ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಅವರು ದಿಢೀರನೆ ರಾಜೀನಾಮೆ ಸಲ್ಲಿಸಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಆದರೆ, ಯಾವ ಪ್ರಶ್ನೆಗೂ ಈವರೆಗೆ ಉತ್ತರ ಸಿಕ್ಕಿಲ್ಲ. ಧನಕರ್ ಅವರ ರಾಜೀನಾಮೆ ನಂತರದ ಊಹಾಪೋಹಗಳು ದೇಶದ ಎರಡನೆಯ ಅತ್ಯಂತ ಎತ್ತರದ ಸಾಂವಿಧಾನಿಕ ಹುದ್ದೆಯ ವರ್ಚಸ್ಸನ್ನು ಹೆಚ್ಚಿಸುವಂತೇನೂ ಇಲ್ಲ. ಧನಕರ್ ಅವರ ಅನಿರೀಕ್ಷಿತ ರಾಜೀನಾಮೆಗೆ ಕಾರಣಗಳು ಏನಿರಬಹುದು ಎಂಬ ಬಗ್ಗೆ, ಸರ್ಕಾರ ಮತ್ತು ಉಪ ರಾಷ್ಟ್ರಪತಿಯ ಕಚೇರಿ ನಡುವಣ ಸಂಬಂಧ ಹಾಗೂ ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಈ ಸ್ಥಾನಕ್ಕೆ ಇರುವ ಸ್ವಾಯತ್ತತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಉಪ ರಾಷ್ಟ್ರಪತಿಯವರು ರಾಜ್ಯಸಭೆಯ ಸಭಾಪತಿ ಕೂಡ ಆಗಿರುತ್ತಾರೆ. ಆರೋಗ್ಯದ ಕಾಳಜಿಗೆ ಆದ್ಯತೆ ನೀಡಬೇಕಿದೆ, ವೈದ್ಯಕೀಯ ಸಲಹೆಯ ಪ್ರಕಾರ ನಡೆದುಕೊಳ್ಳಬೇಕಿದೆ ಎಂದು ಧನಕರ್ ಅವರು ಹೇಳಿದ್ದಾರೆ. ಆದರೆ, ಮುಂಗಾರು ಅಧಿವೇಶನದ ಮೊದಲ ದಿನವೇ ಅವರು ರಾಜೀನಾಮೆ ನೀಡಿರುವುದು, ತೆರೆಯ ಹಿಂದೆ ಇನ್ನಷ್ಟು ಸಂಗತಿಗಳು ಇದ್ದಿರಬಹುದು ಎಂಬುದನ್ನು ಹೇಳುತ್ತಿದೆ. ಉಪ ರಾಷ್ಟ್ರಪತಿ ಆಗಿ ಧನಕರ್ ಅವರ ಅಧಿಕಾರದ ಅವಧಿ ಇನ್ನೂ ಎರಡು ವರ್ಷ ಇತ್ತು. 2027ರ ಆಗಸ್ಟ್ನಲ್ಲಿ ‘ಸರಿಯಾದ ಸಮಯದಲ್ಲಿ’ ನಿವೃತ್ತ ರಾಗುವುದಾಗಿ ಧನಕರ್ ಅವರು ಈಚೆಗೆ ಹೇಳಿದ್ದರು. ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ, ಕೆಲವು ದಿನಗಳವರೆಗಿನ ಅವರ ಸಾರ್ವಜನಿಕ ಕಾರ್ಯಕ್ರಮ ಗಳ ಮತ್ತು ಸದನದಲ್ಲಿನ ಕಾರ್ಯಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು
ಎನ್ನುವುದು ಗಮನಾರ್ಹ.
.ಸಂಪಾದಕೀಯ Podcast | ಧನಕರ್ ದಿಢೀರ್ ರಾಜೀನಾಮೆ; ಪ್ರಶ್ನೆಗಳು ಹಲವು, ಕಾರಣ ನಿಗೂಢ.
ವಿಶ್ವಾಸಾರ್ಹವಾದ ವಿವರಣೆ ಇಲ್ಲದಿರುವ ಈ ಹೊತ್ತಿನಲ್ಲಿ ಧನಕರ್ ರಾಜೀನಾಮೆ ಕುರಿತಾಗಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ನ್ಯಾಯಮೂರ್ತಿಗಳಾದ ಯಶವಂತ ವರ್ಮಾ ಮತ್ತು ಶೇಖರ್ ಕುಮಾರ್ ಯಾದವ್ ಅವರ ಪದಚ್ಯುತಿಗೆ ಸಂಬಂಧಿಸಿದ ವಿಷಯವನ್ನು ಧನಕರ್ ಅವರು ನಿಭಾಯಿಸಿದ ಬಗೆಯು ಕೇಂದ್ರ ಸರ್ಕಾರಕ್ಕೆ ಸಮಾಧಾನ ತಂದಿರಲಿಲ್ಲ ಎಂಬ ಮಾತುಗಳಿವೆ. ಅಲ್ಲದೆ, ಧನಕರ್ ಅವರು ಸಾರ್ವಜನಿಕವಾಗಿ ಆಡಿದ ಕೆಲವು ಮಾತುಗಳು ಕೂಡ ಸರ್ಕಾರಕ್ಕೆ ಸರಿಕಂಡಿರ
ಲಿಲ್ಲ ಎಂಬ ವಾದ ಇದೆ. ಧನಕರ್ ಅವರ ಆರೋಗ್ಯ ಚೆನ್ನಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. ಇದನ್ನು ಹೊರತುಪಡಿಸಿದರೆ, ಸರ್ಕಾರದ ಕಡೆಯಿಂದಾಗಲೀ ಆಡಳಿತಾರೂಢ ಪಕ್ಷದ ಕಡೆಯಿಂದಾಗಲೀ ಯಾವುದೇ ವಿವರಣೆ ಈವರೆಗೆ ಬಂದಿಲ್ಲ.

