ಬೀಜಾಪುರ: ನಕ್ಸಲರು ಇಟ್ಟಿದ್ದ ಕಚ್ಚಾಬಾಂಬ್ ಸ್ಫೋಟಗೊಂಡು ಛತ್ತೀಸಗಢ ಪೊಲೀಸ್ನ ಜಿಲ್ಲಾ ಮೀಸಲು ಪಡೆಯ (ಡಿಆರ್ಜಿ) ಯೋಧರೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಮೂವರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿನೇಶ್ ನಾಗ್ ಡಿಎಆರ್ಜಿಯ ಮೃತ ಯೋಧ. ಡಿಆರ್ಜಿ ತಂಡವು ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತೆರಳಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡ ಇತರ ಮೂವರು ಸಿಬ್ಬಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಅವರನ್ನು ಅರಣ್ಯದಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
.ಆಂಧ್ರಪ್ರದೇಶ: ₹25 ಲಕ್ಷ ಇನಾಮು ಘೊಷಣೆಯಾಗಿದ್ದ ನಕ್ಸಲ್ ದಂಪತಿ ಶರಣು.ಚಂದ್ರಬಾಬು ನಾಯ್ಡು ಮೇಲೆ ದಾಳಿ ಮಾಡಿದ್ದ ನಕ್ಸಲ್ ಚಲಪತಿ ಪತ್ನಿ ಅರುಣಾ.ಮಹಾರಾಷ್ಟ್ರ: ಗಡ್ಚಿರೋಲಿಯ ನಕ್ಸಲ್ ಪೀಡಿತ ಗ್ರಾಮಕ್ಕೆ ಮೊದಲ ಬಾರಿ ಬಸ್ ಸಂಚಾರ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.