ನವದೆಹಲಿ: ಇರಾನ್ನಲ್ಲಿ ಭಾರತ ಅಭಿವೃದ್ಧಿಪಡಿಸುತ್ತಿರುವ ಚಾಬಹಾರ್ ಬಂದರಿನ ಪ್ರಥಮ ಹಂತವು ಭಾನುವಾರ ಕಾರ್ಯಾರಂಭ ಮಾಡಿದೆ.

ಭಾರತ–ಇರಾನ್–ಅಫ್ಗಾನಿಸ್ತಾನ ವಾಣಿಜ್ಯ ಮಾರ್ಗದ ಪ್ರಮುಖ ಕೊಂಡಿಯಾಗಿರುವ ಈ ಬಂದರು ಮೂರೂ ದೇಶಗಳ ಮಧ್ಯೆ ವಾಣಿಜ್ಯ ವಹಿವಾಟನ್ನು ವೃದ್ಧಿಸಲಿದೆ. ಇದರ ಜತೆಯಲ್ಲೇ ಮಧ್ಯಪ್ರಾಚ್ಯ ದೇಶಗಳ ಜತೆ ಭಾರತದ ವಾಣಿಜ್ಯ ವಹಿವಾಟು ವೃದ್ಧಿಸಲು ಈ ಮಾರ್ಗ ನೆರವಾಗಲಿದೆ.

₹ 550 ಕೋಟಿ ವೆಚ್ಚದಲ್ಲಿ ಭಾರತವು ಈ ಬಂದರನ್ನು ಅಭಿವೃದ್ಧಿಪಡಿಸಿದೆ. ಇನ್ನೂ ಕೆಲವು ಕಾಮಗಾರಿಗಳು ಪೂರ್ಣವಾಗಬೇಕಿದ್ದು, 2018ರ ಅಂತ್ಯದ ವೇಳೆಗೆ ಬಂದರು ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಲಿದೆ. ಎರಡನೇ ಹಂತದ ಯೋಜನೆಯ ಭಾಗವಾಗಿ ಭಾರತವು ಬಂದರನ್ನು 10 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ. ನಿರ್ವಹಣೆಗೆ ₹ 148 ಕೋಟಿ ವಿನಿಯೋಗಿಸಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಮೂರೂ ದೇಶಗಳ ವಾಣಿಜ್ಯ ಮಾರ್ಗದ ಭಾಗವಾಗಿ ಅಫ್ಗಾನಿಸ್ತಾನದಲ್ಲಿ 218 ಕಿ.ಮೀ ಉದ್ದದ ದ್ವಿಪಥ ಹೆದ್ದಾರಿಯನ್ನು ಭಾರತವು ಈಗಾಗಲೇ ಅಭಿವೃದ್ಧಿಪಡಿಸಿದೆ. ಈ ಹೆದ್ದಾರಿಯ ಕಾಮಗಾರಿ 2005ರಲ್ಲೇ ಪ್ರಾರಂಭವಾಗಿತ್ತು. ಇರಾನ್ ಸಹ ತನ್ನ ನೆಲದಲ್ಲಿ 200 ಕಿ.ಮೀ ಉದ್ದದ ಹೆದ್ದಾರಿಯ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇನ್ನೂ 1,380 ಕಿ.ಮೀ ಉದ್ದದ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಚಾಬಹಾರ್ ಬಂದರು ಅಭಿವೃದ್ಧಿ ಮತ್ತು ಅಫ್ಗಾನಿಸ್ತಾನವು ಈ ಮಾರ್ಗದ ಮೂಲಕವೇ ಭಾರತದ ಜತೆ ವಾಣಿಜ್ಯ ವಹಿವಾಟು ನಡೆಸಬೇಕು ಎಂಬ ಒಪ್ಪಂದಕ್ಕೆ ಮೂರೂ ದೇಶಗಳು 2016ರಲ್ಲಿ ಸಹಿ ಹಾಕಿದ್ದವು.

ಪಾಕಿಸ್ತಾನಕ್ಕೆ ಸಡ್ಡು: ಈ ಬಂದರಿನಿಂದ ಕೇವಲ 130 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಗ್ವಾದರ್ನಲ್ಲಿ ಚೀನಾ ಬಂದರೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತ–ಅಫ್ಗಾನಿಸ್ತಾನಗಳು ತನ್ನ ನೆಲದ ಮೂಲಕ ಸರಕುಗಳ ಸಾಗಣೆ ನಡೆಸದಂತೆ ಪಾಕಿಸ್ತಾನವು ತಡೆಯೊಡ್ಡಿದೆ. ಈಗ ಈ ವಾಣಿಜ್ಯ ಮಾರ್ಗವು ಕಾರ್ಯಾರಂಭ ಮಾಡಿರುವುದರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಭಾರತವು ಸಡ್ಡು ಹೊಡೆದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.