ರಾಜಮಂಡ್ರಿ (ಪಿಟಿಐ): ಆಂಧ್ರಪ್ರದೇಶದ ಗೋಧಾವರಿ ನದಿ ತೀರದ ಪುಷ್ಕರ್ ಘಾಟ್ನಲ್ಲಿ ಮಂಗಳವಾರ ಬೆಳಿಗ್ಗೆ ‘ಪುಷ್ಕರಂ’ ಉತ್ಸವದ (ದಕ್ಷಿಣ ಭಾರತದ ಕುಂಭಮೇಳ) ಅಂಗವಾಗಿ ಪುಣ್ಯ ಸ್ನಾನಕ್ಕಾಗಿ ಜನರು ಸಾಲುಗಟ್ಟಿ ನಿಂತಿದ್ದಾಗ ಕಾಲ್ತುಳಿತ ಉಂಟಾಗಿ 13 ಮಹಿಳೆಯರು ಸೇರಿದಂತೆ ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆ ‘ಪುಷ್ಕರಂ’ಉತ್ಸವಕ್ಕೆ ಚಾಲನೆ ಲಭಿಸಿತ್ತು. ಮೊದಲ ದಿನ ದೇವರ ದರ್ಶನಕ್ಕೆ ಹೆಚ್ಚು ಜನ ಸೇರಿದ್ದರು. ನದಿಯಲ್ಲಿ ಪುಣ್ಯಸ್ನಾನಕ್ಕಾಗಿ ಜನರು ಸಾಲುಗಟ್ಟಿ ನಿಂತಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ 13 ಮಹಿಳೆಯರು ಸೇರಿದಂತೆ 27 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ ಎಂದು ಪೂರ್ವ ಗೋಧಾವರಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕುಲಶೇಖರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು. ಈ ಉತ್ಸವ 144 ವರ್ಷಗಳಿಗೊಮ್ಮೆ ನಡೆಯುವುದರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು ಎಂದು ಅವರು ಹೇಳಿದ್ದಾರೆ. 12 ದಿನಗಳ ಈ ಉತ್ಸವ ದಕ್ಷಿಣ ಭಾರತದ ಕುಂಭಮೇಳ ಎಂದೇ ಜನಪ್ರಿಯತೆ ಗಳಿಸಿದೆ.

ಪ್ರಧಾನಿ ಮೋದಿ ಸಂತಾಪ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.