ಇಸ್ರೊದ ಉಪಗ್ರಹ ಉಡಾವಣಾ ವಾಹನ ಪಿಎಸ್ಎಲ್ವಿ–ಸಿ62ರ 64ನೇ ಉಡ್ಡಯನವು ಸೋಮವಾರ ವಿಫಲವಾಗಿರುವುದು ದೊಡ್ಡ ನಿರಾಶೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಆಗಿರುವ ಹಿನ್ನಡೆ. ಪಿಎಸ್ಎಲ್ವಿಯನ್ನು ಇಸ್ರೊದ ಅತ್ಯಂತ ಬಲಶಾಲಿ ಉಡಾವಣಾ ವಾಹನ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಸತತ ಎರಡು ವೈಫಲ್ಯಗಳಿಂದಾಗಿ ಅದರ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆಗಳು ಹುಟ್ಟುವಂತಾಗಿದೆ. ಪಿಎಸ್ಎಲ್ವಿ–ಸಿ62 ವಾಹನದಲ್ಲಿ ಒಂದು ಭೂ ಸರ್ವೇಕ್ಷಣಾ ಉಪಗ್ರಹ ಇಒಎಸ್–ಎನ್1 ಮತ್ತು ಇತರ 15 ಉಪಗ್ರಹಗಳಿದ್ದವು. ಅವುಗಳಲ್ಲಿ ಕೆಲವು ಸ್ಪೇನ್, ಬ್ರೆಜಿಲ್ ಮತ್ತು ನೇಪಾಳಕ್ಕೆ ಸೇರಿದ್ದಾಗಿದ್ದವು. ಡಿಆರ್ಡಿಒ ಅಭಿವೃದ್ಧಿಪಡಿಸಿದ್ದ ಇಒಎಸ್–ಎನ್1 ಅತ್ಯಾಧುನಿಕ ಕಣ್ಗಾವಲು ಸೇರಿದಂತೆ ನಾಗರಿಕ ಮತ್ತು ರಕ್ಷಣಾ ಉದ್ದೇಶವನ್ನು ಹೊಂದಿತ್ತು. ರಾಕೆಟ್ ಹಾದಿ ತಪ್ಪುವುದರೊಂದಿಗೆ ಈ ಎಲ್ಲ ಉಪಗ್ರಹಗಳು ನಷ್ಟವಾಗಿವೆ. 2025ರ ಮೇ ತಿಂಗಳಿನಲ್ಲಿಯೂ ಪಿಎಸ್ಎಲ್ವಿ–ಸಿ61 ವಿಫಲವಾಗಿತ್ತು. ಅದರಲ್ಲಿಯೂ ಭೂ ಸರ್ವೇಕ್ಷಣಾ ಉಪಗ್ರಹ ಇಒಎಸ್–09 ಇತ್ತು. ಅದೂ ನಷ್ಟವಾಗಿತ್ತು. ರಾಕೆಟ್ ಭೂ ಸಮೀಪದ ಕಕ್ಷೆಯನ್ನು ಪ್ರವೇಶಿಸುವಾಗ ಹಾರಾಟದ ಮೂರನೇ ಹಂತದಲ್ಲಿ ಕಾಣಿಸಿಕೊಂಡ ಸಮಸ್ಯೆಯ ಕಾರಣಕ್ಕೆ ಎರಡೂ ಯೋಜನೆಗಳು ವಿಫಲವಾಗಿವೆ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ಕಾಣಿಸಿಕೊಂಡ ಸಮಸ್ಯೆಗೆ ಪರಿಹಾರ ಕಂಡುಕೊಂಡ ಬಳಿಕ ಈ ವರ್ಷದ ಉಡ್ಡಯನ ನಡೆಸಬೇಕು ಎಂದು ನಿರೀಕ್ಷಿಸಲಾಗಿತ್ತು. ಎಂಜಿನ್ನ ಮೂರನೇ ಹಂತದಲ್ಲಿ ಇಂಧನ ದಹನ ಚೇಂಬರ್ನಲ್ಲಿ ಒತ್ತಡ ಕುಸಿತವಾಗಿದ್ದು ಕಳೆದ ವರ್ಷ ಉಂಟಾದ ವೈಫಲ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಬಾರಿ ಉಂಟಾದ ಸಮಸ್ಯೆ ಏನು ಎಂಬುದನ್ನು ನಿಖರವಾಗಿ ಕಂಡುಕೊಳ್ಳಲು ಸಮಯ ಬೇಕಾಗಬಹುದು. ಹಾರಾಟದ ಮೂರನೇ ಹಂತದಲ್ಲಿ ಎದುರಾದ ಅಡಚಣೆ ಏನು ಎಂಬುದನ್ನು ತಿಳಿದುಕೊಳ್ಳಲು ವಿವರವಾದ ವಿಶ್ಲೇಷಣೆ ಆರಂಭಿಸಲಾಗಿದೆ ಎಂದು ಇಸ್ರೊ ಹೇಳಿದೆ. ಇಸ್ರೊದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಅದರ ಪ್ರತಿಷ್ಠೆ, ವಾಣಿಜ್ಯ ಮತ್ತು ವೈಜ್ಞಾನಿಕ ಯೋಜನೆಗಳಿಗೆ ಸಂಬಂಧಿಸಿದ ಅಂಶಗಳು ಇರುತ್ತವೆ. ಪ್ರತಿ ಬಾರಿಯೂ ಎಂಜಿನಿಯರಿಂಗ್ ಯೋಚನೆಗಳು ಪರಿಷ್ಕರಣೆಗೊಳ್ಳುತ್ತವೆ ಮತ್ತು ಮೇಲ್ದರ್ಜೆಗೆ ಏರುತ್ತವೆ. ಇಸ್ರೊ ಈ ಹಿಂದೆಯೂ ತನ್ನ ವೈಫಲ್ಯಗಳಿಂದ ಪಾಠ ಕಲಿತುಕೊಂಡಿದೆ ಮತ್ತು ಮುಂದಿನ ವರ್ಷಗಳಲ್ಲಿ ಕಾರ್ಯಕ್ಷಮತೆಯನ್ನು ಉತ್ತಮಪಡಿಸಿಕೊಂಡಿದೆ. ಆದರೆ, ಈಗ ಮೇಲಿಂದ ಮೇಲೆ ಆಗಿರುವ ವೈಫಲ್ಯಗಳು ಸಂಸ್ಥೆಯ ಮೇಲಿದ್ದ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಹಾನಿ ಉಂಟು ಮಾಡುತ್ತವೆ. ಕಾರ್ಯಕ್ರಮಗಳ ಯಶಸ್ಸಿನ ದಾಖಲೆ ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಉಡ್ಡಯನ ಮಾಡುವ ಸಾಮರ್ಥ್ಯವೇ ಇಸ್ರೊಕ್ಕೆ ಖ್ಯಾತಿ ತಂದು ಕೊಟ್ಟಿರುವ ಅಂಶ. ಹಲವು ದೇಶಗಳು, ಸಂಘಟನೆಗಳು ಮತ್ತು ಖಾಸಗಿ ಕಂಪನಿಗಳು ವಿವಿಧ ಉದ್ದೇಶಗಳಿಗಾಗಿ ಬಾಹ್ಯಾಕಾಶ ಆವಿಷ್ಕಾರದ ಮೇಲೆ ಆಸಕ್ತಿ ಹೊಂದಿವೆ. ಬೇಡಿಕೆ ಹೆಚ್ಚು ಇದೆ ಮತ್ತು ಉಡ್ಡಯನ ಸಾಮರ್ಥ್ಯವು ಸೀಮಿತವಾಗಿದೆ. ಮಾರುಕಟ್ಟೆಯಲ್ಲಿ ಇಸ್ರೊ ತನ್ನ ಸ್ಥಾನ ಮತ್ತು ಇರುವ ಅವಕಾಶಗಳನ್ನು ಕಳೆದುಕೊಳ್ಳಬಾರದು. ವಿಫಲಗೊಂಡ ಉಡ್ಡಯನದಲ್ಲಿ ಕಳೆದುಹೋದ ಉಪಗ್ರಹಗಳನ್ನು ಮರಳಿ ಬಾಹ್ಯಾಕಾಶಕ್ಕೆ ಸೇರಿಸಲು ದೀರ್ಘ ಸಮಯ ಬೇಕಾಗುತ್ತದೆ. ಹಲವು ಉಪಗ್ರಹಗಳು ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಉದ್ದೇಶಗಳನ್ನು ಹೊಂದಿದ್ದವು. ಉಡ್ಡಯನದ ವೈಫಲ್ಯದಿಂದಾಗಿ ಈ ಎಲ್ಲ ಯೋಜನೆಗಳು ಏರುಪೇರಾಗುತ್ತವೆ.

ತಪ್ಪುಗಳನ್ನು ತಿದ್ದಿಕೊಳ್ಳಬಲ್ಲೆ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುವ ಹೊಣೆಗಾರಿಕೆ ಇಸ್ರೊ ಮೇಲೆ ಇದೆ. ಹಾಗೆಯೇ ತನ್ನ ಅತ್ಯಂತ ವಿಶ್ವಾಸಾರ್ಹ ಉಡ್ಡಯನ ವಾಹನದ ಸತತ ವೈಫಲ್ಯದಿಂದಾಗಿ ಮೂಡಿರುವ ಸಂದೇಹಗಳನ್ನೂ ನಿವಾರಿಸಬೇಕಿದೆ. ಇಸ್ರೊದ ಮುಂದೆ ಈಗ ಅತ್ಯಂತ ಮಹತ್ವಾಕಾಂಕ್ಷಿಯಾದ ಗಗನಯಾನ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಯಂತಹ ಕಾರ್ಯಕ್ರಮಗಳು ಇವೆ. ಇಸ್ರೊದ ಈವರೆಗಿನ 105 ಉಡಾವಣೆಗಳ ಪೈಕಿ 64ರಲ್ಲಿ ಪಿಎಸ್ಎಲ್ವಿ ವಾಹನ ಬಳಕೆಯಾಗಿದೆ. ನಾಲ್ಕು ಉಡ್ಡಯನಗಳು ಮಾತ್ರ ವಿಫಲವಾಗಿವೆ. ಆದರೆ, ಯಶಸ್ಸನ್ನು ನಾವು ಉಪೇಕ್ಷಿಸಬಹುದು, ವೈಫಲ್ಯಗಳ ಸಂದರ್ಭದಲ್ಲಿ ಸಮಗ್ರವಾದ ವಿಮರ್ಶಾತ್ಮಕವಾದ ಪರಿಶೋಧನೆ ಅನಿವಾರ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.