ಬ್ರಿಸ್ಬೇನ್: ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿ ಟಿ20 ಸರಣಿಯನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ವನಿತೆಯರ ತಂಡವು ಮಂಗಳವಾರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡವನ್ನು ಎದುರಿಸಲಿದೆ.

ಹರ್ಮನ್ಪ್ರೀತ್ ಕೌರ್ ಪಡೆಯು ನವೆಂಬರ್ನಲ್ಲಿ ಐಸಿಸಿ ವಿಶ್ವಕಪ್ ಮುಡಿಗೇರಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಏಕದಿನ ಪಂದ್ಯ ಆಡಲು ಕಣಕ್ಕಿಳಿಯಲಿದೆ. ನವಿಮುಂಬೈನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ನ ರೋಚಕ ಹಣಾಹಣಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು ಐದು ವಿಕೆಟ್ಗಳಿಂದ ಮಣಿಸಿತ್ತು. ಇದೀಗ ಅತಿಥೇಯರು ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದ್ದಾರೆ.

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾದ ಅಲಿಸಾ ಹೀಲಿ ಅವರು ಈ ಸರಣಿಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. 35 ವರ್ಷದ ಹೀಲಿ ಅವರೇ ಆತಿಥೇಯ ತಂಡವನ್ನು ಮುನ್ನಡೆಸಲಿದ್ದು, ಹೀಗಾಗಿ ಸರಣಿ ಇನ್ನಷ್ಟು ಮಹತ್ವ ಪಡೆದಿದೆ. ಮಾರ್ಚ್ 6ರಂದು ಪರ್ತ್ನಲ್ಲಿ ಆರಂಭವಾಗುವ ಟೆಸ್ಟ್ ಪಂದ್ಯವು ಅವರಿಗೆ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ.

ಅಡಿಲೇಡ್ನಲ್ಲಿ ಶನಿವಾರ ನಡೆದ ಕೊನೆಯ ಟಿ20 ಪಂದ್ಯವನ್ನು 17 ರನ್ಗಳಿಂದ ಗೆದ್ದ ಭಾರತ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ವಶಮಾಡಿಕೊಂಡಿತ್ತು. 2017ರ ನಂತರ ಆಸ್ಟ್ರೇಲಿಯಾ ತಂಡಕ್ಕೆ ದ್ವಿಪಕ್ಷೀಯ ಸರಣಿಯಲ್ಲಿ ಮೊದಲ ಸೋಲು ಅದಾಗಿತ್ತು.

ಮೂರನೇ ಟಿ20 ಪಂದ್ಯದಲ್ಲಿ 82 ರನ್ ಗಳಿಸಿ ಗೆಲುವಿನ ರೂವಾರಿಯಾಗಿದ್ದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಭಾರತದ ಬ್ಯಾಟಿಂಗ್ನಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 127 ರನ್ ಗಳಿಸಿದ್ದ ಜೆಮಿಮಾ ರಾಡ್ರಿಗಸ್ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ. ಅವರು ನಿರ್ಣಾಯಕ ಟಿ20 ಪಂದ್ಯದಲ್ಲೂ 59 ರನ್ಗಳ ಅಮೂಲ್ಯ ಕೊಡುಗೆ ನೀಡಿದ್ದರು.

ಭಾರತ ತಂಡದಲ್ಲಿ ಅರುಂಧತಿ ರೆಡ್ಡಿ, ಭಾರತಿ ಫುಲ್ಮಾಲಿ ಮತ್ತು ಶ್ರೇಯಾಂಕಾ ಪಾಟೀಲ್ ಬದಲು ಕಶ್ವಿ ಗೌತಮ್, ಹರ್ಲೀನ್ ಡಿಯೋಲ್ ಮತ್ತು ಪ್ರತಿಕಾ ರಾವಲ್ ಸ್ಥಾನ ಪಡೆಯಲಿದ್ದಾರೆ. ಪಾದದ ಗಾಯದಿಂದ ಚೇತರಿಸಿಕೊಂಡ ನಂತರ ಪ್ರತೀಕಾ ಅವರು ಏಕದಿನ ತಂಡಕ್ಕೆ ಮರಳಿದ್ದಾರೆ. ಇನ್ನೊಂದೆಡೆ ಟಿ20 ಸರಣಿಯಿಂದ ಹೊರಬಿದ್ದಿದ್ದ ಸ್ಟಾರ್ ಲೆಗ್ ಸ್ಪಿನ್ನರ್ ಅಲನಾ ಕಿಂಗ್ ಅವರು ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡಕ್ಕೆ ಮರಳುತ್ತಿದ್ದಾರೆ.

ಏಕದಿನ ಸರಣಿಯ ಇತರ ಎರಡು ಪಂದ್ಯಗಳು ಫೆ.27 ಮತ್ತು ಮಾರ್ಚ್ 1ರಂದು ಹೋಬಾರ್ಟ್ನಲ್ಲಿ ನಡೆಯಲಿವೆ. ಬಹು ಸ್ವರೂಪದ ಸರಣಿಯ ಟ್ರೋಫಿಯನ್ನು ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪ್ರತಿ ಟಿ20 ಮತ್ತು ಏಕದಿನ ಪಂದ್ಯಗಳ ಗೆಲುವಿಗೆ ತಲಾ2 ಅಂಕ ಮತ್ತು ಟೆಸ್ಟ್ ಪಂದ್ಯದ ಗೆಲುವಿಗೆ 4 ಅಂಕಗಳು ಸಿಗಲಿದೆ. ಪ್ರಸ್ತುತ ಭಾರತ 4-2 ಮುನ್ನಡೆಯಲ್ಲಿದೆ.

ಪಂದ್ಯ ಆರಂಭ: 9.20

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೊ ಹಾಟ್ಸ್ಟಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.