ಅಹಮದಾಬಾದ್: ಮೊರ್ಬಿ ತೂಗು ಸೇತುವೆ ಕುಸಿತ ಅವಘಡದ ಆರೋಪಿ, ಗಡಿಯಾರ ತಯಾರಿಕೆ ಕಂಪನಿ ಒರೆವಾ ಸಮೂಹದ ಮಾಲೀಕ ಜಯ್ಸುಖ್ ಪಟೇಲ್ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ.

10 ಮಂದಿ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು, ಪಟೇಲ್ರನ್ನು ಮುಖ್ಯ ಆರೋಪಿಯಾಗಿ ಹೆಸರಿಸಲಾಗಿದೆ. ಅಕ್ಟೋಬರ್ 30ರಂದು ನಡೆದಿದ್ದ ಅವಘಡದಲ್ಲಿ 135 ಜನ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದರು.

ತೂಗು ಸೇತುವೆ ನಿರ್ವಹಣೆಯಲ್ಲಿ ಅಗತ್ಯ ಕ್ರಮವಹಿಸದೇ ನಿರ್ಲಕ್ಷ್ಯವಹಿಸಿದ ಆರೋಪವಿದೆ ಎಂದು ಮೊರ್ಬಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ತ್ರಿಪಾಠಿ ತಿಳಿಸಿದ್ದಾರೆ.

ಒಟ್ಟು 1,200 ಪುಟಗಳ ಆರೋಪ ಪಟ್ಟಿಯಲ್ಲಿ ಮೃತರ ವಿವರಗಳು, ವಿಶೇಷ ತನಿಖಾ ತಂಡದ ವರದಿಗಳು ಇವೆ. ಜಯ್ಸುಖ್ ಪಟೇಲ್ ಪ್ರಕರಣದ ಪ್ರಮುಖ ಆರೋಪಿ. ಆದರೆ, ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಅವರು ಒಮ್ಮೆಯೂ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.