ಮೇಸ್ ಅಲ್–ಜಬಲ್ (ಲೆಬನಾನ್): ಇಸ್ರೇಲ್ ಸೇನಾಪಡೆಗಳು ದಕ್ಷಿಣ ಲೆಬನಾನ್ನಿಂದ ಹೊರಹೋಗುವ ಗಡುವನ್ನು ಫೆಬ್ರುವರಿ 18ರವರೆಗೆ ವಿಸ್ತರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಶ್ವೇತಭವನ ತಿಳಿಸಿದೆ.

ಇಸ್ರೇಲ್– ಹಿಜ್ಬುಲ್ಲಾ ಬಂಡುಕೋರರ ನಡುವಿನ ಯುದ್ಧ ನಿಲ್ಲಿಸುವ ಸಂಬಂಧ ಕಳೆದ ನವೆಂಬರ್ ಅಂತ್ಯದಲ್ಲಿ ನಡೆದ ಕದನ ವಿರಾಮ ಒಪ್ಪಂದದಲ್ಲಿ ನಿಗದಿಪಡಿಸಿದ 60 ದಿನಗಳ ಗಡುವನ್ನು ವಿಸ್ತರಿಸುವಂತೆ ಇಸ್ರೇಲ್ ಸಲ್ಲಿಸಿದ ಮನವಿಗೆ ಸಮ್ಮತಿಸಲಾಗಿದೆ.

ಹಿಜ್ಬುಲ್ಲಾ ಬಂಡುಕೋರರು ತಮ್ಮ ನೆಲೆಯನ್ನು ಮತ್ತೆ ಸ್ಥಾಪಿಸಿಕೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳಲು ಲೆಬನಾನಿನ ಸೇನೆಯು ದಕ್ಷಿಣ ಲೆಬನಾನ್ನ ಎಲ್ಲ ಪ್ರದೇಶಗಳಿಗೆ ನಿಯೋಜನೆಗೊಳ್ಳದ ಕಾರಣ, ಇಸ್ರೇಲ್ ಸೇನೆ ಹೆಚ್ಚು ಕಾಲ ಉಳಿಯಬೇಕಿದೆ ಎಂದು ತಿಳಿಸಲಾಗಿದೆ.

ಇಸ್ರೇಲ್ ಪಡೆಗಳು ವಾಪಸ್ ಮರಳುವ ತನಕವೂ ಸೇನೆ ನಿಯೋಜಿಸಲು ಸಾಧ್ಯವಿಲ್ಲ ಎಂದು ಲೆಬನಾನ್ ಹೇಳಿದೆ.

ಲೆಬನಾನ್ ಮತ್ತು ಇಸ್ರೇಲ್ ನಡುವಿನ ಒಪ್ಪಂದವು 2025ರ ಫೆ.18ರವರೆಗೂ ಅಮೆರಿಕದ ಮೇಲುಸ್ತುವಾರಿಯಲ್ಲಿ ಚಾಲ್ತಿಯಲ್ಲಿರುತ್ತದೆ ಎಂದು ಶ್ವೇತಭವನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.