ದೇಶದ ಹಲವು ನಗರಗಳಲ್ಲಿನ ವಿಮಾನ ನಿಲ್ದಾಣಗಳಲ್ಲಿ ಇಂಡಿಗೊ ಸಂಸ್ಥೆಯ ವಿಮಾನಗಳ ವ್ಯತ್ಯಯದಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದಿನವೀಡಿ ಅಲ್ಲಿಯೇ ಕಾದು ಕುಳಿತಿದ್ದಾರೆ. ಹಲವರು ವಿಮಾನ ನಿಲ್ದಾಣದ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ.
ADVERTISEMENT
ಈ ಭಾರಿ ಸಮಸ್ಯೆಯಿಂಂದ ತೀವ್ರ ತೊಂದರೆಗೆ ಸಿಲುಕಿರುವ ಇಂಡಿಗೊ, ಇಂದು ರಾತ್ರಿ 12 ಗಂಟೆಯವರೆಗೂ 400 ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ರದ್ದು ಮಾಡಿದೆ. 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ.
ಅದಾಗ್ಯೂ ಹಲವು ಪ್ರಯಾಣಿಕರು ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಲ್ಲಿಯೇ ದೂರದ ಸ್ಥಳಗಳಿಗೆ ತೆರಳಲು ಕಾಯ್ದ ಕುಳಿತಿದಿದ್ದಾರೆ. ಕೆಲವರು ಟರ್ಮಿನಲ್‌ಗಳಲ್ಲೇ ಮಲಗಿರುವ, ಊಟ, ತಿಂಡಿ ಸೇವಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
ನಿನ್ನೆ ಆರಂಭವಾದ ಈ ಸಮಸ್ಯೆಯಿಂದ ಕೆಲವರು 12 ಗಂಟೆ ಕಾಯಬೇಕಾಗಬಹದು ಎಂದುಕೊಂಡರು. ಆದರೆ, 24 ಗಂಟೆಗಳೂ ಮೀರಿ ಇದೀಗ 48 ಗಂಟೆಗಳ ಕಾಯುವಿಕೆ ಮೊರೆ ಹೋಗಿದ್ದಾರೆ. ಹಲವರು ವಿಮಾನ ಪ್ರಯಾಣ ರದ್ದು ಮಾಡಿ ಮನೆಗೆ ತೆರಳಿದ್ದರೆ, ಇನ್ನೂ ಕೆಲವರು ವಿಮಾನ ನಿಲ್ದಾಣಗಳಲ್ಲಿಯೇ ಕಾಯುತ್ತಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದ 102 ಇಂಡಿಗೊ ವಿಮಾನಗಳು ರದ್ದಾಗಿವೆ. ಇಲ್ಲಿಯೂ ಸಹ ಅನೇಕ ಪ್ರಯಾಣಿಕರು ಇಂಡಿಗೊ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿರುವ ವಿಡಿಯೊಗಳು ಬಂದಿವೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದ 102 ಇಂಡಿಗೊ ವಿಮಾನಗಳು ರದ್ದಾಗಿವೆ. ಇಲ್ಲಿಯೂ ಸಹ ಅನೇಕ ಪ್ರಯಾಣಿಕರು ಇಂಡಿಗೊ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿರುವ ವಿಡಿಯೊಗಳು ಬಂದಿವೆ.
ಇಂಡಿಗೊದಲ್ಲಿ ಆಗಿರುವ ಹೊಸ ಬೆಳವಣಿಗೆಯ ಸಮಸ್ಯೆಯಿಂದ ಒಟ್ಟಾರೆ ಈ ವಾರದಲ್ಲಿ 1000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದವು. ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ ವಿಮಾನ ನಿಲ್ದಾಣಗಳಿಂದ ಹೆಚ್ಚು ವಿಮಾನಗಳು ರದ್ದಾಗಿವೆ.