ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ: ಹ್ಯೂಸ್ಟನ್‌ ಭಾರತೀಯರಿಂದ ವಿಶಿಷ್ಟ ಪ್ರದರ್ಶನ

Published 20 ಜನವರಿ 2024, 16:33 IST
Last Updated 20 ಜನವರಿ 2024, 16:33 IST
ಅಕ್ಷರ ಗಾತ್ರ

ಹ್ಯೂಸ್ಟನ್‌ : ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು  ವಿನೂತನವಾಗಿ ಟೆಸ್ಲಾ ಕಾರ್‌ ಬೆಳಕಿನ ಪ್ರದರ್ಶನ ನಡೆಸಿದರು.

ಇಲ್ಲಿನ ಗುರುವಾಯೂರಪ್ಪನ್ ಕೃಷ್ಣ ದೇವಸ್ಥಾನದ ಬಳಿ ನೂರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಕಾರುಗಳ ದೀಪಗಳನ್ನು ಉರಿಸುವ ಮತ್ತು ನಂದಿಸುವ ಮೂಲಕ ಸುಂದರ ಬೆಳಕಿನ ಪ್ರದರ್ಶನ ನಡೆಸಿದರು.

ಕಾರ್‌ಗಳೊಂದಿಗೆ ರಾಮಮಂದಿರ ಚಿತ್ರವಿರುವ ರಾಮರಥವು ಇತ್ತು. ಬಳಿಕ ದೇವಳದಲ್ಲಿ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ ಇತರ ಭಕ್ತರು ರಾಮ ಮತ್ತು ಕೃಷ್ಣನ ಕುರಿತಾದ ಭಜನಾ ಸಂಕೀರ್ತನೆಗಳನ್ನು ಹಾಡಿದರು.

‘ಜನವರಿ ಮಧ್ಯದವರೆಗೆ ಅಮೆರಿಕದ 21 ರಾಜ್ಯ ಮತ್ತು 41 ನಗರಗಳಲ್ಲಿ ವಿಶ್ವ ಹಿಂದೂ ಪರಿಷತ್‌ 51 ಕಾರ್‌ ರ‍್ಯಾಲಿಗಳನ್ನು ಆಯೋಜಿಸಿದೆ’ ಎಂದು ಪರಿಷತ್‌ನ ಅಚಲೇಶ್‌ ಅಮರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT