ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹಗರಣ: ತೇಜಸ್ವಿ ಯಾದವ್, ಲಾಲು ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

Published 3 ಜುಲೈ 2023, 23:08 IST
Last Updated 3 ಜುಲೈ 2023, 23:08 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಅವರ ತಂದೆ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್‌, ತಾಯಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ವಿರುದ್ಧ ದಾಖಲಾಗಿರುವ ಉದ್ಯೋಗಕ್ಕಾಗಿ ಭೂ ಹಗರಣ (ಲ್ಯಾಂಡ್‌ ಫಾರ್‌ ಜಾಬ್‌) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎರಡನೇ ಚಾರ್ಜ್‌ಶೀಟ್‌ ಸಲ್ಲಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಚಾರ್ಜ್‌ಶೀಟ್‌ನಲ್ಲಿ ಒಟ್ಟು 14 ಜನರನ್ನು ಹೆಸರಿಸಲಾಗಿದೆ. ಮೊದಲ ಚಾರ್ಜ್‌ಶೀಟ್‌ ಸಲ್ಲಿಸಿದ ಬಳಿಕ ಸಂಗ್ರಹಿಸಲಾದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಆಧರಿಸಿ ಎರಡನೇ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಲಾಲು ಕುಟುಂಬದವರೇ ಅಲ್ಲದೆ, ‘ಎಕೆ ಇನ್ಫೋಸಿಸ್ಟಮ್ಸ್‌’ ಮತ್ತು ಕೆಲವು ಮಧ್ಯವರ್ತಿಗಳ ಹೆಸರನ್ನೂ ಉಲ್ಲೇಖಿಸಿರುವ ಸಿಬಿಐ, ಚಾರ್ಜ್‌ಶೀಟ್‌ ಅನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಲಾಲು ಪ್ರಸಾದ್‌ ಅವರು ರೈಲ್ವೆ ಸಚಿವರಾಗಿದ್ದ 2004–2009ರ ಅವಧಿಯಲ್ಲಿ, ರೈಲ್ವೆಯಲ್ಲಿ ಅವರಿಗೆ ನೆಚ್ಚಿನ ಅಭ್ಯರ್ಥಿಗಳ ನೇಮಕವಾಗಿದೆ. ಜಾಹೀರಾತು ನೀಡದೆ ಅಥವಾ ಸಾರ್ವಜನಿಕರ ಗಮನಕ್ಕೂ ತಾರದೆ ಈ ನೇಮಕಾತಿಗಳು ನಡೆದಿವೆ. ಈ ವೇಳೆ ನಿಯಮಾವಳಿ ಮತ್ತು ಕಾರ್ಯ ವಿಧಾನಗಳ ಉಲ್ಲಂಘನೆಯಾಗಿವೆ ಎಂದು ಸಿಬಿಐ ಆರೋಪಿಸಿದೆ.

ಈ ಅವಧಿಯಲ್ಲಿ ಮುಂಬೈ, ಜಬಲ್‌ಪುರ, ಕೋಲ್ಕತ್ತ, ಜೈಪುರ, ಹಾಜಿಪುರದ ರೈಲ್ವೆ ವಲಯಗಳಲ್ಲಿ ಪಟ್ನಾದವರೇ ಹೆಚ್ಚಾಗಿ ನೇಮಕವಾಗಿದ್ದಾರೆ ಎಂದು ಸಿಬಿಐ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT