ನವದೆಹಲಿ: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಭಾರತ ಮತ್ತು ಅಮೆರಿಕ ಸಹಿ ಹಾಕುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದರು.

ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಭಾರತವು ಅಮೆರಿಕದಿಂದ ಆಮದಾಗುವ ಕೆಲವು ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಿದೆ.

ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಸಂಬಂಧಿಸಿದ ಜಂಟಿ ಹೇಳಿಕೆಯನ್ನು ಅಂತಿಮಗೊಳಿಸುವ ಕೆಲಸ, ಅದಕ್ಕೆ ಸಹಿ ಹಾಕುವ ಕೆಲಸ 4-5 ದಿನಗಳಲ್ಲಿ ಆಗುವ ನಿರೀಕ್ಷೆ ಇದೆ. ಇದರ ಬಳಿಕ ಅಮೆರಿಕ ವಿಧಿಸುವ ಸುಂಕಗಳು ಶೇ 18ಕ್ಕೆ ಇಳಿಯುತ್ತವೆ ಎಂದು ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಉಭಯ ರಾಷ್ಟ್ರಗಳು ಒಪ್ಪಂದವನ್ನು ಅಂತಿಮಗೊಳಿಸಿವೆ. ಭಾರತದಿಂದ ಅಮೆರಿಕ ಪ್ರವೇಶಿಸುವ ಸರಕುಗಳ ಮೇಲೆ ಈಗ ಶೇ 50ರಷ್ಟು ಸುಂಕ ಇದೆ. ಈ ಪೈಕಿ ಶೇ 25ರಷ್ಟನ್ನು ಪ್ರತಿಸುಂಕದ ರೂಪದಲ್ಲಿ ಮತ್ತು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವದಕ್ಕೆ ಶೇ 25ರಷ್ಟು ಹೆಚ್ಚುವರಿ ಸುಂಕವನ್ನು ಅಮೆರಿಕ ವಿಧಿಸುತ್ತಿದೆ.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತವು ಈಗಾಗಲೇ ಸಿದ್ಧವಾಗಿದೆ. ಇದು ಮುಂದಿನ 4–5 ದಿನಗಳಲ್ಲಿ ಅಂತಿಮಗೊಂಡು ಮತ್ತು ಜಂಟಿ ಹೇಳಿಕೆಗೆ ಸಹಿ ಆಗಲಿದೆ. ಇದರ ಆಧಾರದ ಮೇಲೆ ಪಾಲುದಾರಿಕೆಯ ಮೊದಲ ಹಂತವು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಒಪ್ಪಂದದ ಅಧಿಕೃತ ಕಡತವನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಒಂದು ಅಥವಾ ಒಂದೂವರೆ ತಿಂಗಳು ಸಮಯ ಬೇಕಾಗಬಹುದು. ಮಾರ್ಚ್ ಮಧ್ಯದ ವೇಳೆಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಜಂಟಿ ಹೇಳಿಕೆಗೆ ಸಹಿ ಹಾಕಿದ ಒಂದೆರೆಡು ದಿನದ ಬಳಿಕ, ಭಾರತದ ಸರಕುಗಳ ಮೇಲೆ ಸುಂಕವನ್ನು ಶೇ 18ಕ್ಕೆ ಇಳಿಸುವ ಕಾರ್ಯಕಾರಿ ಆದೇಶವನ್ನು ಅಮೆರಿಕ ಜಾರಿ ಮಾಡಲಿದೆ. ಈ ಒಪ್ಪಂದದ ಭಾಗವಾಗಿ ಹೂಡಿಕೆ ಮಾಡುವ ಭರವಸೆಯನ್ನು ನೀಡಿಲ್ಲ ಎಂದು ಗೋಯಲ್ ತಿಳಿಸಿದ್ದಾರೆ.

ಈ ಜಂಟಿ ಹೇಳಿಕೆಗೆ ಸಹಿ ಹಾಕುವ ಪ್ರಕ್ರಿಯೆ ವರ್ಚ್ಯುವಲ್ ವೇದಿಕೆಯ ಮೂಲಕ ನಡೆಯಲಿದೆ.

ಜಿಸಿಸಿ ದೇಶಗಳ ಜೊತೆ ಮಾತುಕತೆಗೆ ಒಪ್ಪಿಗೆ

ಮುಕ್ತ ವ್ಯಾಪಾಕ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ ಆರಂಭಿಸುವುದಕ್ಕೆ ಬೇಕಿರುವ ನಿಬಂಧನೆಗಳನ್ನು ಭಾರತ ಮತ್ತು ಕೊಲ್ಲಿ ಸಹಕಾರ ಮಂಡಳಿಯ (ಜಿಸಿಸಿ) ಸದಸ್ಯ ರಾಷ್ಟ್ರಗಳು ಅಂತಿಮಗೊಳಿಸಿವೆ.

ಈ ನಿಬಂಧನೆಗಳು ಪ್ರಸ್ತಾವಿತ ವ್ಯಾಪಾರ ಒಪ್ಪಂದದ ವ್ಯಾಪ್ತಿಯನ್ನು ವಿವರಿಸುತ್ತವೆ. ನಿಬಂಧನೆಗಳಿಗೆ ಸಹಿ ಹಾಕುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಪೀಯೂಷ್ ಗೋಯಲ್ ವಹಿಸಿದ್ದರು.

ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಒಮಾನ್ ಮತ್ತು ಬಹರೇನ್ ಜಿಸಿಸಿ ಸದಸ್ಯ ರಾಷ್ಟ್ರಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.