ಸಗಾಯಂಗ್: ಮ್ಯಾನ್ಮಾರ್ನಲ್ಲಿ ಕಳೆದ ವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,886ಕ್ಕೆ ಏರಿದೆ.

ಗಾಯಾಳುಗಳ ಸಂಖ್ಯೆ 4,639ಕ್ಕೆ ಏರಿದ್ದು, 373 ಮಂದಿ ನಾಪತ್ತೆಯಾಗಿದ್ದಾರೆ ಎಂದು ಬುಧವಾರ ದೂರದರ್ಶನ ವರದಿ ಮಾಡಿದೆ. ಭೂಕಂಪದಲ್ಲಿ ಬದುಕುಳಿದವರು, ನಿರಾಶ್ರಿತರಾದವರು ನೆರವಿಗಾಗಿ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ.

ಸೇನಾಡಳಿತದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದ ಬಂಡುಕೋರರ ಪ್ರಮುಖ ಸಶಸ್ತ್ರ ಗುಂಪುಗಳು ಯುದ್ಧದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿವೆ.

ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವ ಹೊತ್ತಲ್ಲೇ ಆಂತರಿಕ ಸಂಘರ್ಷಕ್ಕೆ ಇತಿಶ್ರೀ ಹೇಳುವಂತೆ ಸೇನಾಡಳಿತದ ಮೇಲೆ ಒತ್ತಡ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.