ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕುರಿತ ಸಾಕ್ಷ್ಯಚಿತ್ರದ ಟ್ವೀಟ್ ಅಳಿಸಿದ ಟ್ಟಿಟ್ಟರ್– ಸಂಸದ ಡೆರೆಕ್ ಆರೋಪ

Last Updated 21 ಜನವರಿ 2023, 13:08 IST
ಅಕ್ಷರ ಗಾತ್ರ

ನವದೆಹಲಿ: ‘ಅಲ್ಪಸಂಖ್ಯಾತರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಬಹಿರಂಗಗೊಳಿಸಿದ ಸಾಕ್ಷ್ಯಚಿತ್ರ’ ಎಂದು ಬಿಬಿಸಿ ಸಾಕ್ಷ್ಯಚಿತ್ರ ಕುರಿತು ತಾವು ಮಾಡಿದ್ದ ಟ್ವೀಟ್ ಅನ್ನು ಟ್ವಿಟ್ಟರ್ ಅಳಿಸಿಹಾಕಿದೆ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಂಸದ ಡೆರೆಕ್‌ ಒಬ್ರಿಯಾನ್‌ ಆರೋಪಿಸಿದ್ದಾರೆ.

‘ಭಾರತದ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಅದನ್ನು ಅಳಿಸಿ ಹಾಕಲಾಗಿದೆ’ ಎಂದು ತಾವು ಟ್ವೀಟ್ ಮಾಡಿದ್ದ ಮೈಕ್ರೊಬ್ಲಾಗಿಂಗ್ ಸೈಟ್‌ ಇ–ಮೇಲ್‌ ಮೂಲಕ ತಮಗೆ ತಿಳಿಸಿದೆ ಎಂದು ಒಬ್ರಿಯಾನ್ ತಿಳಿಸಿದ್ದಾರೆ. ಇದರ ಜತೆಗೆ ಅವರು ಟ್ವಿಟ್ಟರ್‌ನ ಇ–ಮೇಲ್ ಅನ್ನೂ ಟ್ವಿಟ್ಟರ್‌ನಲ್ಲಿಯೇ ಪೋಸ್ಟ್ ಮಾಡಿದ್ದಾರೆ.

‘ಸೆನ್ಸಾರ್‌ಶಿಪ್, ಟ್ಟಿಟ್ಟರ್ ಇಂಡಿಯಾವು ಬಿಬಿಸಿ ಸಾಕ್ಷ್ಯಚಿತ್ರ ಕುರಿತ ನನ್ನ ಟ್ವೀಟ್ ಅನ್ನು ಅಳಿಸಿದೆ. ಪ್ರಧಾನಿ ಮೋದಿ ಅವರು ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಾರೆ ಎನ್ನುವುದನ್ನು ಬಹಿರಂಗಗೊಳಿಸಿದ್ದ ಈ ಒಂದು ಗಂಟೆಯ ಅವಧಿಯ ಸಾಕ್ಷ್ಯಚಿತ್ರದ ಕುರಿತ ಟ್ವೀಟ್ ಅನ್ನು ಲಕ್ಷಾಂತರ ಜನರು ನೋಡಿದ್ದರು’ ಎಂದೂ ಅವರು ಹೇಳಿದ್ದಾರೆ.

‘ಟ್ವಿಟ್ಟರ್ ನೀಡಿರುವ ದುರ್ಬಲ ಕಾರಣವನ್ನು ನೋಡಿ. ಪ್ರತಿಪಕ್ಷಗಳು ತಮ್ಮ ಹೋರಾಟವನ್ನು ಮುಂದುವರಿಸುತ್ತವೆ’ ಎಂದೂ ಡೆರೆಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT