ಪನಾಮ: ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟ ಭಾರತೀಯರ ಮತ್ತೊಂದು ಗುಂಪು ಪನಾಮ ದೇಶದಲ್ಲಿ ಬಂದಿಳಿದಿದೆ. ಗಡೀಪಾರು ಮಾಡಲಾದ ಭಾರತೀಯರ ಗುಂಪಿನ ಸುರಕ್ಷಿತ ಆಗಮನದ ಬಗ್ಗೆ ಪನಾಮ, ಭಾರತಕ್ಕೆ ಮಾಹಿತಿ ನೀಡಿದೆ.

ಪನಾಮ ತಲುಪಿರುವ ಭಾರತೀಯರ ಕುರಿತಂತೆ ರಾಯಭಾರ ಕಚೇರಿಗೆ ಮಾಹಿತಿ ಸಿಕ್ಕಿದ್ದು, ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಆತಿಥೇಯ ಸರ್ಕಾರದೊಂದಿಗೆ ನಿಕಟವಾಗಿ ಭಾರತ ಕಾರ್ಯನಿರ್ವಹಿಸುತ್ತಿದೆ.

ಪನಾಮ, ಕೋಸ್ಟರಿಕಾ ಮತ್ತು ನಿಕರಾಗುವಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಗುರುವಾರ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ, ಪನಾಮಕ್ಕೆ ಆಗಮಿಸಿರುವ ಭಾರತೀಯರ ಸಂಖ್ಯೆ ಎಷ್ಟು ಎಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಅಮೆರಿಕವು ಪನಾಮಕ್ಕೆ ಕಳುಹಿಸಿರುವ 299 ಮಂದಿ ಅಕ್ರಮ ವಲಸಿಗರ ದೊಡ್ಡ ಗುಂಪಿನಲ್ಲಿ ಭಾರತೀಯರೂ ಇದ್ದಾರೆ.

ಗಡೀಪಾರು ಆದವರಿಗೆ ಪನಾಮ ದೇಶ ಸೇತುವೆಯಾಗಲಿದೆ ಎಂದು ಅಧ್ಯಕ್ಷ ಜೋಸ್ ರೌಲ್ ಮುಲಿನೊ ಹೇಳಿಕೆ ನೀಡಿದ್ದರು. ಅದಾದ ನಂತರ, ಕಳೆದ ವಾರ ಮೂರು ವಿಮಾನಗಳಲ್ಲಿ ಅಕ್ರಮ ವಲಸಿಗರು ಪನಾಮಕ್ಕೆ ತಲುಪಿದ್ದಾರೆ.

ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಲಕ್ಷಾಂತರ ಜನರ ಗಡೀಪಾರು ಮಾಡುವುದಾಗಿ ಟ್ರಂಪ್ ಆಡಳಿತ ಅಲ್ಲಿನ ಜನರಿಗೆ ವಾಗ್ದಾನ ಮಾಡಿದೆ.

ಅಮೆರಿಕದಿಂದ ಭಾರತೀಯರ ಗುಂಪು ಪನಾಮ ತಲುಪಿದೆ ಎಂದು ಪನಾಮ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ ಎಂಬುದಾಗಿ ಪನಾಮ, ನಿಕರಾಗುವಾ ಮತ್ತು ಕೋಸ್ಟರಿಕಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದೆ.

‘ಭಾರತೀಯರೆಲ್ಲರೂ ಹೋಟೆಲ್ನಲ್ಲಿ ಸುರಕ್ಷಿತವಾಗಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ನಾವು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಆತಿಥೇಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ರಾಯಭಾರ ಕಚೇರಿ ಹೇಳಿದೆ.

ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ಆಡಳಿತದ ಕಠಿಣ ಕ್ರಮದ ಮಧ್ಯೆ ಮೂರು ಬ್ಯಾಚ್ಗಳಲ್ಲಿ ಒಟ್ಟು 332 ಭಾರತೀಯರನ್ನು ಈಗಾಗಲೇ ಗಡೀಪಾರು ಮಾಡಿದೆ.

ಪನಾಮಕ್ಕೆ ಬಂದಿಳಿದಿರುವ ದಾಖಲೆರಹಿತ 299 ವಲಸಿಗರಲ್ಲಿ 171 ಮಂದಿ ಮಾತ್ರ ತಮ್ಮ ಮೂಲ ದೇಶಗಳಿಗೆ ಮರಳಲು ಒಪ್ಪಿಕೊಂಡಿದ್ದಾರೆ.

ತಮ್ಮ ದೇಶಗಳಿಗೆ ತೆರಳಲು ನಿರಾಕರಿಸಿದ 98 ಮಂದಿ ಅಕ್ರಮ ವಲಸಿಗರನ್ನು ಪನಾಮದ ಡೇರಿಯನ್ ಪ್ರಾಂತ್ಯದ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.