ವಾಷಿಂಗ್ಟನ್: ‘ಆರೋಗ್ಯ, ಔಷಧ ಕ್ಷೇತ್ರಗಳಲ್ಲಿನ ಆವಿಷ್ಕಾರ ಸೇರಿದಂತೆ ಜಾಗತಿಕ ಸವಾಲು ಎದುರಿಸಲು ಭಾರತ ಮತ್ತು ಅಮೆರಿಕ ಬಾಂಧವ್ಯ ಮಹತ್ವವಾದುದು’ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಜಗತ್ತಿನ ಆರೋಗ್ಯ ಭದ್ರತೆ ದೃಷ್ಟಿಯಿಂದ ಉಭಯ ದೇಶಗಳು ಎಲ್ಲ ಕ್ಷೇತ್ರಗಳಿಗೆ ಅನ್ವಯಿಸುವಂತೆ ಬಾಂಧವ್ಯ ಕಾಯ್ದುಕೊಳ್ಳುವುದು ಅಗತ್ಯವಾಗಿದೆ’ ಎಂದು ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ನಿರ್ದೇಶಕರ ಕಚೇರಿಯ (ಒಎನ್ಡಿಸಿಪಿ) ಹಿರಿಯ ಅಧಿಕಾರಿ ಡಾ.ರಾಹುಲ್ ಗುಪ್ತಾ ಅವರು ಅಭಿಪ್ರಾಯಪಟ್ಟರು.

‘ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಈ ದೇಶಗಳು ಒಟ್ಟಿಗೆ ಸಾಗುವುದರಿಂದ ಸಾಧ್ಯ’ ಎಂದರು. ಬೈಡನ್ ಆಡಳಿತಾವಧಿಯಲ್ಲಿ ಉನ್ನತ ಸ್ಥಾನದಲ್ಲಿದ್ದ ಭಾರತ ಮೂಲದ ಅಮೆರಿಕದ ಅಧಿಕಾರಿ ಇವರಾಗಿದ್ದಾರೆ.

ಭಿನ್ನ ಖಂಡಗಳ ಎರಡು ರಾಷ್ಟ್ರಗಳು ಪರಸ್ಪರ ಹತ್ತಿರವಾಗಲು ಹಾಗೂ ಅರ್ಥಮಾಡಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಉಭಯ ದೇಶಗಳ ನವಪೀಳಿಗೆಯ ಜನರು ಪ್ರಜಾಸತ್ತಾತ್ಮಕ ಕ್ರಮದಲ್ಲಿ ಕಾರ್ಯನಿರ್ವಹಿಸಲೂ ಸಹಕಾರಿ ಆಗಲಿದೆ ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಆಭಿಪ್ರಾಯಪ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.