿ. ನಮ್ಮ ವಂಶವಾಹಿಯಲ್ಲಿಯೇ ಪ್ರಜಾಪ್ರಭುತ್ವವಿದೆ. ಸುಳ್ಳಿನ ಮೇಲೆ ಸತ್ಯಕ್ಕೆ ಎಂದಿಗೂ ಜಯ ಎನ್ನುವುದಕ್ಕೆ ಈ ಧ್ವಜ ಸಂಕೇತ’ ಎಂದರು. ‘ನಮ್ಮ ಸರ್ಕಾರದ ನೀತಿಗಳು ರಾಮ ರಾಜ್ಯದಲ್ಲಿದ್ದ ನೀತಿಗಳನ್ನೇ ಹೋಲುತ್ತವೆ. ಬುಡಕಟ್ಟು ಜನರು ಮಹಿಳೆಯರು ದಲಿತರು ಮತ್ತು ತುಳಿತಕ್ಕೊಳಗಾದ ವರ್ಗದವರು ಯುವಕರು ನಮ್ಮ ಅಭಿವೃದ್ಧಿ ನೀತಿಯ ಕೇಂದ್ರ ಬಿಂದುಗಳು. ಎಲ್ಲರ ಸಹಕಾರದೊಂದಿಗೆ ಮುಂದುವರಿಯಲು ಇಷ್ಟಪಡುತ್ತೇವೆಯೇ ಹೊರತು ಒತ್ತಾಯದಿಂದಲ್ಲ’ ಎಂದರು.

ಪ್ರಧಾನಿ ಮೋದಿ ಅವರು ರಾಮ ಮಂದಿರದವರೆಗೆ ರೋಡ್ ಶೋ ಕೈಗೊಂಡರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಪ್ರಧಾನಿ ಮೋದಿ ಅವರ ಮೇಲೆ ಹೂವಿನ ಮಳೆಗರೆದರು. ರೋಡ್ ಶೋ ಉದ್ದಕ್ಕೂ ರಾಮ ಭಜನೆಯು ಮೊಳಗುತ್ತಲೇ ಇತ್ತು

ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಿಂದ ಬುಡಕಟ್ಟು ಜನರನ್ನು ಅರಣ್ಯವಾಸಿಗಳನ್ನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಜೊತೆಗೆ ಬಾಬರಿ ಮಸೀದಿ ಪ್ರಕರಣದ ಅರ್ಜಿದಾರ ಹಾಶಿಮ್ ಅನ್ಸಾರಿ ಅವರ ಮಗ ಇಕ್ಬಾಲ್ ಅನ್ಸಾರಿ ಅವರನ್ನೂ ಆಹ್ವಾನಿಸಲಾಗಿತ್ತು

ನಾನು ದಲಿತ ಎಂದು ಆಹ್ವಾನಿಸಲಿಲ್ಲ: ಸಂಸದ

‘ನಾನು ದಲಿತ ಎನ್ನುವ ಕಾರಣಕ್ಕೆ ನನ್ನನ್ನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ’ ಎಂದು ಫೈಜಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಮಂಗಳವಾರ ಆರೋಪಿಸಿದ್ದಾರೆ. ‘ಇದೊಂದು ರಾಜಕೀಯ ಪ್ರೇರಿತ ಆರೋಪ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ‘ಕಾರ್ಯಕ್ರಮಕ್ಕೆ ಪ್ರಧಾನಿ ಅವರು ಬರುತ್ತಾರೆ. ಆದರೆ ಸ್ಥಳೀಯ ಸಂಸದನನ್ನು ಆಹ್ವಾನಿಸುವುದಿಲ್ಲ. ಇದು ದುರದೃಷ್ಟಕರ. ರಾಮನು ಎಲ್ಲರಿಗೂ ಸೇರಿದವನು. ಇದು ಆಹ್ವಾನ ಬರಲಿಲ್ಲ ಎನ್ನುವುದಕ್ಕೆ ನಡೆಸುತ್ತಿರುವ ಹೋರಾಟವಲ್ಲ. ಇದು ಗೌರವ ಸಮಾನತೆ ಮತ್ತು ಸಂವಿಧಾನಕ್ಕಾಗಿ ನಡೆಸುತ್ತಿರುವ ಹೋರಾಟ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ. ‘ಅವರಿಗೆ (ಅವಧೇಶ್ ಪ್ರಸಾದ್) ರಾಮನ ಮೇಲೆ ನಿಜ ಭಕ್ತಿ ಇದ್ದಿದ್ದರೆ ಅವರು ಭಕ್ತರೊಂದಿಗೆ ಸೇರಿಕೊಳ್ಳಬಹುದಿತ್ತು. ರಾಮ ಮಂದಿರದ ಕುರಿತು ಸಮಾಜವಾದಿ ಪಕ್ಷಕ್ಕೆ ಯಾವ ಅಭಿಪ್ರಾಯ ಇತ್ತು ಎಂದು ಎಲ್ಲರಿಗೂ ತಿಳಿದಿದೆ’ ಎಂದು ಬಿಜೆಪಿ ಹೇಳಿದೆ.
.ರಾಮ ಮಂದಿರ ಧ್ವಜಾರೋಹಣ ಸಮಾರಂಭ: ರಾಮ ಮಂದಿರ ಸಂಕೀರ್ಣದಲ್ಲಿ ಮೋದಿ ರೋಡ್ ಶೋ.ಅಯೋಧ್ಯೆ | ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ₹3 ಸಾವಿರ ಕೋಟಿ ದೇಣಿಗೆ.ಅಯೋಧ್ಯೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.