ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿವಿಧ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ₹19.20 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ಈ ಪೈಕಿ ಸಹಕಾರಿ ಸಂಘವೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಆಸ್ತಿಯ ಮೌಲ್ಯವೇ ₹9.89 ಕೋಟಿಯಷ್ಟಾಗುತ್ತದೆ.

ವಿವಿಧ ಇಲಾಖೆಗಳ ನಾಲ್ವರು ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರು ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಜಿಲ್ಲೆಯ 17 ಸ್ಥಳಗಳಲ್ಲಿ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದರು.

ಉತ್ತರ ಕನ್ನಡಜಿಲ್ಲೆಯ ಸಿದ್ದಾಪುರ ಕೋಲ್ಸಿರ್ಸಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರುತಿ ಯಶ್ವಂತ್ ಮಾಳ್ವಿ ಅವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ₹9.17 ಕೋಟಿ ಮೌಲ್ಯದ 4 ವಾಸದ ಮನೆಗಳು, ಏಳು ನಿವೇಶನಗಳು ಮತ್ತು ಒಂದು ವಾಣಿಜ್ಯ ಸಂಕೀರ್ಣ, ₹2.02 ಲಕ್ಷ ನಗದು, ₹8.22 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹62 ಲಕ್ಷ ಮೌಲ್ಯದ ವಾಹನಗಳು ಪತ್ತೆಯಾಗಿವೆ. ಈ ಎಲ್ಲವುಗಳ ಆಸ್ತಿ ಮೌಲ್ಯವೇ ₹9.89 ಕೋಟಿಯಷ್ಟಾಗುತ್ತದೆ. ಆರೋಪಿ ಅಧಿಕಾರಿ ಮತ್ತು ಅವರ ಕುಟುಂಬದವರಿಗೆ ಸೇರಿದ ಬ್ಯಾಂಕ್ ಲಾಕರ್ ಮತ್ತು ಖಾತೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಉಳಿದ ಮೂವರು ಅಧಿಕಾರಿಗಳ ಒಟ್ಟು ಆಸ್ತಿ ಮೌಲ್ಯ ₹9.31 ಕೋಟಿಯಷ್ಟಾಗುತ್ತದೆ. ರಾಯಚೂರಿನ ಸಿಂಧನೂರು ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಡಿ.ವಿಜಯಲಕ್ಷ್ಮೀ ಅವರಿಗೆ ಸೇರಿದ 73 ಎಕರೆ 31 ಗುಂಟೆ ಕೃಷಿ ಜಮೀನು ಪತ್ತೆಯಾಗಿದೆ. ಈಚಿನ ವರ್ಷಗಳಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಬಳಿ ಪತ್ತೆಯಾದ ಅತ್ಯಂತ ದೊಡ್ಡ ಪ್ರಮಾಣದ ಕೃಷಿ ಜಮೀನು ಇದು.

ಅಪಾರ ಆಸ್ತಿ... ₹19.20 ಕೋಟಿದಾಳಿಯ ವೇಳೆ ಪತ್ತೆಯಾದ ಎಲ್ಲ ಅಧಿಕಾರಿಗಳ ಆಸ್ತಿಯ ಒಟ್ಟು ಮೌಲ್ಯ ₹16.33 ಕೋಟಿಸ್ಥಿರಾಸ್ತಿಗಳ ಮೌಲ್ಯ ₹19.05 ಲಕ್ಷನಗದು ₹1.37 ಕೋಟಿಚಿನ್ನಾಭರಣ ₹1.01 ಕೋಟಿವಾಹನಗಳು ₹29.61 ಲಕ್ಷಗೃಹೋಪಯೋಗಿ ವಸ್ತುಗಳು

ಯಾರ ಬಳಿ ಎಷ್ಟು ಆಸ್ತಿ...

ಶ್ಯಾಮಸುಂದರ್ ಮಾರುತಿ ಕಾಂಬ್ಳೆಸಹಾಯಕ ಕಾರ್ಯದರ್ಶಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ₹1.75 ಕೋಟಿ ಮೌಲ್ಯದ 15 ನಿವೇಶನ 3 ಮನೆ ₹28.83 ಲಕ್ಷ ಮೌಲ್ಯದ ನಗದು ಚಿನ್ನಾಭರಣ ಮತ್ತು ವಾಹನಗಳು ₹2.04 ಕೋಟಿ ಒಟ್ಟು ಮೌಲ್ಯ

ಮಲ್ಲಪ್ಪ ಹನಮಂತಪ್ಪ ಯರಜರಿಸಹಾಯಕ ನಿರ್ದೇಶಕ ಕೃಷಿ ಇಲಾಖೆ ಬಸವನ ಬಾಗೇವಾಡಿವಿಜಯಪುರ ₹1.71 ಕೋಟಿ ಮೌಲ್ಯದ 3 ನಿವೇಶನ2 ಮನೆ 20 ಎಕರೆ 3 ಗುಂಟೆ ಕೃಷಿ ಜಮೀನು ₹1.45 ಕೋಟಿ ಮೌಲ್ಯದ ಚಿನ್ನಾಭರಣ ವಾಹನಗಳು ಉಳಿತಾಯ ಠೇವಣಿಗಳು ಮತ್ತು ಗೃಹೋಪಯೋಗಿ ವಸ್ತು ₹3.17 ಕೋಟಿಒಟ್ಟು ಮೌಲ್ಯ

ಡಿ.ವಿಜಯಲಕ್ಷ್ಮೀಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ ಸಿಂಧನೂರು ರಾಯಚೂರು ₹3.68 ಕೋಟಿಮೌಲ್ಯದ 73 ಎಕರೆ 31 ಗುಂಟೆ ಕೃಷಿ ಜಮೀನು 12 ನಿವೇಶನ 2 ಮನೆ ₹40.82 ಲಕ್ಷಮೌಲ್ಯದ ಚಿನ್ನಾಭರಣ ವಾಹನಗಳು ಮತ್ತು ಉಳಿತಾಯ ಠೇವಣಿ ₹4.09 ಕೋಟಿಒಟ್ಟು ಮೌಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.