ಪಶ್ಚಿಮ ಬಂಗಾಳದ ರಾಜ್ಯಪಾಲ ಆಗಿದ್ದಾಗ ಧನಕರ್ ಅವರು ಹಲವು ವಿವಾದಗಳನ್ನು ಸೃಷ್ಟಿಸಿದ್ದರು. ರಾಜ್ಯಸಭೆಯ ಸಭಾಪತಿಯಾಗಿ ಅವರು ಇರಿಸಿದ ಕೆಲವು ನಡೆಗಳು ವಿವಾದಕ್ಕೆ ಕಾರಣವಾಗಿದ್ದವು. ಈ ಹುದ್ದೆಗಳಲ್ಲಿ ಇದ್ದಾಗ ಧನಕರ್ ಅವರು ಆಳುವ ಪಕ್ಷದ ಪರವಾಗಿ ನಡೆದುಕೊಂಡಿದ್ದರು ಹಾಗೂ ತಾವು ಹೊಂದಿದ್ದ ಹುದ್ದೆಗಳ ಹಿರಿಮೆಗೆ ತಕ್ಕಂತೆ ಅವರು ವರ್ತಿಸಿರಲಿಲ್ಲ. ವಿರೋಧ ಪಕ್ಷಗಳು ಸಭಾಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಧನಕರ್ ವಿರುದ್ಧ ಮಾತ್ರ. ನ್ಯಾಯಾಂಗವನ್ನು ಗುರಿಯಾಗಿಸಿಕೊಂಡು ಅವರು ನಡೆಸುತ್ತಿದ್ದ ಮಾತಿನ ಆಕ್ರಮಣ, ಪ್ರಮುಖ ತೀರ್ಪುಗಳನ್ನು ಅವರು ಟೀಕಿಸು
ತ್ತಿದ್ದುದು, ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆಯನ್ನು ಅವರು ಪ್ರಶ್ನೆ ಮಾಡುತ್ತಿದ್ದ ಬಗೆಯು ಸಾಂವಿಧಾನಿಕವಾಗಿ ಬಹಳ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಸರಿಹೊಂದುವ ರೀತಿಯಲ್ಲಿ ಇರುತ್ತಿರಲಿಲ್ಲ. ಧನಕರ್ ಅವರ ಕೆಲವು ಹೇಳಿಕೆಗಳು ಆಡಳಿತಾರೂಢ ಪಕ್ಷದ ಕಟ್ಟರ್ವಾದಿಗಳು ಆಡುವ ಮಾತುಗಳಿಗಿಂತ ಹೆಚ್ಚು ಕಟುವಾಗಿದ್ದವು. ಸರ್ಕಾರ ಮತ್ತು ಧನಕರ್ ಅವರ ನಡುವಿನ ಸಂಬಂಧವು ಕೆಲವು ತಿಂಗಳುಗಳ ಹಿಂದೆಯೇ ಹಾಳಾಗಲು ಆರಂಭಿಸಿತು ಎಂಬ ವರದಿಗಳು ಇವೆ. ಈ ಎಲ್ಲ ಸಂಗತಿಗಳು ನಿಗೂಢವಾಗಿ ಉಳಿದಿರುವುದು ವಿಷಾದಕರ. ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ್ದರ ಹಿಂದಿನ ಕಾರಣಗಳನ್ನು ಹಾಗೂ ರಾಜೀನಾಮೆ ನೀಡಿದ ಸಂದರ್ಭವನ್ನು ಅರಿಯುವ ಹಕ್ಕು ದೇಶಕ್ಕೆ ಇದೆ. ಆ ಕಾರಣಗಳು ವೈಯಕ್ತಿಕವೇ, ರಾಜಕಾರಣಕ್ಕೆ ಸಂಬಂಧಿಸಿದವೇ ಅಥವಾ ಅವರ ಮೇಲಿದ್ದ ಹೊಣೆಗೆ ಸಂಬಂಧಿಸಿದವೇ ಎಂಬುದನ್ನು ದೇಶವಾಸಿಗಳು ತಿಳಿದುಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.