ಪಟ್ನಾ: ಜನ ಸುರಾಜ್ ಪಕ್ಷದ (JSP) ಮೂಲಕ ಪ್ರಶಾಂತ್ ಕಿಶೋರ್ ಅವರ ರಾಜಕೀಯ ಪ್ರವೇಶ ಬಿಹಾರ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಜೆಎಸ್ಪಿ ಹೋರಾಟ ಮಂಕಾಗಿದೆ.

ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ಜೆಎಸ್ಪಿ ವಿಫಲವಾಗಿದ್ದು, ಸ್ಥಾಪಿತ ರಾಜಕೀಯ ಬಲಿಷ್ಠರ ಪ್ರಾಬಲ್ಯದಲ್ಲಿ ಜೆಎಸ್ಪಿ ಕೊಚ್ಚಿ ಹೋಗಿದೆ.

ಜನ ಸುರಾಜ್ ಪಕ್ಷ 238 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಸಮೀಕ್ಷೆಗಳು ಕೂಡ ಜೆಎಸ್ಪಿ ಒಂದೂ ಕ್ಷೇತ್ರವನ್ನು ಗೆಲ್ಲುವುದಿಲ್ಲ ಎಂದು ಹೇಳಿದ್ದವು.

ಪ್ರಶಾಂತ್ ಕಿಶೋರ್ ಅವರು ಪಾದಯಾತ್ರೆ ಮೂಲಕ ಯುವ ಜನರನ್ನು ತಮ್ಮ ಕಡೆ ಸೆಳೆದಿದ್ದರು. ಆದರೆ ಯುವ ಸಮುದಾಯ ಕೂಡ ಪ್ರಶಾಂತ್ ಕಿಶೋರ್ ಕೈ ಹಿಡಿಯಲಿಲ್ಲ.

ವಲಸೆ, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ವಿಷಯಗಳ ಮೇಲೆ ಪ್ರಶಾಂತ್ ಕಿಶೋರ್ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದ್ದರು. ಆದರೆ ಅವರ ಯಾವ ಪ್ರಯತ್ನವೂ ಈ ಚುನಾವಣೆಯಲ್ಲಿ ಸಫಲವಾಗಲಿಲ್ಲ.
.Bihar Election Results 2025 LIVE: ಭಾರಿ ಜಯದತ್ತ ಎನ್ಡಿಎ; ಬಿಜೆಪಿ ಅತಿ ದೊಡ್ಡ ಪಕ್ಷ.Bihar Election Results | ಮತ್ತೆ ಎನ್ಡಿಎ ಬಿ‘ಹಾರ‘? ಮತ ಎಣಿಕೆಯ ಪ್ರಮುಖಾಂಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.