ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಮತ ಎಣಿಕೆಯ ಪ್ರಮುಖ ಅಂಶಗಳು ಇಲ್ಲಿವೆ.

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಆರಂಭವಾಗಿದೆ. ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಳೆದ 20 ವರ್ಷದಿಂದ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿದ್ದಾರೆ.

ಸದ್ಯ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಅವರು, ಈ ಹಿಂದೆ ಆರ್ಜೆಡಿ, ಕಾಂಗ್ರೆಸ್ನೊಂದಿಗೂ ಮೈತ್ರಿ ಮಾಡಿಕೊಂಡಿದ್ದರು. ಮೈತ್ರಿ ಬದಲಾಯಿಸಿದರೂ, ನಿತೀಶ್ ಬಗ್ಗೆ ರಾಜ್ಯದ ಜನರ ಒಲವು ಕಡಿಮೆಯಾಗಿಲ್ಲ.

166 ಕ್ಷೇತ್ರಗಳಲ್ಲಿ ಎನ್ಡಿಎ ಮುನ್ನಡೆ: ಚುನಾವಣಾ ಆಯೋಗ

ಬಿಜೆಪಿ 72, ಜೆಡಿ(ಯು) 71 ಸೇರಿದಂತೆ ಎನ್ಡಿಎ 166 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮತ್ತೊಂದೆಡೆ ಆರ್ಜೆಡಿ 42, ಕಾಂಗ್ರೆಸ್ 8 ಸೇರಿದಂತೆ ಇಂಡಿಯಾ ಮೈತ್ರಿಯು 56 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಎನ್ಡಿಎಗೆ ಮುನ್ನಡೆ, ಮಹಾಘಟಬಂಧನಗೆ ಹಿನ್ನಡೆ...

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಮೈತ್ರಿಕೂಟವು ಈಗಿನ ಟ್ರೆಂಡ್ ಪ್ರಕಾರ 160 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಆ ಮೂಲಕ ಮ್ಯಾಜಿಕ್ ಸಂಖ್ಯೆ ಆದ 122 ಅನ್ನು ದಾಟಿ ಬಹುಮತ ಗಳಿಸುವುದು ನಿಚ್ಚಳವೆನಿಸಿದೆ.

ಮತ್ತೊಂದೆಡೆ ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ ಮೈತ್ರಿಯು ಹಿನ್ನಡೆಯಲ್ಲಿದ್ದು, 79 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ಎರಡು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

*ಚುನಾವಣಾ ಆಯೋಗದ ಈಗಿನ (ಬೆಳಿಗ್ಗೆ 10 ಗಂಟೆ) ಮಾಹಿತಿ ಪ್ರಕಾರ, ಎನ್ಡಿಎ 102 ಹಾಗೂ ಇಂಡಿಯಾ ಮೈತ್ರಿ 33 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಆರಂಭಿಕ ಹಂತದಲ್ಲಿ ಎನ್ಡಿಎಗೆ ಮುನ್ನಡೆ

ಆರಂಭಿಕ ಹಂತದ ಮತ ಎಣಿಕೆ ವೇಳೆ ಎನ್ಡಿಎ ಮುನ್ನಡೆ ಸಾಧಿಸಿದೆ. ಅಂಚೆ ಮತಗಳ ಎಣಿಕೆಯಲ್ಲಿ ಎನ್ಡಿಎ ಮುನ್ನಡೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.