ಪ್ರಯಾಗ್ರಾಜ್: ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಸಾಧ್ಯವಾಗದವರಿಗೆ ಅವರ ಮನೆ ಬಾಗಿಲಿಗೆ ಸಂಗಮದ ಜಲ ವಿತರಿಸಲು ಉತ್ತರ ಪ್ರದೇಶದ ಸರ್ಕಾರ ಮುಂದಾಗಿದೆ.

ರಾಜ್ಯದ 75 ಜಿಲ್ಲೆಗಳ ಜನರಿಗೆ ಈ ಸಂಗಮದ ನೀರನ್ನು ವಿತರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತುರ್ತು ಸೇವೆ ಮತ್ತು ಅಗ್ನಿಶಾಮಕ ಇಲಾಖೆಗೆ ಸೂಚಿಸಿದ್ದಾರೆ.
.ಮಹಾ ಕುಂಭಮೇಳ ಕಾಲ್ತುಳಿತ: ನ್ಯಾಯಾಂಗ ಆಯೋಗದ ಅಧಿಕಾರ ವ್ಯಾಪ್ತಿ ವಿಸ್ತರಣೆ.ಮಹಾ ಕುಂಭಮೇಳ: ಸಂಗಮದಲ್ಲಿ ಮಿಂದೆದ್ದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ದಂಪತಿ.
ಸಂಗಮದಲ್ಲಿ ಸ್ನಾನ ಮಾಡಲು ಆಗದ ಜನರ ಮನೆ ಬಾಗಿಲಿಗೆ ಸಂಗಮದ ಜಲವನ್ನು ವಿತರಿಸಲಾಗವುದು ಎಂದು ಈ ಹಿಂದೆ ಆದಿತ್ಯನಾಥ್ ಜನರಿಗೆ ಭರವಸೆ ನೀಡಿದ್ದರು.

ಈ ಪ್ರಕ್ರಿಯೆಯು ಇಂದಿನಿಂದ (ಶುಕ್ರವಾರ) ಪ್ರಾರಂಭವಾಗಲಿದ್ದು, ಜನರು ತಮ್ಮ ಮನೆಗಳಲ್ಲಿಯೇ ಗಂಗಾ ಜಲ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

12 ವರ್ಷಗಳ ನಂತರ ನಡೆದ ಮಹಾ ಕುಂಭಮೇಳವು ಜನವರಿ 13 ರಿಂದ ಫೆಬ್ರುವರಿ 26 ರವರೆಗೆ ನಡೆದಿದೆ. ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳಕ್ಕೆ ದೇಶ ಮತ್ತು ವಿದೇಶಗಳಿಂದ ಸುಮಾರು 66 ಕೋಟಿಗೂ ಹೆಚ್ಚು ಜನರು ಆಗಮಿಸಿದ್ದರು ಎಂದು ಸರ್ಕಾರ ತಿಳಿಸಿದೆ.
.ಮಹಾ ಕುಂಭಮೇಳ: ಕಾಣೆಯಾದ ತಮ್ಮವರಿಗಾಗಿ ನಿಲ್ಲದ ಹುಡುಕಾಟ.ಮಹಾ ಕುಂಭಮೇಳ ಕಾಲ್ತುಳಿತ: 3 ಕಿ.ಮೀ ದೂರದಲ್ಲಿ ಮತ್ತೊಂದು ಕಾಲ್ತುಳಿತ; 7 ಸಾವು.ಮಹಾ ಕುಂಭಮೇಳ: ಆಹಾರದಲ್ಲಿ ಬೂದಿ ಬೆರೆಸಿದ ಪೊಲೀಸ್ ಅಧಿಕಾರಿ ಅಮಾನತು .ಮಹಾ ಕುಂಭಮೇಳ ಕಾಲ್ತುಳಿತ | ಶವಾಗಾರದಲ್ಲಿ ಸುಮಾರು 40 ಮೃತದೇಹಗಳು: ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.